ದೀಪ ಬೆಳಗಿತೊ ಜ್ಯೋತಿ ಬೆಳಗಿತೊ
ಕರುನಾಡು ತುಂಬೆಲ್ಲ ಬೆಳಕು ಹರಿಯಿತೊ
ಮನೆ ಮನೆಯಲಿ ಸಂತಸ ತುಂಬಿತ್ತೊ
ಮನ ಮನದಲಿ ಚೈತನ್ಯ ಮೆರೆಯಿತೋ
ಅಮವಾಸ್ಯೆ ರಾತ್ರಿಗಳಲ್ಲಿ ಚಂದ್ರ ಬಂದನೊ
ಕತ್ತಲದ ಬೂಮಿಯಲಿ ಬೆಳಗು ತಂದನೊ
ಗಿಡದ ತುಂಬೆಲ್ಲ ಮೊಗ್ಗು ಬಿರಿಯಿತೊ
ಮುಳ್ಳಿಲ್ಲದ ಕೇಡಿಲ್ಲದ ಹೂ ಅರಳಿತೊ
ಮನದ ಮೂಲೆ ಮೂಲೆಗೆ ತ್ಯಾಗ ಉದಿಸಿತೊ
ಬಿರಿಯುವ ಕಾನನದಲಿ ಹಿಮವು ಸುರದಿತ್ತೊ
ನನ್ನ ನಿನ್ನ ಭಾವದ ಭೇದ ಅಳಿಯಿತೊ
ಭಕ್ತಿ ಭಕ್ತಿ ರಂಗಿನ ಬಣ್ಣ ರಂಗಿತೊ
ಮಂದಿರದ ಗೋಪುರದಲಿ ಗಂಟೆ ಭಾರಿಸಿತೋ
ಭಾವಗರ್ಭದಲ್ಲಿ ಜ್ಞಾನ ಮೊಳೆಯಿತೊ
ಗಗನದ ತಾರೆಗಳು ತಾನೇ ಮಿಂಚಿದವೊ
ಮಾಣಿಕ್ಯ ವಿಠಲನ ರಾಜ್ಯ ಬೆಳಗಿತ್ತೊ
*****
















