ಯುಗ ಯುಗದ ಇತಿಹಾಸಗಳೆಲ್ಲ
ಮಾನವನ ರಕ್ಕಸಕ್ಕೆ ಸಾಣಿ ಹಿಡಿದಿವೆ
ಭೂಮಿಯೇ ತನ್ನದೆನ್ನುವವನ
ಭವಿಷ್ಯ ಪ್ರಳಯದಲಿ ಅಡಗಿವೆ
ಎಷ್ಟೆಗಳಿಸಿಯೂ ಅವರು ಉಳಿಸಲಿಲ್ಲ
ಮತ್ತೆ ಬಂಜರಾದರೂ ಅವರು
ಸಾವಿನ ಕ್ಷಣಗಳಲಿ ಹಪ ಹಪಿಸಿ
ಕಳೆದ ಆಯಸ್ಸಿಗೆ ಕಂಗಾಲಾದರು
ಎತ್ತರಕ್ಕೆ ಹಾರಿದವರು ಭೂಮಿಯಲಿ
ಧನಿಕರೆಲ್ಲ ಮಣ್ಣಲಿ ಕರಗಿದರು
ತನ್ನದೆಲ್ಲವೂ ಇಲ್ಲೆ ಚೆಲ್ಲಿ
ಬರಿಗೈಯಲಿ ನೆಲಕ್ಕೊರಗಿದರು
ಅರಸು ಭಿಕ್ಷುಕ ಪುರುಷರು
ಮತ್ತೆ ಇಚ್ಛಾ ಮರಣಿಗಳೆಲ್ಲರೂ
ನಾಶವಾದರೂ ನಿಸರ್ಗ ಮಡಿಲಲ್ಲಿ
ಮಾಣಿಕ್ಯ ವಿಠಲನ ಮರೆತರಿಲ್ಲಿ
*****
















