ಕೋಲು ಕೋಲೆನ್ನ ಕೋಲೇ ರನ್ನದಾ
ಕೋಲಂಬುದ ಮೇಲನ್ನಿರೇ

ಹಡಗು ಹಳ್ಳಕೆ ಹೆಚ್ಚು ಗುಡುಗು ಮಳೆಗೆ ಹೆಚ್ಚು
ನಕ್ಷತ್ರ ಹೆಚ್ಚು ಗಗನಕ್ಕೆ | ರನ್ನದಾ ಕೋಲು || ೧ ||

ಆಶೇ ಆಡುವರ ಕಂಡೆ ದೋಶೇ ಸುಡುವರ ಕಂಡೆ
ದಾಶಪ್ನ ಕಂಡೆ ಗಿರಿಮೇನೇ || ೨ ||

ಹಾಡಗೆ ಹಾಡಲಲ್ಲ ಬೇಡಗೆ ನಗೆಯಲ್ಲ
ಕೋಡ ನಿನ ಕೈಗೇ ಬಳೆಯಿಲ್ಲ | ರನ್ನದಾ ಕೋಲಾ || ೩ ||

ಹಕ್ಕೀಗೆ ಹಲ್ಲು ಇಲ್ಲ ಕಪ್ಪೇಗೆ ಕೆಮಿಯಿಲ್ಲ
ಹತ್ತು ಕಾಲೇಶಿಡೀಗೆ ತಲೆಯಿಲ್ಲ | ರನ್ನದಾ ಕೋಲು || ೪ ||

ಬಾಳೇಗೆ ಕೆಂಚವಿಲ್ಲ ಬಸಳೇಗೆ ಮುಳ್ಳುವಿಲ್ಲ
ಶೂಳೆ ಹೇಳಿದ ಮಾತೂ ನಿಜವಲ್ಲ | ರನ್ನದಾ ಕೋಲು || ೫ ||
*****
ಹೇಳಿದವರು: ದೇವು ನಾಗು ಗುನಗ (ಗೌಡ), ಆಡಲೂರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.