ಗೆಳೆಯ ಅರಿತುಕೊ ಈ ಬಾಳೊಂದು ಕ್ಷಣಿಕ
ಆಸೆಗಳೇಕೆ ನಿನ್ನದು ನೂರು
ಬದುಕಿಗೆ ಅರ್ಥವೇ ಇಲ್ಲದ ಮೇಲೆ
ಮತ್ತೆ ಯಾವುದಕ್ಕೆ ಈ ತಕರಾರು
ಎಲ್ಲಿಂದ ಬಂದೆಯೇ ಅಲ್ಲಿಗೆ
ನೀನು ಹೋಗಲೇ ಬೇಕಲ್ಲವೆ!
ಬರುವಾಗ ಬತ್ತಲೆ ಮತ್ತು ಹೋಗುವಾಗ
ನೀ ಬತ್ತಲೆ ತಿಳಿಯಬೇಕಲ್ಲವೆ!
ಸ್ವಾರ್ಥ ಅಮಿಷೆ, ಅಹಂಕಾರಗಳೇ
ನಿನ್ನ ಒಡನಾಡಿಗಳಾದವೆ!
ನೀನು ನಿನ್ನ ನಿಜ ರೂಪ ಅರಿಯದೇ
ಬುದ್ಧಿಮನ ಕಂಗಲಾದಾವೆ!
ಯಾರನ್ನು ನೀನು ಸುಧಾರಿಸುವುದು
ಮತ್ತೆ ನಿನ್ನಿಂದ ಸಂತೋಷ
ನಿನ್ನ ನೀನು ತಿಳಿಯದೆ ಹೋದರೆ
ಉಳಿದೆಲ್ಲವೂ ನಿನಗೆ ವಿಷ
ಅದೋ ಮೃತ್ಯು ನಿನಗೆ ಕಾಯ್ದಿದೆ
ಅದು ಮರೆತು ಮತ್ತೇನು
ಮುಪ್ಪು ನಿನ್ನದು ಘೋರ ಸ್ವಪ್ನ
ಮಾಣಿಕ್ಯ ವಿಠಲ ಧ್ಯಾನಿಸಲಾಗದೇನು!
*****
















