
ಹನುಮಂತ ಭೂಪಾ ಸದ್ಗುಣಮಣಿ ಶಾಂತರೂಪಾ || ಪ || ಹನುಮಂತ ಮಹಾಮುನೀಶ ವಾಯು ತನಯ ವಾನರೇಂದ್ರ ವನಚರ ಶುಭಕಿರಣ ವಿಹಾರನು ಮಹಿಮಾಗಾರಾ ಅಂಜನೀಕುಮಾರಾ ಸುಜನೋದ್ದಾರಾ ಕುಜನೋತ್ಪಾಲನಾ ಹೋ ಭಕ್ತಪ್ರಾಣ ಪಂಚಪ್ರಾಣಾ ನಮಸ್ತುತೆ ಕ್ಷೋಣಿಪಾಲ ರಘುಚರಣ ಸೇವಕಾ ಕಪಿ...
ಬಸವೇಶ್ವರನ ಒಂದು ಪಾದವ ರುದ್ರ ಪಿಡಿದನು ಬಸವೇಶ್ವರನ ಒಂದು ಪಾದವ ವಿಷ್ಣು ಪಿಡಿದನು ಬಸವೇಶ್ವರನ ಒಂದು ಪಾದವ ತೆತ್ತೀಸಕೋಟಿ ದೇವತೆಗಳು ಪಿಡಿದರು ಬಸವೇಶ್ವರನೇ ಸಕಲ ಜಗವನು ನಾಲ್ಕುಯುಗದಿ ಸಲಹುವನು ನಂದಿ ಜಯ ಜಯ ಎನುತಲಿಪ್ಪರು ಗಂಗಾ ಪಾರ್ವತಾದೇವಿಯರ...
ತಾಳಲಾರೆ ತಗಣಿಕಾಟವಾ ಶಿವಹರನು ಬಲ್ಲ ತಾಳಲಾರೆ ತಗಣಿಕಾಟವಾ ||ಪ|| ತಾಳಲಾರೆ ತಗಣಿಕಾಟಾ ಘನಘೋರ ಇದರಾರ‍್ಭಾಟ ಮಾಳಗಿ ಮನಿಯ ಜಂತಿ ಸೇರಿ ಗೋಳುಮಾಡಿ ಬಿಟ್ಟವಣ್ಣಾ ||ಅ.ಪ.|| ಮೈಯ ಮೇಲೆ ಬಿದ್ದರ ತಿಂಡಿ ಹಚ್ಚಿದಂತೆ ಪುಂಡಿ ಮಾಯದೇಹ ರಕ್ತದ ಉಂಡಿ ಗಾಯ ಮ...
ಚೋಳ ಕಡಿತು ನನಗೊಂದು ಚೋಳ ಕಡಿತು ಕಾಳಕತ್ತಲದೊಳಗ ಕೂತಿತ್ತು ನನಕಂಡು ಬಂತು || ಪ || ಎಷ್ಟು ದಿನದ ಸಿಟ್ಟು ಇಟ್ಟಿತ್ತು ತೀರಿಸಿಬಿಟ್ಟಿತು ಯಾರಿಗೆ ಹೇಳಿದರ ಏನ ಆದೀತು ಗುರುತಾತು ಈ ಮಾತು ಹುಟ್ಟಿದ ಮಗಳು ಕಂಡಿದ್ಧಿಲ್ಲ ಇದರ ಕಷ್ಟ ಶಿವನೇ ಬಲ್ಲ ಘಟ್...
ಹಾವು ಕಂಡಿರೇನಮ್ಮಯ್ಯಾ ಈ ಸ್ವಾಮಿಯೊಳು ಹಾವು ಕಂಡಿರೇನಮ್ಮಯ್ಯಾ ||ಪ|| ಹಾವು ಕಂಡರ ಎನ್ನ ಜೀವವು ಕು೦ದಿತು ತನ್ನ ಮಂಡಲಗಟ್ಟಿ ಮಾಯವಾದಿತು ಗುಂಡೇಲಿಂಗನ ಗುಡಿಯ ಮುಂದ || ಆ. ಪ. || ಹಂಡಬಣ್ಣದ ಹಾವು ಕಂಡಾಕ್ಷಣಕ್ಕೆ ಬಂಡಿಗೆಬ್ಬಿಸಿತು ಮನವು ಪಿ೦ಡದೇ...
ಹಾವು ತುಳಿದೆನೇ ಮಾನಿನಿ ಹಾವು ತುಳಿದೆನೇ ||ಪ|| ಹಾವು ತುಳಿದು ಹಾರಿ ನಿಂತೆ ಜೀವ ಕಳವಳಿಸಿತು ಗೆಳತಿ ದೇಹತ್ರಯದ ಸ್ಮೃತಿಯು ತಪ್ಪಿ ದೇವಾ ನೀನೆ ಗತಿಯು ಎಂದು ||೧|| ಹರಿಗೆ ಹಾಸಿಗೆಯಾದ ಹಾವು ಹರನ ತೋಳಿನೊಳಿರುವ ಹಾವು ಧರೆಯ ಹೊತ್ತು ಮೆರೆವ ಹಾವಿನ...
ನೋಡಿದ್ಯಾ ಕಪ್ಪಿ ನೋಡಿದ್ಯಾ ಕೂಡಿ ಜೋಡಿಲೆ ಮೇಲೊಂದಡರಿಕೊಂಡಾಡ್ವದು ||ಪ|| ಗುಳಿ ಗುಳಿ ಧ್ವನಿಯಿಂದ ಸುಳಿದಾಡುವ ಕಪ್ಪಿ ಇಳಿ ಜನರಿಗೆ ಭಯಪಡಿಸುವ ಕಪ್ಪಿ ಹೊಳೆಯು ಶರಧಿ ಸಣ್ಣಹಳ್ಳಕೊಳ್ಳದೊಳಗಿರು ಮಳಿಗಾಲ ತರಸುವ ಮೋಜಿನ ಕಪ್ಪಿ ||೧|| ಶಿವನ ತೊಡಿಯ ಕ...
ಎಷ್ಟು ಕಾಡುವವು ಕಬ್ಬಕ್ಕಿ ಹೊಲದೊಳಿರುವನು ಒಬ್ಬಾ || ಪ|| ಆಕಡಿಯಿಂದ ಬಂದಾವು ಮೂರಹಕ್ಕಿ ಅವನ್ನ ಕಾದು ಕಾದು ನನಗೆ ಬೇಸರಕಿ ||೧|| ಕಬ್ಬಕ್ಕಿ ಬರತಾವ ಸರಬೆರಕಿ ಕವಣಿ ಬೀಸಿ ಬೀಸಿ ಬಂತೆನಗೆ ಬೇಸರಕಿ ||೨|| ಆರು ಮೂರು ಒಂಭತ್ತು ಹಕ್ಕಿ ಬಹಳ ಬೆರ್ಕಿ...
ಪಾರಿವಾಳದ ಆಟ ಛಂದಾ ಅದು ಹಾರುತ ಬಂದರೆ ಮನಸಿಗಾನಂದ ||ಪ|| ಹಿಂದಿನ ರೆಕ್ಕೆಯ ಕಿತ್ತು ಮುಂದೆ ಬರುವಂಥ ಪುಚ್ಚದ ಗರಿಗಳ್ಯಾವತ್ತು ಸಂದಿ ಸಂದಿಗೆ ಶುಭವಿತ್ತು ಆದು ಕಂದಿ ಕುಂದದಾಂಗ ಸಲುಹಲು ಗೊತ್ತು ||೧|| ಮ್ಯಾಲಕ್ಕ ಹೊಡಿ ಮೂರು ಲಾಗಾ ಸಾಲು ತೇಲುವ ...
ಕೋಳಿಯೇ ನೀನು ಕೋಳಿಯೇ ಹೀಂಗ ಹಾಳುಮಾಡುದು ಕಂಡು ತಾಳಲಾರದು ಮನ |ಪ| ಅಚ್ಚ ಹಸರು ಕೆಂಪುಪುಚ್ಚದ ಕೋಳಿ ಅಚ್ಯುತಗೆಚ್ಚರ ಕೊಟ್ಟಂಥ ಕೋಳಿ ಹೆಚ್ಚಿನ ಬ್ರಹ್ಮನು ಮೆಚ್ಚಿದ ಕೋಳಿ ಹುಚ್ಚೆದ್ದು ರುದ್ರನ ಕಚ್ಚಿದ ಕೋಳಿ |೧| ಬಲ್ಲಿದ ಯಜ್ಞಕ್...














