ಶಿಲಪ್ಪದಿಗಾರಂ

ಶ್ರೀಯವರು ತಮಿಳು ಸಾಹಿತ್ಯದ ಸಾರವನ್ನು ಕನ್ನಡಿಗರಿಗೆ ಒದಗಿಸಿಕೊಡಬಯಸಿ ಒಂದೆರಡು ಮಹಾಗ್ರಂಥಗಳನ್ನು ಕನ್ನಡಕ್ಕೆ ಇಳಿಸಿದ್ದರು. ನಮ್ಮ ದುರ್ದೈವದಿಂದ ಎಲ್ಲವೂ ಗೆದ್ದಲಪಾಲಾಗಿ ಒಂದೆರಡು ತುಣುಕುಗಳು ಮಾತ್ರ ಉಳಿದಿವೆ. “ಶಿಲಪ್ಪದಿಗಾರಂ” ಎಂಬ ಪ್ರಸಿದ್ದ ತಮಿಳು ಕಾವ್ಯದ ಕನ್ನಡ ಭಾಷಾಂತರಕ್ಕೆ ಮುನ್ನುಡಿಯಾಗಿ ಬರೆದುವು ಈ ಹದಿನೇಳು ಸಾಲುಗಳು.

ಮುನ್ನುಡಿ

ಕೂರ ಕಲೆಮಗಳ್ ಅರಸು ತೊರೆದಿರ್‍ದ
ಚೇರಲ್ ಇಳಂಗೋವಡಿಗಳ್ ಅರುಳ,
ಮುತ್ತ ಮಿಳ್ ಪಾಟ್ಟೆನ ತಮಿಳ್‌ಮಗಳ್‌ ಪೆತ್ತ
ನುಣ್‌ ತಣ್‌ಬೆಳಗಿನ ಮುತ್ತಿನಮಣಿಯನ್
ಆರಾ ಅವರ್ದೆನ ತೀರಾ ತಣವಿನ್,
ಇನ್ನುಂ ತನ್ ಪೋಲ್ ಕನ್ನಡ ಮಕ್ಕಳ್‌
ಅರುಂಪೆರಲ್ ಕಾದಲ್ ಪೆಣ್ಣಣಿ ಕಲ್ಪಿನ್
ತಿರುಮಾಪತ್ತಿನಿ ಕಣ್ಣಕಿ ತೊಳುತು
ಅರಿವೆನ ಅರನೇ, ಅರನೆನ ಅರುಳೇ
ಎಂದರಿನಾಲ್ವಾಳ್ ಬಲ್ವಿಡಿವಿಡಿಗೆನ,
ಕಂಡ ಕಂಡ ಮಲರ್ ಚೆಲ್ವನೆ ಕೊಂಡು
ಬಂಡುಣಿ ತನತೇ ಜೇನೀನ್ಬಂತು,
ಕಂಡೆಡೆ, ಕಂಡೆಡೆ ಚೆಲ್ವಗಳಾಯ್ದು
ತೆರಳ್ಚಿ ಮನೆಕಡೆ ತರ್‍ಪೋನ್, ತಂದನ್
ತಾಯ ಕಯ್ಯೋಳಿಡೆ ಶ್ರೀಯೆಂಬೊರ್‍ವನ್‌-
ಬೇಡುವನೊಂದನ್ ನಲವಿಂದೀಯೆ,
ಒಲ್ವ ಮಕ್ಕಳೊಳ್ ಚೆಲ್ಪನಿಡು ತಾಯೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದು ಸಮಯ
Next post ಎಮಿಲಿ ಬ್ರೊಂಟೆಯ – Wuthering Height

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…