Home / ಕವನ / ಕವಿತೆ / ಗಂಡ ಹೆ೦ಡರು

ಗಂಡ ಹೆ೦ಡರು

ಹೊನ್ನಿನ ಮಳೆ ಬಂದ, ಚಿನ್ನದ ಕೆರೆ ತುಂಬಿ
ಕಿನ್ನುರಿ ಮಾಟದ ಹೊಳಿ ಬಂದು | ರಾಯರ
ಸಣ್ಣಕ್ಕಿ ಕೇರ ತರಿಬ್ಯಾವ ||

ಗಂಡ ಹೆಂಡರ ಜಗಳ, ಗಂಧ ತೀಡಿದ್ಹಂಗ
ಲಿಂಗಕ ನೀರ ಎರಿದ್ಹಾಂಗ | ಹಿರಿಹೊಳಿ
ಗಂಗವ್ವ ಸಾಗಿ ಹರಿದ್ಹಾಂಗ ||

ಸಿಟ್ಟು ಮಾಡುವಿರೇನು, ಸಿರಿಯರು ನನಮ್ಯಾಲೆ
ಕಟ್ಟಿಕೋಬ್ಯಾಡ್ರಿ ವೈಮನವ | ತಾಯ್ತಂದಿ
ಕೊಟ್ಟು ಹೋಗ್ಯಾರ ನಿಮ್ಮನಿಗೆ ||

ಕಾಮಕಸ್ತುರಿ ನಿನ್ನ, ಕಾಣದಲೆ ಇರಲಾರೆ
ಮಲ್ಲೀಗೆ ನಿನಮಾಯ ಬಿಡಲಾರೆ | ಸಮುದರದ
ಮುತ್ತ ನಿನ್ನಗಲಿ ಇರಲಾರೆ ||

ಕಾಣದಲೆ ಇರಲಾರೆ, ಕನ್ನುಡಿ ಮುಖದವರ
ಕಾಮನಗಿಂತ ಜೆಲುವರ | ಚೆನ್ನಿಗರ
ಕಾಣದರಗಳಿಗೆ ಇರಲಾರೆ ||

ಆಸಾಡ ನೀ ಗಾಳಿ, ಬೀಸ ನನ್ನರಮನಿಗೆ
ಲೇಸು ಮಾರಾಯರ ಮಂಚಕ | ಸುತ್ತಿರಗಿ
ಬೀಸು ಸೂವರದ ಸುಳಿಗಾಳಿ ||

ಬಾಗೇದ ಲಕ್ಕಸಮಿ, ಬಾಗಿಲಕ್ಯಾಕದಿಯ
ನೇಗಿಲ ಬಂದೆತ್ತು ತುಳಿದಾವ | ರಾಯರ
ತೂಗ ಮಂಚಕ ಇರಬಾರ ||

ಸಾವಿರ ಕೊಟ್ಟರು, ಸವತಿಯ ಮನಿಬ್ಯಾಡ
ಸಾವಿರದಮ್ಯಾಲ ಏನೂರು | ಕೊಟ್ಟರು
ಮಲಮಕ್ಕಳಿರುವ ಮನಿಬ್ಯಾಡ ||

ಸವತಿ ಸವತೆರ ಜಗಳ, ಪಟ್ಟೆಮಂಚದ ಮ್ಯಾಲೆ
ಹೊನ್ನಸರ ಹರಿದು ಬಳಿ ಒಡೆದು | ನನ ಸವತಿ
ವಾಲಿ ಕಿತ್ತ್ಹೋಯ್ತು ಬಿಡ ಸೆರಗ ||

ಸಾವುತನಕ ಬಿಡದು, ಸವತಿ ಮಕ್ಕಳ ಜಗಳ
ಸರಿ ಮನ್ಯಾಗಿರುವ ನೇಗೆಣ್ಣಿ | ನಿನ ಜಗಳ
ಬ್ಯಾರ್ಯಾಗುತನಕ ಬಿಡಲಿಲ್ಲ ||

ಹಡೆದ ತಾಯಿಯ ಮುಂದ, ಹಾಲುಕುಡಿದರು ಸಿಂದ
ಮಲತಾಯಿ ಮುಂದ ಮರಿಗುದರಿ | ಏರಿದರ
ಮನವಾಗ ಲಟಕ ಮುರಿದಾಳ ||

ಹಾಸೀಗೆ ಹಾಸೆಂದ, ಮಲ್ಲೀಗಿ ಸೂಸೆಂದ
ಬ್ಯಾಸತ್ರ ಮಡದಿ ಮಲಗೆಂದ | ಚೆಂಜೀಕಿ
ತನ್ನೋಡಿ ತವರ ಮರೆಯೆಂದ ||

ಚಿಂತಾಕ ಇಟಗೊಂಡು, ಬೆಂಕಿಗ್ಹೋಗುವ ನಾರಿ
ಚಿಂತಿ ಇಲ್ಲೇನ ನಿನಗೇಟು | ನಿಮರಾಯ
ಕೆಂಚೇರಗೂಡ ನಗತಾನ ||

ನಕ್ಕರ ನಗಲೆವ್ವ, ನಗೆ ಮಾರಿಕ್ಯಾದೀಗೆ
ನಾ ಮುಂಚೆ ಮುಡಿದ ಪರಿಮಳ | ಪಚ್ಛೇದ್ಹೂ
ಅವಳೊಂದು ಜಾವ ಮುಡಿಯಲೆ ||

ತಂದಾರ ತರಲೆಂದೆ, ತಂಗ್ಯಾಗಿ ಇರಲೆಂದೆ
ವಾ ಬಿಟ್ಟಿ ಜವಳಿ ಉಡಲೆಂದೆ | ನನಗಾಕಿ
ಜೋಡಾಗಿ ಕೂಡಿ ಇರಲೆಂದೆ ||
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...