
ಇಲ್ಲಿ ಸಲ್ಲುವುದೆ ಅಲ್ಲಿಯೂ ಸಲ್ಲುವುದೆ ಅಥವ ಅಲ್ಲಿ ಸಲ್ಲುವುದು ಬೇರೆಯೇ ಇಲ್ಲಿಯ ಮಲ್ಲಿಗೆಯು ಅಲ್ಲಿಯು ಮಲ್ಲಿಗೆಯೆ ಅಲ್ಲಿಯ ಮಲ್ಲಿಗೆಯು ಮಾಸುವುದೆ ಇಲ್ಲವೇ ಇಲ್ಲಿಯ ಗುಲಾಬಿಯು ಅಲ್ಲಿಯು ಗುಲಾಬಿಯೆ ಅಲ್ಲಿಯ ಗುಲಾಬಿಗೆ ಮುಳ್ಳುಗಳೆ ಇಲ್ಲವೇ ಇಲ್ಲಿ...
ತಿದ್ದಲಾರದ ನಿನ್ನೆ ಕಾಣಲಾರದ ನಾಳೆ ಇದ್ದರೂ ಇರದಂಥ ವರ್‍ತಮಾನ ನಿಲ್ಲಲಾರದ ಕಾಲ ಕಾಲ ಕ್ರಮದಲ್ಲಿ ಮರಳದಿದ್ದರು ಮರಳಿದಂಥ ಅನುಮಾನ ಬೇಡವೆಂದರು ಬೆನ್ನು ಬಿಡದಂಥ ನೆನಪುಗಳು ಬೇಕೆಂದು ಬೇಡಿದರು ತಡೆವ ವಿಸ್ಮೃತಿಗಳು ಕ್ಷಣ ಕೂಡ ನಿಂತಲ್ಲಿ ನಿಲ್ಲಲಾರದ ...
ಇದು ಎಂಥ ಶಾಪ ಈ ಯಕ್ಷನಿಗೆ ಪಾಪ ತನ್ನ ನಲ್ಲೆಯ ಬಳಿಯಿಂದ ದೂರವಿರಬೇಕಾದ ವಿರಹ ತಾಪ ಈ ಇಂಥ ಆಷಾಢ ದಿನಗಳಲ್ಲೇ ಹಾತೊರೆಯುವನು ಕಾತರಿಸುವನು ಒಂದು ಮೋಡವ ಕರೆದು ಕೋರುವನು ಮೋಡವೇ ಆಕಾಶದ ಪವಾಡವೇ ನೀನೆಲ್ಲಿಗೆ ಧಾವಿಸುತಲಿರುವೆ ಇಂತು ಕೇಳು ನನ್ನ ಮಾತುಗ...
ಹತ್ತವತಾರಗಳು ಆಗಿಹೋದರೂ ಅವತಾರಗಳಿನ್ನೂ ಕೊನೆಗೊಂಡಿಲ್ಲ ಶತಕೋಟಿ ದೇವರುಗಳು ಬಂದು ಹೋದರೂ ದೇವರುಗಳಿನ್ನೂ ಮುಗಿದಿಲ್ಲ ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ ಯಾವ ಯಾವುದೋ ವರಾತ ಆರಂಭಿಸಿದ ಸ್ವಯಂಚಾಲಿತ ಲೀಲೆಯ ನಿಲ್ಲಿಸಲು ತಾನೆ ಮರೆತ ಯುಗದ ಗಾಲಿಗಳ...
ಓಡುತಿರುವ ಗಾಡಿಯೊಳಗೆ ಇರುಳು ಹೆಪ್ಪುಗಟ್ಟುತಿದೆ ಒಳದೀಪಗಳನುರಿಸಿದರೆ ಹೊರಜಗವೇ ಮಾಯ ಕಿಟಕಿಗಾಜುಗಳ ಗೋಡೆಯಾಗಿ ಎಲ್ಲಿ ನೋಡಿದರೂ ಅಲ್ಲಿ ನೋಡಿದವನ ಮುಖವೆ ತೋರುವುದು ಲೋಕ ಮುಚ್ಚಿಕೊಳ್ಳುವುದು ಅಲ್ಲಿ ಹೊರಗೆ ಮಿನುಗುವ ಸಣ್ಣ ಮಿಂಚು ಹುಳಗಳೋ ಅಲ್ಲಿ ಮ...
ಅರ್‍ಧಕೆ ನಿಂತ ಹಾಡುಗಳೆ ಹಾಗೇ ನೀವಿರುವರೆ ಶಬ್ದ ಮರೆತವೊ ಅರ್ಥ ಸಿಗದಾದುವೊ ಹಾಗೇ ನೀವಿರುವರೆ ಅರ್‍ಧಕೆ ನಿಂತ ಇಮಾರತುಗಳೇ ಹಾಗೇ ನೀವಿರುವರೆ ಯಾರು ಕಲ್ಪಿಸಿದ್ದರೋ ಯಾರು ಬಯಸಿದ್ದರೋ ಹಾಗೇ ನೀವಿರುವರೆ ಅರ್‍ಧಕೆ ನಿಂತ ಪತ್ರಗಳೆ ಹಾಗೇ ನೀವಿರುವರೆ ...
ತೇಲುತಿರುವ ಮುಗಿಲುಗಳಿಗೆ ಬಳಿದನೊಬ್ಬ ಬಣ್ಣವ ಎಂಥ ಬಣ್ಣ ಅಂಥ ಬಣ್ಣ ಇನ್ನೆಲ್ಲೂ ಕಂಡುದಿಲ್ಲ ಹೂವುಗಳಿಗೂ ಹಚ್ಚಿಯಾಯ್ತು ಮರಗಳಿಗೂ ಮೆತ್ತಿಯಾಯ್ತು ಮಿಕ್ಕುದಿನ್ನು ಮಣ್ಣಿಗೆ ಚಂದವುಳ್ಳ ಹೆಣ್ಣಿಗೆ ಹಾರುತಿರುವ ಹಕ್ಕಿಗಳಿಗೆ ಇತ್ತನೊಬ್ಬ ರಾಗವ ಎಂಥ ರಾ...
ತಾರನೆ ಶ್ರೀರಾಮ ಸೀತೆಯು ಬಯಸಿದ ಮಾಯಾಮೃಗವ ತಂದೀಯನೆ ಆ ರಾಮ ಪರ್‍ಣಕುಟಿಯ ಸುತ್ತಲು ಕುಣಿಯುವುದಿದು ಜಿಂಕೆಯ ಹಾಗಿರುವುದು ಆದರು ಎಂಥಾ ಜಿಂಕೆಯಿದು ಬಂಗಾರದ ಜಿಂಕೆಯಿದು ಕಿನ್ನರ ಲೋಕದ ಜಿಂಕೆಯಿದು ಇಂದ್ರ ಲೋಕದ ಜಿಂಕೆಯಿದು ಸೂರ್ಯ ಚಂದ್ರರೆ ಮೋಹಿಸು...













