ಬೇವಿನ ಮರದ ಬಗೆಗೆ ನೀವೇನು ತಿಳಿದುಕೊಂಡಿದ್ದೀರಿ?

ಬೇವಿನ ಮರದ ಬಗೆಗೆ ನೀವೇನು ತಿಳಿದುಕೊಂಡಿದ್ದೀರಿ?

ಉತ್ತರ ಕರ್ನಾಟಕದ ಪ್ರತಿ ಊರಿನಲ್ಲಿಯೂ ಗುಡಿ, ಕಟ್ಟೆ, ರಸ್ತೆ ಎಲ್ಲೆಂದರಲ್ಲಿ ಬೇವಿನ ಮರವನ್ನು ಬೆಳೆಸುತ್ತಾರೆ. ಇದು ಅಲ್ಲಿಯ ಸೆಕೆಯುಳ್ಳ ಕಾಲದ ಜನಕ್ಕೆ ತಂಪೆರೆಯುವ ಮರವೂ ಹೌದು. ಜನಪದ ಕವಿಕೂಡ “ಬ್ಯಾಸಗಿ ದಿವಸಕ ಬೇವಿನ ಮರತಂಪ, ಭೀಮಾರತಿ ಎಂಬ ಹೊಳೆತಂಪ” ಎಂದು ಪದವನ್ನೇ ಕಟ್ಟಿದ್ದಾನೆ. ಈ ಗಿಡದಿಂದಾಗುವ ಅಮೂಲ್ಯ ಉಪಯೋಗಗಳನ್ನು ಕೂಡ ಉತರ ಕರ್ನಾಟಕದ ಜನಕ್ಕೆ ಗೊತ್ತಿದೆ. ಬಾಣಂತಿಯರಿಗೆ ಇದನು ಬಳಸುತ್ತಾರೆ. ಇದರ ವಾಸನೆ ಬಡಿದರೆ ಕ್ರಿಮಿಕೀಟಗಳು ಹತ್ತಿರಬರುವುದಿಲ್ಲ, ಜತೆಗೆ ಈ ಮರವನ್ನು ಕಡಿದಾಗ ಮನೆಗೆ ತೊಲೆ ಸೌದೆಗಳಿಗೆ ಬಳೆಸಬಹುಡು. ಇದರಬೀಜಗಳು ಹಣ್ಣಾಗಿ ಉದುರಿದಾಗ ಸಂಗ್ರಹಿಸಿ ಇದರಿಂದ ಬೇವಿನ ಎಣ್ಣೆಯನ್ನು ತಯಾರಿಸಿ ಔಷಧಿ ಮಾಡುತ್ತಾರೆ. ಈ ಕಾರಣವಾಗಿ ಬೇವಿನಮರವನ್ನು ಸಹಜವಾಗಿ ಮನೆಮುಂದೆ ಬೆಳೆಸಲಾಗುತ್ತದೆ. ಇದರಿಂದ ಬೀಸಿಬರುವ ತಂಗಾಳಿ ಇನ್‌ಫ್ಲೂಯಾಂಜಾ ದಂತಹ ಸಾಂಕ್ರಾಮಿಕ ಜಾಡ್ಯವನ್ನು ಹೋಗಲಾಡಿಸುತ್ತದೆ. ಶೀತ ನೆಗಡಿಗೆ ಇದರ ವಾಸನೆ ಹೇಳಿ ಮಾಡಿಸಿದ ಔಷಧಿ. ಇದರ ಎಲೆಗಳ ಹೊಗೆಯನ್ನು ಮೂಗಿಗೆ ಹಿಡಿದರೆ ಸೀತದಂತಹ ಕಾಯಿಲೆಗಳು ದೂರವಾಗುತ್ತವೆ. ಇದರ ಕಡ್ಡಿಯನ್ನು ಬ್ರೆಶ್‌ನಂತೆ ಮಾಡಿ ಪ್ರತಿದಿನ ಹಲ್ಲುಗಳನ್ನು ಉಜ್ಜುತ್ತಾ ಬಂದರೆ ವಸಡುಗಟ್ಟಿಯಾಗುವುದಲ್ಲದೇ ದಂತಕ್ಷಯ ಮುಂತಾದ ಬಾಯಿ ಹುಣ್ಣುಗಳು ವಾಸಿಯಾಗುತ್ತವೆ. ಹಲ್ಲುಗಳೂ ಸಹ ಹೊಳೆಯುತ್ತವೆ.

ಬೇವಿನ ಎಲೆ, ಕಾಯಿ, ಕಡ್ಡಿ ಎಲ್ಲವೂ ಔಷಧಿ ಗುಣವನ್ನು ಹೊಂದಿರುತ್ತದೆ. ಬೇವಿನ ಎಲೆಗಳನ್ನು ಆಹಾರಧಾನ್ಯಗಳಲ್ಲಿ ಇಲ್ಲವೆ ಪುಸ್ತಕಗಳಲ್ಲಿರಿಸಿದರೆ ಅವು ಹುಳಗಳನ್ನು ದೂರ ಇರಿಸುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Bride Burning
Next post ಮುಗಿಯಿತೆ ನಾಟಕವು

ಸಣ್ಣ ಕತೆ

 • ಬಸವನ ನಾಡಿನಲಿ

  ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…