ಹುಳವೇ ಸಾಕಾಗಿತು
..ಯು ಯಾಕಾಗಿತ್ತು?
ಅದರಾ ಸುಂಕಾ-
ಇದರೀ ಬಿಂಕಾ-
ಮೈ ಮೈಗೂ; ಹೂ ಹೂವು ಹೂವಿಗೂ.
ಅನುಭವಿಸಿದ ಮನ ಮರೆತೀತೇನು?
ತುರಿಸಿದ ಹಾಗೆಯೆ ತೀರದ ತುರಿಯು.
ಯಾ ಮಳೆ ಹನಿಗೇ ಹುಳ ಹುಟ್ಟಿತ್ತು.
ಬೇರೆಯದಕ್ಕೋ ಕಟ್ಟಿತು ಮುತ್ತು.
ಪಾತರಗಿತ್ತಿಗೆ ಹೂವಿನ ಮುತ್ತು;
ರಾಣಿಯ ಕೊರಳಿಗೆ ಸಿಂಪಿನ ತುತ್ತು;
ಕಂಬಳಿ ಮುಸುಕಿನೊಳೇನೇನಿತ್ತೋ
ಕುಣಿದಾಡುವ ಹುಳ ಹೊರಬಿದ್ದಿತ್ತು.
ಹುಳ ಹುಟ್ಟಿಸುವಾ ಕಾಲವ ನೂಕು
ಹುಳವ ಹೊಡೆಯುವಾ ಬಿಸಿಲೂ ಬೇಕು
ಬಾನಿಂದಲೆ ಹಸಿ, ಬಾನಿಂದಲೆ ಬಿಸಿ.
ನೆಲದ ಬೀಜಗಳಿಗದೆ ಬಯಲು.
ಬೆಳೆಸುವ ಬಯಕೆಗೆ ಅರಿವಿರಬೇಕು.
ಸಾವನು ನೂಕದು ಹುಸಿ ಹುಯಿಲು.
*****

















