ಸನ್ಯಾಸಿ ರತ್ನ

ಯಿಂದ್ ಒಬ್ಬ ಬೌದ್ದ ಸನ್ಯಾಸಿ
ಮರದಡಿ ತನ್ನ ಬಟ್ಟೆ ಆಸಿ
ಕುಂತಿದ್ದ ಪದುಮಾಸನಾಕಿ-
ಕಣ್ ಮುಚ್ಚೋದ್ ಒಂದೇನೆ ಬಾಕಿ! ೧

ಕಾಲಿಗ್ ಔನ್ ಮುಂದಾಗ ತೊದಲು
ಬಂದಂಗೆ ಯೆಣ್ ಒಬ್ಳು ಓದ್ಲು-
ಘಮ್ಮಂತ ವಾಸ್ನೆ ಸುಳದಂಗೆ!
ಫಳ್ಳಂತ ಮಿಂಚು ವೊಳದಂಗೆ! ೨

ತಂಗೆ ಕಣ್ ಮಾಡ್ದೊಳ ಕುರ್‍ತಿ
‘ಚಂದದೀ ದೇದಾಗ ಬರ್‍ತಿ
ಒಲ್ಸೇನೆ!’ ಅಂದಿ ಸನ್ನಾಸಿ
‘ಛೆ’ ಅಂದ ಮನದಾಗ ಯೇಸಿ ೩

‘ಒರಗೀನ್ ಅಲಂಕಾರ ತಳಕು!
ಒಳಗಿನ್ದ ಕಂಡ್ರೇನೆ ಬೆಳಕು!’
ಅಂದಿ ಆ ಬೌದ್ದ ಸನ್ನಾಸಿ
ಯಾರ್‍ತಿದ್ದ ಸತ್ಯಾನ ಸೋಸಿ! ೪

ನಾನೂನೆ ಅಂಗೆ ಸನ್ನಾಸಿ!
ಮೂರೊತ್ತು ಯೆಂಡಾನ ಮೂಸಿ
ಮರ್‍ತ್ ಬುಡ್ತೀನ್ ಬುಂಡೇನ ತುರ್‍ತು!
ಒಳಗೀನ್ ಒಂದ್ ಯೆಂಡೆ ನಂಗ್ ಗುರ್‍ತು? ೫
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಮ್ಮ
Next post ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ?

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…