
ಒಲವಿನ ಕಡಲೆಂದು ಭಾವಿಸಿ ಸಾಕಷ್ಟು ಸುಖಿಸಿ ಅವಳು ನಿದ್ರಿಸುತ್ತಿದ್ದಾಳೆ ಅವನ ಮಡಿಲಲ್ಲಿ *****...
ಗುಲಾಬಿ ಮುಡಿದಿದ್ದಾಳೆ ನನ್ನ ಗೆಳತಿ ನೆನಪಿನ ಮುಳ್ಳು ಕಿತ್ತು ವಾಸ್ತವದ ಹೊರೆಯ ಹೊತ್ತು *****...
ಅದು ಪ್ರೀತಿಯಲ್ಲ ಸಲುಗೆಯೂ ಅಲ್ಲ ಆದರೂ ಅವಳು ಅವನನ್ನು ಆರಾಧಿಸುತ್ತಾಳೆ; ಹೆಸರಿಡದ ಸಂಬಂಧದ ಹುಡುಕಾಟದಲ್ಲಿ… *****...
ನಿನ್ನ ಗೈರು ಹಾಜರಿ ಮನದ ಗುಜರಿಯಲ್ಲಿ ಗೆದ್ದಲು ತಿನ್ನುತ್ತ ಬಿದ್ದಿದ್ದ ನೆನಪಿನ ಬುತ್ತಿ ಹೆಕ್ಕಿ ತಂದಿದೆ *****...
ಅವಳ ಕೆನ್ನೆಗೆ ನಗು ಬಳಿದು ಹೋದ ಅವನ ಮುಗ್ಧತೆ ಇದೀಗ ಬದುಕಿನ ಸಂತೆಯಲ್ಲಿ ಬೆಲೆ ಕಳೆದುಕೊಂಡಿದೆ. *****...
ನಿನ್ನ ದುಗುಡದ ಒಡಲಿಗೆ ನಲಿವು ಸುರಿಯುವ ಕಾಲ ಇಲ್ಲೇ ಎಲ್ಲೋ ಕಾಲು ಚಾಚಿಕೊಂಡು ಮಲಗಿದೆ *****...
ಕನಸಿನ ಹುಡುಗಿ ಬೆಳ್ಳಂಬೆಳಗ್ಗೆ ಕಣ್ಣಿಟ್ಟಳು… ನನ್ನೊಡಲಲ್ಲಿ ಸೂರ್ಯೋದಯ *****...
ಅವನ ಸಿಗರೇಟು ಸುಡುವ ಚಟ ಬಿಡಿಸಲು ಉಪವಾಸ ಕೂತ ಇವಳ ಕನಸಿನಂಗಡಿ ತುಂಬ ಖಾಲಿ ಪ್ಯಾಕುಗಳು, ಬಿಕರಿಯಾಗದ ಕನಸುಗಳ ಬಿಂಬಗಳು. *****...
ಅಪರಿಚಿತ ಹಾದಿಯ ನಡುವಲ್ಲಿ ಸಿಕ್ಕ ಬದುಕು ಅವಳು ನನಗಷ್ಟೇ ಪರಿಚಿತ *****...
ಸಾಯಬೇಕೆಂದುಕೊಳ್ಳೋಣವೆಂದರೆ ನೆಪಗಳೆ ಸಿಗುತ್ತಿಲ್ಲ; ಅವಳು ಜಿಗುಪ್ಸೆಯ ಕೊರಳಿಗೆ ಕುಣಿಕೆ ಬಿಗಿದಿದ್ದಾಳೆ. *****...













