ಬಟ್ಟಿ ಕಟ್ಟಿಸಿದೆ ರುದ್ರವ್ವಾ

ಬಟ್ಟಿ ಕಟ್ಟಸಿದೆ ರುದ್ರವ್ವಾ ನಿನ್ನ
ಹೊಟ್ಟಿಯ ಕೂಸಿಗಿನ್ನೆಷ್ಟುಪದ್ರವ್ವಾ ||ಪ||

ಹೊಕ್ಕಳ ಕೆಳಗೆ ಐತ್ರವ್ವ್ ಎರಡು
ಪಕ್ಕಡಿ ಎಲುಬಿನೊಳು ಮನಿಮಾಡೇತ್ರವ್ವಾ
ಕುಕ್ಕಿ ಕಾಳಜಕ್ಕೇರೇತ್ರವ್ವಾ ಅದನ
ತಿಕ್ಕಿ ನಿಲ್ಲಿಸ ನನ್ನ ತಾಯವ್ವ ||೧||

ಪಿಂಡ ಮಾಂಸದ ಮೂತ್ರೆವ್ವ ನಿನ್ನ
ಪುಂಡ ಗಂಡನಿಂದ್ರಿಯ ಹೊಲಿ ರಕ್ತವ್ವಾ
ಮಂಡಲ ಕೆಳಗೆ ಐತ್ರೆವ್ವಾ ನಡುಮಲ-
ಕುಂಡದೋಳ್ ತಾ ಮನಿ ಮಾಡೇತ್ರೆವ್ವಾ ||೨||

ಕಸವನು ಕಳದಿಟ್ಟವ್ವಾ
ಹೇಸಿ ವಿಷಯದ ರೋಗಕ್ಕೌಷಧ ಕೊಟ್ಟೆವ್ವಾ
ಮುಸುಕು ಮುಟ್ಟದಿ ಮುಟ್ಟದಿ ಮುಟ್ಟಿದೆವ್ವಾ
ದೇವಶಿಶುನಾಳಧೀಶಗ ಹಸನಾಗಿ ಇತ್ರೆವ್ವಾ ||೩||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಡಗಿ ಮಾಡುವರೇನೋ ಇಬ್ಬರು ಕೂಡಿ
Next post ಬುದ್ಧ ಮತ್ತು ಕಲಾವಿದ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys