ಜನಸಂಖ್ಯೆ ಕತೆ

ಜನಸಂಖ್ಯೆ ಕತೆ

ಭವ್ಯ ಭಾರತದ ಜನಸಂಖ್ಯೆಯೂ ಯಾರ ನಿಯಂತ್ರಣದಲ್ಲಿಲ್ಲ. ಬರೀ ಕಾಗದ ಪತ್ರ ಘೋಷಣೆಗಳನ್ನು ಬಿಟ್ಟರೆ, ಯಾವುದೇ ಒತ್ತಡ ಅರಿವು ಜಾಗ್ರತೆ ಮೂಡಿಸುವ ನಿಟ್ಟಿನಲ್ಲಿ ನಮ್ಮಲ್ಲಿ ಇಲ್ಲ.

ಕ್ರಿಸ್ತ ಶಕ ದಿನಾಂಕ ೩೦-೧೨-೨೦೨೨ರ ವೇಳೆಗೆ ಭವ್ಯ ಭಾರತದ ಸಂಖ್ಯೆಯು ಚೀನಾ ದೇಶವನ್ನು ಹಿಂದಿಕ್ಕಿ ಭಾರೀ ಮೇಲುಗೈ ಸಾಧಿಸಲಿದೆಯೆಂದು ಇತ್ತೀಚೆಗೆ ೨೦೧೫ರ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದ ವಿಶ್ವಸಂಸ್ಥೆಯ “ವಿಶ್ವ ಜನಸಂಖ್ಯೆ ನಿರೀಕ್ಷೆಗಳು ೨೦೧೫ರ ಪರಿಷ್ಕರಣೆ” ಎಂಬ ಅಧ್ಯಯನ ವರದಿಯಲ್ಲಿ ವಿವರಿಸಿರುವುದು.

ವಿಶ್ವದಲ್ಲಿ ಸದ್ಯ ಚೀನಾ- ಭಾರತ ದೇಶಗಳು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬಹುದೊಡ್ಡ ರಾಷ್ಟ್ರಗಳಾಗಿವೆ. ೨೦೨೨ರ ವೇಳೆಗೆ ಭಾರತವು ಚೀನಾ ದೇಶವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವೆಂದು ಗುರ್‍ತಿಸಿಕೊಳ್ಳಲಿದೆಯೆಂದೂ ಇಡೀ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ೧೯% ರಷ್ಟು ಚೀನಾದ ಜನಸಂಖ್ಯೆ ಯಾಗಿದ್ದರೆ ಶೇಕಡಾ ೧೮% ರಷ್ಟು ಭವ್ಯ ಭಾರತದ್ದಾಗಿದೆಯೆಂದು ವಿಶ್ವಸಂಸ್ಥೆ ದಿನಾಂಕ ೦೬-೦೮-೨೦೧೫ರಂದು ಬಹಿರಂಗ ಪಡಿಸಿದೆ.

ನೈಜೀರಿಯಾ ಏಷ್ಯಾದ ಐದು ರಾಷ್ಟ್ರಗಳಾದ ಬಾಂಗ್ಲಾದೇಶ, ಚೀನಾ, ಭವ್ಯಭಾರತ, ಇಂಡೋನೇಷ್ಯಾ ಹಾಗೂ ಪಾಕಿಸ್ತಾನ, ಲ್ಯಾಟಿನ್ ಅಮೇರಿಕಾದ ಎರಡು ದೇಶಗಳಾದ ಬ್ರೆಜಿಲ್ ಮತ್ತು ಮೆಕ್ಸಿಕೊ, ಉತ್ತರ ಅಮೆರಿಕ ಹಾಗೂ ಯುರೋಫ್ (ರಷ್ಯಾ ಒಕ್ಕೂಟ) ಇವೆಲ್ಲವು ಜಗತ್ತಿನ ತೀರಾ ಹೆಚ್ಚೆಚ್ಚು ಜನಸಂಖ್ಯೆವುಳ್ಳ ಹತ್ತು ಬೃಹತ್ ರಾಷ್ಟ್ರಗಳೆನಿಸಿವೆಯೆಂದು ವಿಶ್ವಸಂಸ್ಥೆಯು ತೀರಾ ಕಳವಳ ವ್ಯಕ್ತಪಡಿಸಿ ಅಂಕಿ ಅಂಶಗಳನ್ನು ಕೂಡಾ ಬಿಡುಗಡೆ ಮಾಡಿರುವುದು.

ಇಡೀ ವಿಶ್ವದ ಒಟ್ಟು ಜನಸಂಖ್ಯೆಯು ೨೦೧೫ಕ್ಕೆ ೭೩೦ ಕೋಟಿ ಇರುವುದು. ಇದೇ ಜನಸಂಖ್ಯೆಯು ೨೦೩೦ಕ್ಕೆ ಒಂದು ಅಂದಾಜಿನ ಪ್ರಕಾರ ೮೫೦ ಕೋಟಿ ಬೆಳೆಯುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆಯೆಂದು ವಿಶ್ವಸಂಸ್ಥೆಯ ಅಧ್ಯಯನ ವರದಿಯು ಬಹಿರಂಗಗೊಳಿಸಿರುವುದು.

ಆದ್ದರಿಂದ ಪ್ರತಿ ಮನೆಮನೆಯಲ್ಲಿ, ಹಳ್ಳಿಹಳ್ಳಿಗಳಲ್ಲಿ, ಪಟ್ಟಣ ಪ್ರದೇಶಗಳಲ್ಲಿ ಒಂದು ಬೇಕು ಎರಡು ಮಕ್ಕಳು ಸಾಕು. ಹೆಣ್ಣಿರಲಿ ಗಂಡಿರಲಿ ಎರಡು ಮಕ್ಕಳಿರಲಿ ಎಂದು ಕಡ್ಡಾಯ ಮಾಡುವ ಕಾಯ್ದೆ ಕಾನೂನು ಕಟ್ಟುನಿಟ್ಟು ಮಾಡುವ ಎಲ್ಲಾ ಮನ ಒಲಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ನೀವು ಸಾಗೋಣವಲ್ಲವೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೌಳವ ಮಾತೆ
Next post ಕುಬಸಾ ಮಾಡೂ ಹಾಡು

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…