ಬರೆದವರು: Thomas Hardy / Tess of the d’Urbervilles
ನಾಯಕನು ಮಹಾರಾಜರನ್ನು ನೋಡುವುದಕ್ಕೆಂದು ಮೈಸೂರಿಗೆ ಹೋಗಿದ್ದಾನೆ. ಮಜ್ಜಿಗೆ ಹಳ್ಳಿಯ ಅರಮನೆಯಲ್ಲಿ ಗದ್ದಲವೋ ಗದ್ದಲ, ಆ ರಾತ್ರಿ ಮಲ್ಲಿಯು ಮಂಚದ ಮೇಲೆ ಮಲಗಬೇಕು ಎಂದು ರಾಣಿಯ ಆಸೆ. ಬುದ್ದಿಯವರಿಲ್ಲದೆ ತಾನು ಮಂಚದ ಮೇಲೆ ಮಲಗು ವುದಿಲ್ಲವೆಂದು ಅವಳ ಹಟ.
“ಹಾಗಾದರೆ ಎಲ್ಲಿ ಮಲಗುತ್ತೀಯೇ?”
“ಇಲ್ಲೇ ಒಂದು ಚಾಪೆಯ ಮೇಲೆ!”
“ಕೂಡದು. ನಾನೂ ನಿನ್ನ ಜೊತೆಗೇ ಬರುತ್ತೇನೆ.”
ಉಂಟಾ ಬುದ್ಧಿ, ತಮ್ಮ ಮೈ ಒತ್ತುತ್ತದೆ. ಕೂಡದು.”
“ನಿನಗೆ ಒತ್ತೋಕಿಲ್ಲವಾ?”
“ಬಾಳೇಹಣ್ಣಿನ ಗುಡಾಣದಲ್ಲಿ ಬೆಳೆದದ್ದು ಅಲ್ವಾ!”
“ಅಲ್ಲಾ, ಮಲ್ಲಮ್ಮಣ್ಕಿ ನೀನು ಹಿಂಗನ್ನೋದು ನ್ಯಾಯವಾ? ಜೊತೆ ಜೊತೆ ಎತ್ತುಗಳ ಹಂಗಲ್ಲವಾ ನಾವು. ನಿನಗೆ ಬೇಡವಾದ್ದು ನನಗೆ ಬೇಕಾದೀತಾ? ಬುಡು.?
“ಬುದ್ಧಿ, ತಾವು ಹಂಗನ್ನಬಾರದು. ತಾವು ಮಹಾಲಕ್ಷ್ಮಿ ಹಂಗೆ ದೊಡ್ಡ ಮನೆಯಲ್ಲಿ ಹುಟ್ಟಿ ಅರಮನೆ ಸೇರಿದವರು. ತಮ್ಮ ಮನಸ್ಸಿಗೆ ನೋವಾಗೋ ಹಂಗಿದ್ದರೆ, ಆಗಲಿ. ತಮ್ಮ ಪಾದದಲ್ಲಿ ಉರುಟು ಕೋತೀನಿ. ಆದರೂ ಬುದ್ದಿ, ಅಭ್ಯಾಸ ಆಗಲಿ, ಬಿಡಬಾರದಾ?”
ಅವಳ ಪ್ರಾರ್ಥನೆಯಲ್ಲಿ ಏನೋ ಗುರುತಿಸುವುದಕ್ಕೂ ಕಷ್ಟವಾದ ಭಾವವಿತ್ತು. ರಾಣಿಯು ಅದನ್ನು ಸಹಿಸಲಾರದೆ ಅವಳನ್ನು ಬಿಟ್ಟು ಎರಡು ಹೆಜ್ಜೆ ಹೋಗಿದ್ದವಳು ಒಂದಿರುಗಿ ಬಂದು ಮಾತೇ ಆಡದೆ ಅವಳ ನಡುವಿಗೆ ಕೈಹಾಕಿ ಕೆರೆದುಕೊಂಡು ಹೋಗಿ ಹಾಸುಗೆಯ ಮೇಲೆ ಮಲಗಿಸಿ ಕೊಂಡಳು.
*****
ಮುಂದುವರೆಯುವುದು


















