Home / ಕಥೆ / ಕಿರು ಕಥೆ / ಮತ್ಸ್ಯ ರಾಜ

ಮತ್ಸ್ಯ ರಾಜ

ಸಾಗರದ ರಾಣಿ ಮೀನೊಂದು ಮತ್ಸ್ಯರಾಜನಲ್ಲಿ ಬಂದು ಬಿನ್ನವಿಸಿಕೊಂಡಿತು.

“ನನ್ನ ಅಂತಃಪುರದಲ್ಲಿ ಸಂತೆಯ ಗದ್ದಲ. ಪುಟ್ಟ, ಚಿಕ್ಕ, ದೊಡ್ಡ ಮೀನುಗಳ ಕಾಟವೇ ಕಾಟ. ಈ ಸಹಸ್ರಾರು ಜಲಚರಗಳು, ಜಲ ಸಸ್ಯಗಳು ನನಗೆ ಉರುಳಾಗಿ ತಲೆನೋವನ್ನು ತರುತ್ತಿವೆ. ಸದಾ ಅಲೆಗಳ ಭೋರ್ಗರೆತ. ಬಿಳಿ ನೊರೆಯ ಒರೆತ. ಅಲ್ಲದೆ ಸಕಲ ಜಲಚರಗಳು ಅಶಿಸ್ತಿನಿಂದ ವರ್ತಿಸುತ್ತಿವೆ. ತಮ್ಮದೇ ಆದ ಸ್ವಚ್ಛಂದ ಜೀವನ ನಡೆಸುತ್ತಿವೆ. ಈ ಅರಾಜಕತೆ ನೋಡಿ ನೋಡಿ ನನಗೆ ಬಹಳ ಬೇಸರವಾಗಿದೆ, ಮತ್ಸ್ಯರಾಜ! ನನ್ನೊಲಿವಿನ ಸ್ವಾಮಿಯಾದ ನಿನ್ನೊಡನೆ ನನಗೆ ವಿಹಾರ ಮಾಡಲು ಇವು ಅಡ್ಡಿಯಾಗುತ್ತಿವೆ. ನನ್ನೊಡೆಯ! ಇದರ ಬಗ್ಗೆ ನನಗಾಗಿ ಏನಾದರೂ ಮಾಡಲು ಸಾಧ್ಯವೇ?” ಎಂದಿತು ರಾಣಿಮೀನು.

“ಇದೇನು ನಿನ್ನ ಇಚ್ಛೆ ಅಸಂಭದ್ದ. ಇದು ನಮ್ಮ ಜಲರಾಜ್ಯವಲ್ಲವೇ? ಜಲಚರಗಳು ನಮ್ಮ ಪ್ರಜೆಗಳಲ್ಲವೇ? ನಮ್ಮಿಂದ ಅವರು ಅವರಿಂದ ನಾವು ಅಲ್ಲವೇ? ನೀನು ನನ್ನ ಪ್ರಿಯೆ! ನಿನಗಾಗಿ ಈ ದಿನ ಕನಸಿನಲ್ಲಿ ಈ ಸಮುದ್ರವು ಅಲೆಗಳಿಂದ ಸ್ಥಗಿತವಾಗಿ ನರ್ತನ ನಿಲ್ಲಿಸುತ್ತವೆ. ಎಲ್ಲಾ ಮೀನುಗಳನ್ನು ಸಾಗರದಿಂದ ಹೊರದೂಡಲ್ಪಡುತ್ತವೆ. ಸಸ್ಯಗಳೂ ಕಿತ್ತೆಸೆಯಲ್ಪಡುತ್ತವೆ. ಮುತ್ತು ಹವಳ, ಚಿಪ್ಪುಗಳು ಬರಿದಾಗುತ್ತವೆ. ನಾನು ನೀನು ಮಾತ್ರ ದೊಡ್ಡ ಸಾಗರದಲ್ಲಿ ತೇಲುವಂಥ ಒಂದು ಕನಸನ್ನು ಇಂದು ನೀನು ಕಾಣು. ನಂತರ ನನಗೆ ಬಂದು ಹೇಳು ನಿನ್ನ ಇಚ್ಛೆ ಪೂರೈಸಬೇಕೆ?” ಎಂದು.

ರಾಣಿ ಮೀನು ಅಂದು ಅಲೆಯ ಹಾಸಿಗೆ ಮೇಲೆ ಮೈಚಾಚಿ ಮಲಗಿದೊಡನೆ ಕನಸು ಕವಲೊಡೆಯಿತು. ಅಲೆಗಳು ನಿಶಬ್ದವಾದವು. ನರ್ತನ ನಿಂತಿತು. ಸಾಗರದ ಭೋರ್ಗರೆತ ಮೂಕವಾಯಿತು. ಅಲೆಯ ನೊರೆ ಮಾಯವಾಯಿತು. ಮುತ್ತು ಹವಳ ಓಡಿಹೋದವು. ಸಸ್ಯ ಬಾಡಿ ಹೋದವು. ಪುಟ್ಟ ಮೀನುಗಳೊಂದಿಗೆ ಎಲ್ಲ ಮೀನುಗಳು ದಡಕ್ಕೆ ಬಂದು ಗೋಳೋ ಎಂದು ಅಳುತ್ತ ಪ್ರಾಣ ಬಿಟ್ಟವು. ಜಲಧಿಯಲ್ಲಿ ಒಂದೇ ಸ್ಮಶಾನ ಮೌನ ಆವರಿಸಿತು. ನೀರು ಹೆಪ್ಪು ಗಟ್ಟಿತು. ಹಿಮವಾಯಿತು. ರಾಣಿ ಮೀನಿಗೆ ಉಸಿರುಕಟ್ಟಿತು.

“ಪ್ರಿಯಾ!” ಎಂದು ಚೀರುತ್ತ ರಾಜ ಮೀನನ್ನು ಅಪ್ಪಿಕೊಂಡು “ಇದು ಎಂತಹ ಭಯಾನಕ ಕನಸು”- ಅದು ನನ್ನ ಪಾಲಿಗೆ ಪ್ರಳಯದಂತಿತ್ತು. ನನ್ನ ಇಚ್ಛೆಗೆ ನಾನೇ ನಾಚುತ್ತಿರುವೆ” ಎಂದು ಮತ್ಸ್ಯರಾಜನಲ್ಲಿ ಕ್ಷಮೆ ಬೇಡಿತು.

“ನನಗೆ ಗೊತ್ತಿತ್ತು. ನಿನ್ನ ಇಚ್ಛೆ ನನಸಾಗಿಸುವ ಮುನ್ನ ಅದಕ್ಕೆ ಕನಸು ಕಾಣಲು ಹೇಳಿದ್ದು” ಎಂದಿತು.
ರಾಣಿ ಮೀನು ತಲೆ ತಗ್ಗಿಸಿ ತನ್ನ ತಪ್ಪನ್ನು ಒಪ್ಪಿಕೊಂಡು, ಅರಿವನ್ನು ಪಡೆಯಿತು.
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...