ಪೇಪರ್ ಪುಟ್ಟ

ಕೋಳಿ ಕೂಗೊ ಮೊದಲೆ
ಎದ್ದ ನಮ್ಮ ಪುಟ್ಟ
ಅಜ್ಜಿಗ್ಹೇಳಿ ಟಾಟ
ಸೈಕಲ್ ತುಳಿದು ಬಿಟ್ಟ

ಪೇಪರ್ ಬಂಡಲ್ ಹಿಡಿದು
ಸೈಕಲ್ಲಿಗೆ ಬಿಗಿದು
ಟ್ರಿಣ್ ಟ್ರಿಣ್ ಸದ್ದು ಮಾಡಿ
ಮುಂದಕ್ಹೋಯ್ತು ಗಾಡಿ

ಪ್ರತಿಮನೆಗೂ ಹೋಗಿ
ಪೇಪರ್ ಎಂದು ಕೂಗಿ
ಸುದ್ದಿ ಮುಟ್ಟಿಸಿ ಪುಟ್ಟ
ಕೆಲಸ ಮುಗಿಸಿಬಿಟ್ಟ

ಕಾಫಿ ಕೈಲಿ ಹಿಡಿದು
ಪೇಪರ್ ಬಂತೆ ಎಂದು
ಎಲ್ಲ ಕಾಯ್ವರಿವನ
ನೋಡಿ ಹರ್ಷ ವದನ

ಅಜ್ಜಿ ಕೊಟ್ಟ ಊಟ
ಟೀಚರ್ ಹೇಳಿದ ಪಾಠ
ಮೈಗೂಡಿಸಿಯೇ ಬಿಟ್ಟ
ಜಾಣನಾದ ಪುಟ್ಟ

ತಿಂಗಳೊಮ್ಮೆ ಕಳೆಯಲು
ಸಂಬಳವು ಸಿಕ್ಕಲು
ಅಜ್ಜಿ ಕೈಯಲಿಡುವ
ಒಂದೊಳ್ಳೆ ಪುಸ್ತಕ ಕೊಳುವ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಡಿಯಲ್ಲಿ ಕಾವ್ಯ
Next post ಬಾ ಮಳೆ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…