
ಕೇಳಿರಿ ಗೆಳೆಯರಿರಾ
ಎಲ್ಲರು
ಹೇಳಿರಿ ಜೋಗುಳವಾ! || ಪಲ್ಲ ||
೧
ಕವಿಮಿತ್ರರ ವರಪುತ್ರನ ಜನನ!
ಸವಿಯು ಇಂದಿನದು ಸಿಗಲಿ ದಿನ ದಿನ!
೨
ನೂರು ವರ್ಷಗಳು ಮಗುವಿಗೆ ಪೂರ್ತಿ!
ಮೇರೆವರಿಯಲೀ ಕಂದನ ಕೀರ್ತಿ!
೩
ಚೆಲ್ವಿಕೆ ತರಿಸಲಿ ಗೆಲವಿನ ಕಳೆಯಾ!
ಗೆಲ್ವಿಕೆ ಸುರಿಸಲಿ ಒಲವಿನ ಮಳೆಯಾ!
೪
ಪಿಡಿಯಲಿ ಆ ಕ್ಷತ್ರಿಯರಾ ಛಲವಾ!
ಪಡೆಯಲಿ ಶ್ರೀಸಿದ್ಧಾರ್ಥನ ಬಲವಾ!
೫
ಸಿದ್ಧಿಗೊಳಿಸಲೀ ಜೋಗುಳವಾಽ!
ಉದ್ಧರಿಸಲಿ ಕನ್ನಡ ಕುಲವಾಽ!
*****

















