ಮೊಬೈಲ್ ಉಲಿಯುತ್ತಿದೆ ಒಂದೇ ಸಮನೆ
ರೀಚ್ ಆಗಲ್ಲ ರೀಚ್ ಆಗಲ್ಲ
ಅಷ್ಟು ಹೇಳಿ ಸುಮ್ಮನಾಗಬಾರದೇ
ಮತ್ತೆ ಟ್ರೈ ಮಾಡಿ ಎಂಬ ಒಗ್ಗರಣೆ ಬೇರೆ
ಹೌದೆ ? ಮತ್ತೆ ಪ್ರಯತ್ನಿಸಬಹುದೆ ?
ಇಷ್ಟು ಸಲ ಸೋತ ಮೇಲೂ ?
ನೆಪೋಲಿಯನ್‌ಗೆ ಇರುವೆಗಳು
ಹೇಳಿದವಂತೆ ಮರಳಿ ಯತ್ನವ ಮಾಡು
ಹಳೇ ಗಾದೆಯೂ ಹಾಗೇ ಹೇಳುತ್ತದೆ
ಸಧ್ಯ ಬದುಕು ಸತ್ತಿಲ್ಲ ಹಾಗಾದರೆ ?
*****