ಯಾತಕೆ ಯಾರಿಗೆ ಬೇಕು
ಈ ಸಂಸಾರಸುಖ ಇನ್ನು ಸಾಕು ||೧||

ನೀ ಸತ್ತು ನಾನಿರಬೇಕು
ನಾನು ನೀನು ಒಂದಾದಮೇಲೆ ||೨||

ಆನಂದಸ್ಥಲದ ಮಾಲಿಂಗನೋಳ್ ಬೆರಿಯಲಿಬೇಕ
ಇಂತಾದಮೇಲೆ ಗುರುಗೋವಿಂದನ ಮರಿ ಶರೀಫನ ಗುರುತು ನಿನಗ್ಯಾಕ ||೩||

*****