ವಿಷ್ಣು ಭಕ್ತರಿಗೆಲ್ಲ ಸಲಹಬೇಕೆನ್ನುತಾ
ಮುದ್ರೇಯ ಮಾಡೀದಾ ಮಾತ್ಮರಾ || ಸ್ವಾಮೀ

ಕಲಿಯುಗದಲ್ಲೀ ಕಾಸೇಯ ಧರಿಸಿದ
ರಾಮನೆಂಬಾ ದೂತಗೆ ಸರುಣಂಬೇ || ೧ ||

ಕಾಮನ್ನ ಚರಿತ್ರವ ಚಂದಾಗಿ ವಬಲಿಸೀ
ಸಂತೋಸ ಹೊಂದುವಾ | ಸರ್ವದಾ | ಸರ್ವದಾ
ಯತಿರುಕ್ಕ ಸಮನವ ಮಾಡುವಗೋಸ್ಕರ
ಪ್ರದ್ಯುಮ್ನನವತಾರ ಮಾಡಿದಾ | ಕಾಮ || ೨ ||

ಜಾನೀನೀ ಜಾನೀಸಿ ವಾರಂಬ ದಿನದಲ್ಲೀ
ತಾಳ ಗೊಮ್ಮಟಿಗಾ ಕುಣಿಸಾಡು ಕೋಲೇ
ಗಜಮೂಕನಾ ನಿನ್ನ ಪಾದಾವ ಬಜಿಸುವೆ
ತ್ರಿಜಗವಂದಿತನಾ ಕೊಡು ಮತಿಯಾ || ೩ ||

ಉತ್ತುಮ ಹೆಗಡೆಯ ಸ್ತಿರವಾಗಿ ನೆಲಸಿದ
ಶ್ರೀ ಶಾಂತಿಕಾಂಬಾ ನಮೋ ನಮೋ || ೪ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.