ಇಡು ಭಕ್ತಿ, ನಡೆ ಮುಂದೆ

ಅನುದಿನವು ಇಡು ಭಕ್ತಿಯನ್ನು ದೇವನಡಿಯಲ್ಲಿ
ಅನುಸರಿಸು ಸನ್ಮಾರ್‍ಗವನೆ ನಿತ್ಯ ಮುದದಿ.
ಎತ್ತಲುಂ ಕತ್ತಲೆಯು ಸುತ್ತಿಹುದು ದಾರಿಯನು
ಕಿತ್ತುಬಿಡು ಭಯವನ್ನು, ಎತ್ತು ಪೌರುಷವಾ.
ಅತ್ತಿತ್ತ ಕದಲದಿರು, ಚಿತ್ತವನು ಸ್ಥಿರಗೊಳಿಸು,
ಎತ್ತರದೊಳಿದೆ ತಾರೆ, ಉತ್ತಮದಿ ನಡಿಸಲ್.

ಕಡು ಭಯಂಕರವಾಗಿ, ನಡೆಯಲಸದಳವಾದ
ಕಡೆಗಾಣದಿಹಹಾದಿ ಹಿಡಿದು ನೀನಿರಲು,
ಒಡಲ ಬಲ ಲೆಕ್ಕಿಸದೆ, “ಬಡವಾದೆ, ನೊಂದೆ”ನದೆ
ಇಡು ಹೆಜ್ಜೆ, ನಡೆ ಮುಂದೆ, ಬಿಡು ಭೀತಿ ಭಯವಾ.

ಕೆಟ್ಟ ಕುಹಕೋಪಾಯ, ಕೆಟ್ಟ ತಂತ್ರಗಳನ್ನು
ಬಿಟ್ಟು ಬೆಳಕಿಗೆ ಅಂಜಿ, ಗುಟ್ಟಾಗಿರುವುದಂ,
ಬಟ್ಟೆ ತುದಿಯನು ಹೇಗೆ ಮುಟ್ಟಲಾಪುದೆ ನೋಡು!
ಕಟ್ಟಕಡೆಗಿರಲಿ ಜಯ! ಪಟ್ಟಿರಲಿ ಸೋಲು!

ಇದೆ ಸುರಕ್ಷಿತ ಮಾರ್ಗ! ಇದೆ ಸರಳ ಕಟ್ಟಳೆಯು!
ಇದೆ ಅಂತಃ ಶಾಂತಿ! ಇದೆ ಮನೋಬಲವು!
ಇದೆ ಸತ್ಪಥವ ತೋರೆ ಉದಯಿಸಿದ ಧ್ರುವ ತಾರೆ
ಇದನೆ ಪಠಿಸೈ ನೀನು, ಇದನೆ ಜಪಿಸುತಿರು.

ಕೆಲರು ಬರಿ ಹೊಗಳುವರು; ಕೆಲರು ಬರಿ ತೆಗಳುವರು;
ಕೆಲರು ಮತ್ಸರಿಸುವರು; ಕೆಲರು ಮೆಚ್ಚಿಪರು;
ಹಲವರನು ಮೆಚ್ಚಿಸುವ ಕೆಲಸವೇತಕೆ ನಿನಗೆ?
ಒಲಿಸು ಹರಿಯನು; ನಿನ್ನ ಕೆಲಸವನು ಸಲಿಸು.
*****
(ಸ್ವದೇಶಾಭಿಮಾನಿಯಿಂದ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೋಳೆಂದೊಡೇಂ? ಸಾಲ ಸುಳಿಗಾನ ಕಾರಣಮಿರಲು
Next post ಪ್ರಪಠ್ಯ ನೇಯುವ ಜಾಲ

ಸಣ್ಣ ಕತೆ

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…