Home / ಝೆನ್ ಬೆರಗು

Browsing Tag: ಝೆನ್ ಬೆರಗು

ಹಸಿರು ತುಂಬಿದ ಒಂದು ಮರ. ಅದರ ಪಕ್ಕದಲ್ಲಿ ಮತ್ತೊಂದು ಬೋಳು ಮರ. ಎರಡೂ ಒಂದನ್ನೊಂದು ನೋಡುತಿದ್ದವು. ಬೋಳು ಮರವನ್ನು ನೋಡಿ ಹಸಿರು ಮರ ಮರುಕಗೊಂಡು ಹೇಳಿತು. “ನಗ್ನವಾಗಿರುವ ನಿನ್ನ ನಾ ನೋಡಲಾರೆ. ನನ್ನ ಹಸಿರು ಅಂಗಿ ನಿನಗೆ ಕೊಡುವೆ”...

ಒಂದು ಸುಂದರ ಬಿದರಿನ ತೋಪು. ತೋಪಿನ ಒಳಗೆ ಪುಟ್ಟ ಮನೆ. ಮನೆಯ ಮುಂದೆ ಪುಟ್ಟ ಕೊಳ. ಕೊಳದ ಸೋಪಾನದಲ್ಲಿ ಪ್ರಕೃತಿಯ ಸೌಂದರ್‍ಯ ಸವಿಯುತ್ತ ಕವಿ ಕುಳಿತಿದ್ದ. ಕವಿ ಮನವು ಹಾಡಿದಾಗ ಬಿದಿರು ಬೊಂಬು ತನ್ನ ಹೃದಯದ ಖಾಲಿ ಜಾಗದಲ್ಲಿ ನಾದ ತುಂಬಿಕೊಂಡು ನಲಿಯ...

ತೋಟದಲ್ಲಿ ತಿರುಗುವಾಗ ಭುಜವೇರಿ ಬಂದಿತ್ತು ಒಂದು ಕಂಬಳಿ ಹುಳು. ಮೈ ನವೆ ತಡೆಯಲಾರದೆ ಸಿಟ್ಟಿನಿಂದ ಕಂಬಳಿ ಹುಳುವನ್ನು ಒಂದು ಸೀಸೆಯಲ್ಲಿ ಹಾಕಿ ಬಂಧಿಸಿಟ್ಟ ತೋಟದ ಮಾಲಿ. ಗಿಡಗಳಿಗೆ ನೀರು ಹಾಕುವಾಗ ಕನಿಕರ ಗೊಂಡು ನಾಲಕ್ಕು ಎಲೆ ಆಹಾರ ಹಾಕಿ ದಿನವೂ ...

ಪಡಸಾಲೆಯಲ್ಲಿ ನೇತು ಹಾಕಿದ್ದ ತಾತನ ಚಿತ್ರ ನೋಡುತ್ತ ನಿಂತಿತ್ತು ಮಗು. “ಅಮ್ಮ! ತಾತಂಗೆ, ಕಣ್ಣು, ಮೂಗು, ಬಾಯಿ, ಎಲ್ಲಾ ಇದೆ ಗಡ್ಡ ಏಕೆ ಇಲ್ಲ?” ಎಂದು ಕೇಳಿತು. “ತಾತಂಗೆ ಗಡ್ಡ ಇದೆ ಅಲ್ಲ, ಕಾಣಿಸಲಿಲ್ಲವೆ?” ಎಂದಳು ...

ಉದರಿದ ಹೂ ಒಂದು, ಗಾಳಿ ಜೊತೆ ಸೇರಿ ದಾರಿ ತಪ್ಪಿತು. ತಾಯಿ ಗಿಡ ಹೇಳಿತು- “ಪೋಲಿ ಗಾಳಿ ಜೊತೆ ಅಲೆಯ ಬೇಡ” ಎಂದು. ಹೂ ಕೇಳಲಿಲ್ಲ. ಗಾಳಿ ಬಿಡಲಿಲ್ಲ. ತೋಳು ತೋಳಿಗೆ ಸೇರಿಸಿ ಗಾಳಿ-ಹೂವು ಬಹು ದೂರ ನಡದೇಬಿಟ್ಟವು. ತಾಯಿ ಗಿಡದ ಹೃದಯ ಕಂ...

ಒಂದು ಸುಂದರ ಬೆಳಗಲ್ಲಿ ಹೂ ಒಂದು ಸಂಕಲ್ಪ ಮಾಡಿತು. ಏನಾದರಾಗಲಿ ಇಂದು ಧ್ಯಾನದ ಪರಮ ಚರಮತೆ ಮುಟ್ಟಬೇಕೆಂದು. ಸುಖಾಸನದಲ್ಲಿ ಮಂದಸ್ಮಿತ ತಾಳಿ ಸುಮನ ಧ್ಯಾನಕ್ಕೆ ಕುಳಿತುಕೊಂಡಿತು. ಕೆಲವೇ ಕ್ಷಣದಲ್ಲಿ ಮಂದಾನಿಲ ಬಂದು “ಹೂವೇ! ಹೂವೇ!” ...

ಮೊಗ್ಗೊಂದು ಧ್ಯಾನಕೆಂದು ಗಿಡದ ರೆಂಬೆಯಲ್ಲಿ ಕುಳಿತಿತ್ತು. ಸೂರ್‍ಯಪಾನದಲ್ಲಿ ಧ್ಯಾನವರಳಿತು. ಹೂ ಹೃದಯದಲ್ಲಿ ಧ್ಯಾನ ಕಾಯಾಯಿತು. ಧ್ಯಾನ ಪ್ರಪುಲ್ಲಿತವಾಗಿ ಹಣ್ಣಾಯಿತು. ಧ್ಯಾನಪರಾಕಾಷ್ಟೆಯಲ್ಲಿ ಬೀಜವಾಗಿ ಮಣ್ಣು ಸೇರಿತು. ಧ್ಯಾನ ಮತ್ತೆ ಬೇರುಬಿಟ್...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...