ಸಂಸಾರದ ಗೊಡವಿ ಇನ್ನ್ಯಾಕೆ ಇನ್ನ್ಯಾರಿಗೆ ಬೇಕೆ ||ಪ||

ಭವಸಾಗರದೊಳು ಮುಳುಗಿ ಮುಳುಗುತಿರೆ
ನವಿದು ನವಿದು ಯಮರಾಜನು ಕೊಲುವಾ ||ಅ. ಪ||

ಒಂಟೆಯ ಮೇಲೆ ಹತ್ತಿದೆನವ್ವಾ
ಗಂಟೆಯ ನುಡಿಸಿದೆ ತಾಯವ್ವ
ಕಂಟಕ ಹರಿಸಿ ಸೊಂಟರಗಾಳಿಯ
ದಾಂಟಿನಡಿದು ಮತ್ತೆಂಟುಕೋಟಿಯ ಗೆದ್ದೆ ||೧||

ಮಂದಿಯೋಳ್ಮಾನಕಂಜದಲೀ ಸಂದಿಯೊಳು ಸುಳಿದಾಡಲಿ
ಬಂಧುರ ಶಿಶುನಾಳ ತಂದೆಯ ಕಾಣಲು
ಹೊಂದಿದೆನಾತನ ದ್ವಂದ್ವಚರಣಕೆ ||೨||

*****