ಮದಿರೆಯೆಂಬುದದು ತರುವದು ನರನಿಗೆ ಮಾನದ ಹಾನಿಯನೂ |
ಮದಿರೆ ಸೇವನೆ ಮಾಡಲು ಕೆಡುವುದು ಮಾನವನಾರೊಗ್ಯಾ ||
ಮದಿರೆ ಶೆಳೆತಕೆ ಬೀಳ್ದನ ಬಾಳುವೆ ನಾಶವಪೊಂದುವುದೂ |
ಮದಿರೆ ಮಹತಿಯ ನರಿಯುತೆ ದೂರಿರೆ ದೊರೆವವು ಸುಖಶಾಂತಿ || ೧ ||
ಮದಿರೆ ಪಾನದಿಂ ಮದಿಸುತೆ ದುಷ್ಕೃತಿ ಯೆಸೆದರು ರಕ್ಕಸರು |
ಮದಿರೆ ಮಾನವನ ಬುದ್ಧಿಯ ಕೆಡಿಪುದು ಮಾಡುತ ನಿಶೆಯವನ ||
ಮಡದಿ ಮಕ್ಕಳನು ಗೋಳಿಸಿ ಕೊಲ್ವನು ಮದಿರೆಯ ಶೆಳೆತದಲಿ |
ಮದಿರೆ ಮಾಡದ ಕೇಡದು ಜಗದೊಳು ಮತ್ತದು ಯೇನಿಹುದು || ೨ ||
ಮದಿರೆ ಕಿಡಿಸುತೆ ಹಸಿವನು ದೇಹವ ದುರ್ಬಲ ಗೊಳಿಸುವುದು |
ಮದಿರೆ ಬುದ್ಧಿಯ ಕಿಡಿಸುತೆ ಮಾನಸ ಬಲವನು ಹೀರುವುದು ||
ಮದಿರೆ ಮಾನವನ ದೇಹದಿ ಷಡ್ರಿಪುಚೇತನ ಗೊಳಿಸುವುದು |
ಮದಿರೆ ಮಾನಸ ವಿವೇಕವನೋಡಿಸಿ ದುಃಖದಿ ನೂಂಕುವುದು || ೪ ||
ಮದಿರೆ ನೀತಿಯ ಕೆಡಿಸುತೆ ಜನರೊಳು ಮಾನವ ಕಳೆಯುವದು |
ಮದಿರೆ ಧನವನು ಶೆಳೆಯುತೆ ತರುವುದು ಬಡತನ ಮನುಜನಿಗೆ ||
ಮದಿರೆ ಮನೆಯೊಳು ಕಲಹ ಪುಟ್ಟಿಸಿ ಕಳೆವುದು ಗೃಹಸುಖವಾ |
ಮದಿರೆ ಮೋಹವ ಬಿಟ್ಟೊಡೆದೊರೆವವು ಶಾಶ್ವತ ಸುಖಶಾಂತಿ || ೪ ||
ಮದಿರೆ ವೋಡಿಸಲು ಪುಸಿಫುಟಜಾನ್ಸನ ಜಗದೊಳು ತಿರುಗಿದನು |
ಮದಿರೆ ಭಕ್ತರೆ ಜಗದೊಳು ತುಂಬಿರೆ ಮನದೊಳು ಮರುಗಿದನು |
ಮದಿರೆ ಭಾರತದಿ ಬಹುತಾನಿರದಿರೆ ಮನಶಾಂತಿಯ ಹೊಂದಿದನು |
ಮದಿರೆ ಭಾರತದಿ ಜನಗಳು ಸಿಪ್ರದಲೋಡಿಸ ಬಯಸಿದನು || ೫ ||
ಮದಿರೆ ಭಾರತದಿ ಬಂದಿಸೆ ಹಿರಿಯರು ಶಾಸನ ಮಾಡಿಹರು |
ಮದಿರೆ ಶೀಘ್ರದೋಳ್ಕಣ್ಮರೆಯಾಗ್ವುದು ನಮ್ಮಯ ನಾಡಿಂದ |
ಮದಿರೆ ಪೋಗೆ ಬಾಳ್ವಾಗ್ವದು ನಮ್ಮದು ಸಂತತ ಸುಖಮಯವು |
ಮದಿರೆದೇವಿ ನಾವ್ಮಾಳ್ಪೆವು ನಿನ್ನಯ ದಿಕ್ಕಿಗೆ ಶರಣಿಂದು || ೬ ||
*****

















