ಸುಲಭವೆಂದೊಂದು ಬೆಳೆಯನಿರುವೆಲ್ಲ ಜಾಗ
ದೊಳು ರೈತ ತಾ ಬೆಳೆದನಿವಾರ್‍ಯದೊಳು ಮಾರುವ
ನೆಲ್ಲವನು ನೀಚ ಬೆಲೆಗೆ, ಉಳಿದೆಲ್ಲ ಬೇಕು
ಗಳಾನಂತರದೊಳ್ ಕೊಳ್ಳುವನುಚ್ಛ ಬೆಲೆಗೆ
ಬೆಲೆಯಿಲ್ಲದಾಗಿಹುದಿದರಿಂದ ರೈತಂಗಾತನುತ್ಪನ್ನಂಗೆ – ವಿಜ್ಞಾನೇಶ್ವರಾ
*****