ಭವ್ಯ ಭಾರತದ ರಾಷ್ಟ್ರ ಪತಿಗಳೂ ಮಕ್ಕಳ ಪ್ರೇಮಿ ಭಾರತದ ಕನಸುಗಾರ ಸರ್ವ ಜನಾಂಗದ ನೊಬೆಲ್ ಮ್ಯಾನ್ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ತೀರಿಕೊಂಡರು. ತೀರಿಕೊಳ್ಳಬಾರದಿತ್ತು!
ಅವರು ಸಾಹಿತ್ಯ ಪ್ರೇಮಿಯಾಗಿದ್ದರು. ಹಲವಾರು ಕೃತಿಗಳನ್ನು ರಚಿಸಿರುವರು. ಇವರ ಬಹುಮುಖ್ಯವಾದ ಐದು ಕೃತಿಗಳನ್ನು ಪಂಚಮವೇದವೆಂದು ಕರೆಯಬಹುದು.
ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಈ ಐದು ಕೃತಿಗಳನ್ನಾದರೂ ಓದಲೇಬೇಕು.
ಅವುಗಳನ್ನು ನಾವು ಪಂಚಮ ವೇದಗಳೆಂದು ಕರೆಯಬಹುದು. ಅದರಲ್ಲಿ ಪಂಚಶೀಲತತ್ವಗಳಿವೆ. ಏನೆಲ್ಲ ಇದೆಯೆಂಬುದನ್ನು ನಮ್ಮ ಭಾರತೀಯರೆಲ್ಲ ಹೆಮ್ಮೆ ಪಡಬೇಕಾಗಿದೆ.
೧. ವಿಂಗ್ಸ್ ಆಫ್ ಫೈರ್- ಇದೊಂದು ಆತ್ಮಕಥೆ. ಹುಟ್ಟಿನಿಂದ ತಮ್ಮಳ್ಳಿಯಿಂದ ದಿಲ್ಲಿಯತನಕ ೧೯೯೨ರ ತನಕದ ಕಥೆ ಸಾಗುತ್ತದೆ. ಒಬ್ಬ ಬಡ ಹುಡುಗ ಪೇಪರ್ ಹಾಕುವ ಹುಡುಗ ರಾಷ್ಟ್ರಪತಿಯಾಗುವ ತನಕ ಬೆಳೆಯಬಹುದು, ಅದಕ್ಕೆ ಬೇಕಾಗಿರುವುದು ಪರಿಶ್ರಮ, ಸಂಶೋಧನಾ ರಂಗದಲ್ಲಿ ತಮ್ಮೊಂದಿಗೆ ಕೈಜೋಡಿಸಿದ ಹಲವು ಮಹನಿಯರನ್ನು ಪರಿಚಯಿಸುತ್ತಲೇ ವಿಕ್ರಮ್ ಸಾರಾಬಾಯ್, ಡಾ|| ಬ್ರಹ್ಮಪ್ರಕಾಶ್ ಅವರನ್ನು ಸ್ಮರಿಸುವರು.
೨. ಎರಡನೆಯ ವೇದ ಸಮಾನವಾದ ಕೃತಿ. ಟರ್ನಿಂಗ್ ಪಾಯಿಂಟ್ ಆಗಿದ್ದು, ೧೯೯೨ ರಿಂದ ಮುಂದುವರೆದ ಕಥೆಯಾಗಿದೆ. ಇದು ವಿಂಗ್ಸ್ ಆಫ್ ಫೈರ್ ಕೃತಿಯ ಮುಂದಿನ ಭಾಗವು. ವಿಷನ್ ೨೦೨೦ ಗೆ ಮುನ್ನುಡಿಯಾಗಿದೆ.
೩. ಇಂಡಿಯಾ ೨೦೨೦. ಭವ್ಯ ಭಾರತವು ಇಡೀ ವಿಶ್ವದಲ್ಲೇ ಬೃಹತ್ ರಾಷ್ಟ್ರವಾಗಿ ನಾಲ್ಕನೆಯ ಮುಂದುವರೆದ ಆದರ್ಶ ರಾಷ್ಟ್ರವಾಗುವುದೆಂದು ಭವಿಷ್ಯ ನುಡಿದಿರುವರು. ನಮ್ಮ ದೇಶ ಹಸಿರುಕ್ರಾಂತಿ, ಬಾಹ್ಯಾಕಾಶ ಸಂಶೋಧನೆಯಿಂದಲೇ ಪ್ರಬಲ ರಾಷ್ಟ್ರವಾಗಲು ಸಾಧ್ಯವೆಂದು ಅಂಕಿ ಅಂಶಗಳ ಒದಗಿಸಿರುವರು.
೪. ನಾಲ್ಕನೆಯ ವೇದವಾಗಿ ಇವರ ಇಗ್ನೈಟೆಡ್ ಮೈಂಡ್ ಕೃತಿ ನಮ್ಮೆದುರಿಗೆ ಎದ್ದು ನಿಲ್ಲುವುದು. ಮಕ್ಕಳೊಂದಿಗೆ ಇವರೂ ಮಕ್ಕಳಾಗಿ ಕಾಲ ಕಳೆದ ರಸ ಘಳಿಗೆಗಳನ್ನು ಬಲು ರಸವತ್ತಾಗಿ ದಾಖಲಿಸಿರುವರು. ಬಲು ದೊಡ್ಡದಾಗಿ ಕನಸು ಕಾಣಬೇಕು. ಬಹು ದೊಡ್ಡದಾಗಿ ಯೋಚಿಸಬೇಕೆಂದೂ ಇಗೋ+ಸ್ಪಿರಿಟ್ ಭ್ರೂಣಗಳ ಸಂವಾದವು ಮುಂದಾಲೋಚನೆಗೆ ಉತ್ತಮ ಸಂವಾದವಾಗಿದೆ. ಈ ಕೃತಿ ೨೦೦೨ ರಲ್ಲಿ ಹೊರ ಬಂದಿದೆ. ಜಗತ್ತಿಗೆ ಸುಪರಿಚಿತವಾಗಿದೆ.
೫. ಪಂಚಮ ವೇದವಾಗಿ ಇನ್‌ಡಾಮಿಟೇಬಲ್ ಸ್ಪಿರಿಟ್- ಈ ಕೃತಿ ಭವ್ಯ ಭಾರತದ ಆದರ್ಶಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಅಪ್ಪಟ ವೀರ ಸನ್ಯಾಸಿಯಾಗಿ ಆದರ್ಶ ಬ್ರಹ್ಮಚಾರಿಯಾಗಿ ಭಾರತೀಯ ನಾರಿಮಣಿಯರನ್ನು ದೇವತೆಗಳೆಂದು ಹೃದಯ ತುಂಬಿ ಒಪ್ಪಿ ಅಪ್ಪಿ ಹಾಡಿ ಹೊಗಳಿರುವರು. ಇದು ಇವರ ಹೃದಯ ಶ್ರೀಮಂತಿಕೆಯನ್ನು ಸಾರುವುದು.
ಈ ಎಲ್ಲ ಕೃತಿಗಳು ನೊಬೆಲ್ ಬಹುಮಾನ ಕೃತಿಗಳಿಗೂ ಮಿಗಿಲು. ಯಾಕೋ ಇವರಿಗೆ ಸಲ್ಲಬೇಕಾದ ಕೀರ್ತಿ ಲಭಿಸಲಿಲ್ಲವೆಂದು ನನ್ನ ಭಾವನೆ.
ಇವಲ್ಲದೆ ಇನ್ನು ಮಹತ್ತರ ಕೃತಿಗಳನ್ನು ರಚಿಸಿರುವರು. ಇವರ ಕುರಿತು ರಚಿತವಾದ ಕೃತಿಗಳು ನೂರಾರು. ಎಲ್ಲ ಭಾಷೆಗಳಲ್ಲಿ ಬಂದಿವೆ. ಅವರಿನ್ನೂ ಜೀವಂತವಿರುವರು.
ಈಗ ಅವರ ಕೃತಿಗಳು ಮಾತನಾಡುತ್ತಿವೆ. ಜೀವನವೆಂದರೆ ಇದಲ್ಲವೇ? ಪಂಚಮವೇದವಲ್ಲವೇ??
*****


















