Home / ಅವಧ

Browsing Tag: ಅವಧ

ಉತ್ತು ಹೊಡೆಮರಳಿದ ಮಣ್ಣಿಗೆ ಹೆಣ್ಣಿನ ಮುಖ ಬೆಳೆದ ಪೈರಿನ ಬಯಲಿಗೆ ಬಸುರಿಯ ಮುಖ ಗ್ರೀಷ್ಮದಲ್ಲಿ ಭೂಮಿಗೆ ವೃದ್ಧೆಯ ಮುಖ ಮಳೆ ಬಂದ ಪ್ರಕೃತಿಗೆ ಮತ್ತೆ ಹುಟ್ಟಿದ ಸುಖ ಕಾಣಿಸಿತಲ್ಲ ಇದೆಲ್ಲ ಒಮ್ಮೊಮ್ಮೆ ನೇರ ಒಮ್ಮೊಮ್ಮೆ ಊರ ಕೆರೆಯಲ್ಲಿ ಬಿದ್ದು ಕೆರೆ...

ರಾಜಮಾರ್ಗಗಳಿರುವುದು ವೇಗವಾದ ವಾಹನಗಳಿಗೆ ಒಳಮಾರ್ಗಗಳಿರುವುದು ಎತ್ತಿನ ಗಾಡಿಗಳಿಗೆ ನಗ್ನಪಾದಗಳಿಗೆ ರಾಜಮಾರ್ಗಗಳು ರಾಜಕೀಯ ಕೆಲಸಗಾರರಿಗೆ ಒಳಮಾರ್ಗಗಳು ಅ-ರಾಜಕೀಯರಾದ ಜನಗಳಿಗೆ ಬಹು ಉದ್ದೇಶಪೂರ್ಣವಾದುವು ರಾಜಮಾರ್ಗಗಳು ಉದ್ದೇಶರಹಿತವಾಗಿ ಬಿದ್ದಿರ...

ಹೆಸರು ಪರಪುಂಜನ ಪರಕಾಯ ಪ್ರವೇಶ ಹಿಂದೆ ಅಂಥ ಹೆಸರಿನ ಒಬ್ಬ ರಾಜ ದೇಶ ಸಂಚಾರ ಮಾಡಬೇಕೆಂದು ನಿರ್ಧರಿಸಿ ನಿಜ ದೇಹವನ್ನು ತನ್ನ ಆಪ್ತ ಮಿತ್ರ ವಿದೂಷಕನ ಕೈಗೊಪ್ಪಿಸಿ ಆಗ ತಾನೇ ಸತ್ತ ಅಲೆಮಾರಿ ಸನ್ಯಾಸಿಯೊಬ್ಬನ ದೇಹವನ್ನು ಸೇರುವನು. ವಿದೂಷಕನೊ ಎಲ್ಲ ವ...

ತಾವರೆಯಿಲ್ಲ ತಾವರೆಯ ಎಲೆಯಿಲ್ಲ ಬೀಳುವ ಹೂವಿಲ್ಲ ಹೂಬಿಡುವ ಮರವಿಲ್ಲ ದಾಟಿಸುವ ಅಂಬಿಗನಿಲ್ಲ ಕಾದು ನಿಂತ ದೊಣಿಯಿಲ್ಲ ಆಕಾಶದಲ್ಲಿ ಚಂದ್ರನಿಲ್ಲ ನಕ್ಷತ್ರಗಳಿಲ್ಲ ಬೀಸುವ ಗಾಳಿಯಲ್ಲಿ ಹಾಡುವ ಹಕ್ಕಿಗಳಿಲ್ಲ ಪಾದ ತೊಳೆವ ಅಲೆಗಳಲ್ಲಿ ಮುತ್ತಿಡುವ ಮೀನುಗ...

ಬೇಂಡು ವಾದ್ಯಗಳು ನಿಂತು ದೀಪಗಳು ಆರಿ ಊರವರು ಅವರವರ ಮನೆಗಳಿಗೆ ತೆರಳಿ ಆನೆ ಕುದುರೆಗಳನ್ನು ಲಾಯದಲಿ ಕಟ್ಟಿ ಇಡಿಯ ಜಗತ್ತೇ ಮಲಗಿರುವ ಸಮಯ ಅದು ಬಫೂನನ ಸಮಯ ಕೆಂಪು ಮಣ್ಣಿನ ಗೆರೆಗಳು ಬಿಳಿಯ ಸುಣ್ಣದ ಬೊಟ್ಟುಗಳು ಇನ್ನೂ ಮಾಸಿಲ್ಲ ಮೂಗಿನ ಮೇಲೆ ಮೊಂಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....