Home / ಕಥೆ / ಕಿರು ಕಥೆ / ಧ್ವನಿಯಲ್ಲಿ ಗುರು

ಧ್ವನಿಯಲ್ಲಿ ಗುರು

ಊರು ಕೇರಿ, ಮನೆ ಮಠ ತೊರೆದು ಹೋದ ಮಗನಿಗಾಗಿ ನೊಂದ ತಾಯಿ ಬಹಳಷ್ಟು ಕಾಯುತ್ತಿದ್ದಳು. ಬಿಟ್ಟು ಹೋದ ಒಬ್ಬನೇ ಮಗನ ಹಂಬಲ ಅವಳನ್ನು ಬಹಳಷ್ಟು ಕಾಡುತಿತ್ತು.

ಒಂದು ಸುಂದರ ಬೆಳಗು, ಅಂಗಳದಲ್ಲಿ ರಂಗವಲ್ಲಿ ಬಿಡಿಸುವಾಗ ಇವಳ ಕರುಳಕುಡಿ ಬಂದು ನಿಂತ ಅಂಗಳದಲ್ಲಿ. ರಂಗವಲ್ಲಿಯಲ್ಲಿ ಕರುಳ ಹೂ ಅರಳಿಸಿದ್ದ ತಾಯಿಗೆ ಮಗನನ್ನು ನೋಡಿ ಸಂತಸವಾಯಿತು.

“ಮಗನೇ! ಅದೇಕೆ, ಮನೆ ತೊರೆದು ಹೋದೆ. ನಿನ್ನ ತಾಯಿಯ ಕರುಳಧ್ವನಿ ನಿನಗೆ ಕೇಳಲಿಲ್ಲವೇ?” ಎಂದಳು.

“ಮನೆತೊರೆದು ಹೋಗಿ, ಜಗದ ಎಲ್ಲಾ ಧ್ವನಿಗಳನ್ನು ಕೇಳಿ, ಅಳೆದು ಸುರಿದು ಬಂದಿರುವೆ. ಧ್ವನಿಯೊಳಗೆ ಧ್ವನಿ ಗುರುತಿಸಿರುವೆ. ಧ್ವನಿ ಮೆಟ್ಟಿಲು ಹತ್ತಿಳಿದು ಬಂದು, ಧ್ವನಿ ಲೋಕವನ್ನು ಅರ್ಥವಿಸಿ ಬಂದಿರುವೆ. ಧ್ವನಿಯಲ್ಲಿ ಅಡಗಿದ ಹಾವ ಭಾವಗಳು, ಪ್ರೀತಿ, ಪ್ರೇಮ, ಒಂದೇ ಅಲ್ಲದೆ ನಿರ್ಲಕ್ಷ್ಯ, ವೈಷಮ್ಯ, ಅಸೂಯೆ ದೂರ ಅಟ್ಟಿ-ಕರುಣೆ, ಗುರುತಿಸಿರುವೆ. ಲೋಕದ ಧ್ವನಿಯಲ್ಲಿ, ಸಮಾಜದ ಧ್ವನಿಯಲ್ಲಿ, ನನ್ನನ್ನು ಬೆಳೆಸಿಕೊಂಡಿರುವೆ. ಪ್ರಕೃತಿಯ ಧ್ವನಿಯಲ್ಲಿ ನನ್ನನ್ನು ನಾ ಕಂಡುಕೊಂಡಿರುವೆ. ಅಧಿಕಾರದ ಧ್ವನಿಯಲ್ಲಿ ನನ್ನನ್ನು ತಿದ್ದಿಕೊಂಡಿರವೆ. ಅಭಯದ ಧ್ವನಿಯಲ್ಲಿ ಬಾಳಿರುವ, ಅಭೇದ್ಯ ಧ್ವನಿಯಲ್ಲಿ ಜ್ಞಾನ ಗುರುತಿಸಿರುವೆ. ಅಶರೀರ ಧ್ವನಿಯಲ್ಲಿ ದೈವತ್ವ, ಕಂಡಿರುವೆ. ಪ್ರೀತಿ ಕರುಣೆ ಧ್ವನಿಯಲ್ಲಿ ತಾಯಿಯ ಗುರುತಿಸಿ ನಿನ್ನಲ್ಲಿಗೆ ಬಂದಿರುವೆ. ನಿನ್ನ ಪಾರದರ್ಶಕ ಧ್ವನಿಯಲ್ಲಿ ದೈವತ್ವವ ಕಂಡಿರುವೆ. ನಿನ್ನ ಧ್ವನಿಯ ಧ್ಯಾನದಲ್ಲಿ ನಾನು ಈಗ ನಿನ್ನ ಪಾದಕ್ಕೆ ಬಂದು ಸೇರಿರುವೆ” ಎಂದ ಮಗ.

ಧ್ವನಿಯನ್ನು ಗುರವಾಗಿಸಿಕೊಂಡ ಮಗನನ್ನು ಅಪ್ಪಿ, ತಾಯಿ ಧ್ವನಿಯಲ್ಲಿ ಪ್ರತಿ ಧ್ವನಿಯಾಗಿ, ಪ್ರೀತಿ ಧ್ವನಿಯಾದಳು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...