
ಕೋಲು ಕೋಲು ಕೋಲೆನ್ನದು ಕೋಲು ಕೋಲು ಕೋಲೇ ಕೋಲೆನ್ನ ಕೋಲೇ || ೧ || ಕಯ್ಯಲೊರೆಗೆ ಕಂಚಿನ ಕೋಲು ಪಾಂಡವರಿಗೆ ಬೆಳ್ಳಿ ಕೋಲು || ೨ || ಶಿತ ಕಟ್ಟ ಶಿರಿರಾಮರಿಗೆ ಚಿನ್ನದ ಕೋಲು ಶಿನ್ನದ ಕೋಲ ತಡದೇಕಂಡೇ || ೩ || ತಮ್ಮ ತಮ್ಮ ಮುಸತಾಪವಾನೋ ಗೈದಾರೋ ಶಿರ...
(ಶುಗ್ಗಿ ಕಟ್ಟೇಲಿ ಸುಗ್ಗಿ ಯೇಳಿಸುವಾಗ, ಮುಗಿಸುವಾಗ ಹೇಳೊ ಪದ) ಹರವಣ ಗುರುವಣ ಬಲಗೊಂಬೆ ಗುರವಣ ಗುರಪಾದಕೆ ಸರಣು || ೧ || ನನಮುನಗಮು ಮಾನೋ ಗೆಲ್ಲಾ ನಂದಾಸೇತಿ ಪುಣ್ಣಿದಿಂದ || ೨ || ಹುಟ್ಟಪಾಪ ಪರಿಹಾರಂದ ಸಲವನ ದೇವನೆ ಸಿಲವನಗೊಂಬ || ೩ || ಸಾರ...
ಯೇ ಬಸವಾ ಬಸವನಂದಿರೇ ಬಸವನ ಪಾದಕೆ ಸರಣನ್ನಿರೇ ಮೇಲೆ ಮುತ್ತಿನ ಸರಿ (ರ) ಯೋ (ವೋ) ಅದು ನಮ್ಮ ಕಡಲೇ ಪಾಂಡ್ಯದ ಬಸುವಾ || ೧ || ಯೇ ಕರಿಯ ಕೋಲು ಕದ್ದವನೇ ಜಾಣಾ ಸುಗ್ಗಿಯ ಕೋಲ್ ಶಿವ ಭಕ್ತರಾಡೂ ಕೋಲೇ ಹೂವಿನಾ ಕೋಲು ಹುಡಗರಾಡ್ವಾ ಕೋಲು ರನ್ನದೂ ಕೋಲು...
ತಾನನಂದ್ರ ನಾನೋ ತಾನತಂದ್ರ ನಾನೋ ತಂದಾನ ತೈದಾನೋ ತಾನಾನಾ || ೧ || ಶ್ವಾಮಿ ಇಂದ್ರ ಮೇನೋ ಭೂಮಿಯ ನೆನೆದಾನೋ ಶ್ವಾಮಿ ಶಂಕರನಾ ನೆನೆವೇನೋ || ೨ || ಶ್ವಾಮಿ ಶಂಕರನಾ ನೆನವ ಗುಂಬಳತಾಯೇ ಭೂಮಿ ಬಲ್ಲವರೇ ಹಾಡಾ ತೊಡಗಿರುವಾ || ೩ || ಬಲ್ಲವ್ರ ಹೇಳಿದ ಹ...
ಶಿವನೇ ನೆನೆಯೋ ಶಿವನೇ ನೆನೆಯೋ ಈ ಊರಾ ರಾಮದೇವರ ನೆನೆಯೋ ಈ ಊರ ಹಿತ ಕಾಯೋರ ನೆನೆಯೋ ಕಾಲಿಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರಕಟ್ಟಿ ತೇರೋ ತೇರೋ ಹೂವಿನ ತೇರೋ || ೧ || ಬಾಗಿಲಲೆ ಬಲಿಯಾರಿ ದಂಡು ಮೇನೆ ಗುರಗುಂಜೀ ಶೆಂಡೂ ನಾರೀ ಬಂದಾನೇ ನಲ್ಲಾ ಬ...
ಶಿವ ಕೋಲೆನ್ನ ಗಂಗಿಗೆ ಶಿವ ಕೋಲೆನ್ನ ಗೌರಿಗೇ ಶಿವ ಕೋಲೋ ಕಬ್ಬಿಣದ ಬಸವಗೆಯ್ಯಾ ಕೋಲೇ || ೧ || ವಂದು ಮುದಿನಾ ಮರದಲ್ಲಿ ಬಂದೀತು ಸುಮಗಳು ವಂದು ಮೊಕಿನಾ ಮಾರಾಟ ಮಾರಾಟ ಕೋಲೇ || ೨ || ಶಿವ ಕೋಲೇನ್ನ ಗಂಗಿಗೇ ಶಿವ ಕೋಲೇನ್ನ ಗವರಿಗೆ ವಳ್ಳೆ ಬೆನ್ನಂತ...
ಜೈ ತನ್ನನ್ನೇ ತಂದಾನೋ ತಾನೋ ತಂದಾನೋ ತಂದಾನಲೋ ತಂದಾನೋ ತಂದಾನೋ ದೇವರ ತಂದೋ ನಾನು ಗುರುವೇ ಗುರುವೇ ಮತ್ತೆ ಗುರುಪಾದ ಯೆಣ್ಣುವೋ ಗುರುನ ಸಿರಪಾದಕೆ ಶರಣೆನ್ನಿರೋ || ೧ || ಹಾಲುಂಡ ಹ್ಯಾಲುಂಡ ಬೇಡುಂದು ದೇವಳ್ಳಿಗನೋ ದೇವರ ವಳ್ಳೇದು ನಮ್ಮ ಸಿದುರಾಮಾ...














