ಮರವೇ ಮರವೇ
ಎಷ್ಟಿವೆ ಪೊಟರೆ ನಿನ್ನ ಬಳಿ
ಒಂದೊಂದ್ ಪೊಟರೆಲಿ
ಯಾರ್ಯಾರಿರುವರು
ಅಳಿಲೇ ಇಳಿಯೇ
ಪಂಚರಂಗಿ ಗಿಳಿಯೇ
ಅರಣೆಯೆ ಹಾವೇ
ನೆಲದಲ್ಲೆಲ್ಲೂ ಬೆಳೆಯದ ಹೂವೇ
ಅಥವಾ ಗೂ ಗೂ
ಕೂಗುವ ಗೂಗೇ?
ನನಗೂ ಒಂದು ಪೊಟರೆಯ ಕೊಡುವೆಯ
ಅಡಗಲು ನನಗದು ತಾಣವೆಯ
ಯಾರಿಗು ಕಾಣದೆ ಎಲ್ಲರ ಕಾಣುವ
ಸ್ಥಳ ಕೊಡು ನಿನ್ನಯ ಹೊಟ್ಟೆಯ ಒಳಗೆ
ನಾನಲ್ಲಿರುವೆ ದೇವರ ಹಾಗೆ
ಎಷ್ಟೇ ಕೂಗಿದರೋಗೊಡದೆ!
*****