ಹಿತೋಕ್ತಿಗಳು

ಕಾಲು ತಾಗಿದ ಮುಳ್ಳು ; ಮೈಯಲ್ಲ ಮುರಿಯುವದು | ಕಾಯ ತಾಗಿದ ಮುನಿಸು; ಮನವೆಲ್ಲ ಮೆಲ್ಲುವದು || ಇಂದಿಲ್ಲ ನಾಳಿಲ್ಲ ಎಂಬೊಂದು ಕುಂದಿಲ್ಲ | ಭವಹರನ ನೆನೆದೊಡೆ ಎಂದೆಂದು ಭಯವಿಲ್ಲ || ಹಾ ತಡೆ...

ಗುಬ್ಬಿ

ಪುಟ್ಟ ಹೃದಯನಾದೊಡೆ ಏನು? ಹರುಷ ಹೊನಲು! ವಿರಸವರಿಯದ ಸರಸ ಸೊಗಸು ಏನು? ನಿಮ್ಮ ಜೀವನರಾಗ ಎನಗಿಂತ ಬಲು ಮಿಗಿಲು ಸುಖಜನ್ಮ ಸಾರ್ಥಕತೆ ನಿಮಗೆ ಏನು? ಸರ್ರೆಂದು ಬುರ್ರೆಂದು ಹಾರುವಿರಿ! ಎಲ್ಲಿಗೋ ? ಆಚೆಯಾ ಗಿಡದ...

ಕಾಣಲಿ ಜೀವನ

ಒಸರಿ ಕೊಸರಿ ಕಸುವಿನಿಂದ ಹಾರಲೆನ್ನ ಜೀವನ ಕಸಕು ಮಸಕು ದೂರ ಸರಿಸಿ ಅಳಿಯಲೆನ್ನ ಬಂಧನ ಸತ್ಯಸುಧೆಯ ಉಸಿರಿನಿಂದ ಕಾಣಲೆನಗೆ ಮುಂದನ ಶ್ರೀಯ ಮೋಹ, ಶ್ರೇಯ ದಾಹ ಅಳಿಯಲದೇ ನಂದನ ರಕ್ತ ಉಕ್ಕಿ, ಶಕ್ತಿ ಮಿಕ್ಕಿ...

ಕೆಂಡದ ಚಂಡು!

ಚಿಗುರಿದಾ ಹುಲ್ಲಲ್ಲಿ; ಚಲುವಿನಾ ಓಟದಲಿ ಆಡುತಲಿ ಸುಳಿಸುಳಿವ ಓ ನಿಲ್ಲು ಹಾವೇ ! ನಿನ್ನ ಅಂದವೇನು ಬಣ್ಣ ಮಿಂಚುವ ನಿಲವಿನಲಿ ವಿಷಹೊತ್ತ ಹೆಡೆಯೇ ನಿನ್ನ ಗೆಲುವಿನ ಠೀವೆ! ತಡೆ ಇನ್ನೂ ಕ್ಷಣವನ್ನು ಮಿನುಗು ಮಿಂಚೆ...

ಬಂಧನ

ಈ ಸಲಾರೆ ಇನ್ನು ನಾನು; ಕಾಣಲಾರೆ ಮುನ್ನು ಕಡಲ ನಡುವೆ ಈಸಿದೆ ತುದಿ‌ಇಲ್ಲ, ಮೊದಲಿಲ್ಲ; ಮಾಡಲೇನು ಇನ್ನು ದಣಿದು ನಾನು ಬಳಲಿದೆ ಏಸು ಕಾಲ ಈಸಿದೆ! ಎನಿತು ದಿನ ನೂಕಿದೆ! ಮುಗಿಯ ಬಹುದೆ ಕಡಲು?...

ಕನ್ನಡಾಂಬೆಯ ಹಂಬಲ

ಏಕೀಕರಣದ ಪೂರ್ವದಲ್ಲಿ ಬರೆದ ಕವನ ೧ ಒಂದಿರುಳ ಕನಸಿನಲಿ ಕನ್ನಡಮ್ಮನ ಕೇಳಿದೆನು ‘ಬೇಕು ನಿನಗೇನು ಎಂದೂ’ ೨ ಪೌರ್ಣಿಮೆಯ ಚಂದ್ರನಿಗೆ ಕಲೆಯ ತೆರದೀ ನನಗೆ ಒಡೆದ ಕರ್ನಾಟಕದ ಕುಂದು ಎಂದೂ ೩ ಕೋಡಿಯೊಡೆದಿಹ ಕಣ್ಣೀರು...

ಮಿಣುಕು ದೀವಿಗೆಯಾದರೇನು ?

ದಿಳ್ಳಿಯೊಂದರ ಒಳಗೆ, ದಿಬ್ಬವೊಂದರ ಮೇಲೆ, ದೊಡ್ಡ ದೀವಿಗೆಯಡೆಗೆ ನಾ ಕುಳಿತಿದ್ದೆ. ಯಾವುದೋ ಎಡೆಯಲ್ಲಿ; ಹಣತೆಯೊಂದರ ಮೇಲೆ ಮಿಣುಗುವಾ ಜಿನುಗುದೀವಿಗೆ ಕಂಡಿದ್ದೆ ಬೀಸುಗಾಳಿಯ ಮೇಲೆ ಈಸು ಬಾರದೆ ಸಾಗಿತ್ತು ಇಲ್ಲಿಯೋ ಅಲ್ಲಿಯೋ ಎಂಬಂತೆ ಮುಳುಗಿ ಮರೆಯಾಗಿ...

ಬಡವನ ಹೊಟ್ಟೆ !

ಓಗೊಡು, ಹಸಿದ ಕೂಗು ಕೇಳುತಿದೆ ಮನವಬಿಚ್ಚು, ಕಲ್ಲೆದೆಯ ಉಚ್ಚು ಓಡು, ಹೊಟ್ಟೆಯುರಿಯು ಕರೆಯುತಿದೆ ಸಾಕು ಸಿರಿಯ ಹುಚ್ಚು ಬಡ ಬಡಬಾಗ್ನಿ ಕಿಚ್ಚು ! ನಿನ್ನಿ ಹೊಟ್ಟೆ ಸಿರಿತನದ ಮೊಟ್ಟೆ ಅಂಬುಲಿಯ ಕಾಣದವ ಮಣ್ಣಿನಾ ಮೊಟ್ಟೆಯೆ...

ದುರ್ಗಾಮಾತೆಗೆ

ನಾಡನಾಳುತೆ, ಜಗವ ಕಾಯುತೆ; ಅದೋ ದೇವಿ ! ನಿಂದಿಹಳು ಭುವನ ಭಾಗ್ಯೇಶ್ವರಿ, ಇದೋ ಕಾಣ ಬನ್ನಿ!! ದುಷ್ಟರನು ದಂಡಿಸುವ, ಭಕ್ತರನ್ನು ರಕ್ಷಿಸುವ ಶಾಂಭವಿ ವಿಜಯಿ ಮಹಾ ತಾಯಿ ಚಂಡಿಯಾ ಭಜನೆಗೈತನ್ನಿ ಗಗನದಲಿ ಗುಡುಗುವಾ ಗುಡುಗಿವಳು...