ಎಮಿಲಿ ಬ್ರೊಂಟೆಯ – Wuthering Height

ಎಮಿಲಿ ಬ್ರೊಂಟೆಯ – Wuthering Height

ಸಂಕೀರ್ಣ ಪ್ರೇಮದ ಸುತ್ತ

ಮಾನವ ಸಂಬಂಧಗಳು ತೀರಾ ಸಂಕೀರ್ಣ, ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು ಎಮಿಲಿ ಬ್ರೊಂಟೆಯ Wuthering Heights ನಲ್ಲಿವೆ. ಕಾದಂಬರಿಯ ನಾಯಕಿ ಕ್ಯಾಥರಿನ್ ಹಾಗೂ ಧೂರ್ತ ನಾಯಕ ಹೇತ್‌ಕ್ಲಿಫ್. ತಳಮಳ, ಗೊಂದಲ ಎಂಬರ್ಥ ನೀಡುವ ಕಾದಂಬರಿಯ ಹೆಸರೇ ವಿಷಯ ವಸ್ತುವಿನ ಪರಿಚಯ ಮಾಡಿಸುತ್ತದೆ. ಒಳ್ಳೆಯ ಮತ್ತು ಕೆಟ್ಟದರ ನಡುವಿನ ಸಮಸ್ಯೆಗಳು, ಅಸ್ಥಿರ ಬದುಕಿನ ಹೋರಾಟ ಇವು ಕಾದಂಬರಿಯ ಸತ್ವ. ಕಥೆಯ ಉದ್ದಕ್ಕೂ ದುಷ್ಟನ ಅಟ್ಟಹಾಸಕ್ಕೆ ಸಜ್ಜನರು ಕಷ್ಟಕ್ಕೆ ಬಲಿಯಾಗುವ ಚಿತ್ರಣವಿದೆ, ದುರಾದೃಷ್ಟ ಸಂಕಷ್ಟಗಳೇ ಕಾದಂಬರಿಯ ಉದ್ದಕ್ಕೂ ಹಾಸುಹೊಕ್ಕಾಗಿವೆ.

ಅಲ್ಲಿಯ ಎರಡು The Earnshaws ಮತ್ತು The Lintons ಪ್ಯಾಮಿಲಿಗಳು ಒಳ್ಳೆಯ ಮತ್ತು ಕೆಟ್ಟ ರೂಪಕಗಳಿಗೆ ಸಹ ನಿದರ್ಶನಗಳಾಗಿ ನಿಲ್ಲುತ್ತಾರೆ. ಅಷ್ಟೇ ಅಲ್ಲದೇ ಅಪ್ಪಟ ಪ್ರೀತಿ ಹಾಗೂ ಸುಳ್ಳು ಪ್ರೀತಿ, ಆನಂದ ಮತ್ತು ದ್ವೇಷ, ಆರೋಗ್ಯ ಮತ್ತು ರೋಗ, ಸ್ವರ್ಗ ಮತ್ತು ನರಕಗಳಿಗೂ ಹೋಲಿಕೆಗಳಾಗುತ್ತಾರೆ. ಇದನ್ನೆಲ್ಲಾ ಎಮಿಲಿ ಬ್ರೊಂಟೆ ನಿರ್ವಹಿಸಿದ ರೀತಿ ಶೇಕ್ಸಪಿಯರ ತನ್ನ ಹ್ಯಾಮಲೆಟ್ ನಾಟಕದಲ್ಲಿ ನಿರ್ವಹಿಸಿದಂತಿದೆ ಎಂಬುದು ವಿಮರ್ಶಕರ ನಿಲುವು.

Wuthering Heightsನ ಮಿ. ಅರ್ನಶಾ ಅದೊಂದು ದಿನ ಹೊರಹೋದವ ಮನೆಗೆ ಮರಳುತ್ತಾ ಲಿವರಪೂಲ್ ಬೀದಿಯಲ್ಲಿ ಅನಾಥನಾಗಿ ತಿರುಗುತ್ತಾ ತೀರಾ ದೀನ ಸ್ಥಿತಿಯ ಕಪ್ಪು ಜಿಪ್ಸಿ ಹುಡುಗನನ್ನು ತನ್ನೊಂದಿಗೆ ಕರೆದು ತರುತ್ತಾನೆ. ಆತನೇ ಹೇತ ಕ್ಲೀಫ್. ಕಾದಂಬರಿಯ ಧೂರ್ತ ನಾಯಕ. ಅರ್ನಶಾ ತನ್ನೆರಡು ಮಕ್ಕಳಾದ ಹಿಂಡ್ಲೆ ಹಾಗೂ ಕ್ಯಾಥರಿನ್‌ಗಿಂತ ಹೀತಕ್ಲಿಪ್‌ನ ಮೇಲಿನ ಪ್ರೀತಿ ವ್ಯಾಮೋಹದ ಕಾರಣ ಹಿಂಡ್ಲೆಯನ್ನು ಮನೆಯಿಂದ ಹೊರಗೆ ಕಲಿಯಲು ಕಳಿಸುವಂತೆ ಮಾಡುತ್ತದೆ. ತಂದೆ ಮಗನನ್ನು ದೂರ ಸರಿಸಿದ ಹೇತ್‌ಕ್ಲಿಪ್ ಕ್ಯಾಥರಿನ್‌ನನ್ನು ಮಾತ್ರ ಹುಚ್ಚನಂತೆ ಪ್ರೀತಿಸುತ್ತಾನೆ ಮೋಹಿಸುತ್ತಾನೆ. ಸರಿಯಾದ ಮಾರ್ಗದರ್ಶನವಿಲ್ಲದೇ ಬೆಳೆದ ಆಕೆ ಅತಿಸುಂದರಿಯಾದರೂ ಒರಟು ಸ್ವಭಾವವನ್ನು ಬೆಳೆಸಿಕೊಂಡು ಹೀತಕ್ಲಿಪ್ ಜೊತೆಗೂಡಿ ತುಂಟ ಅಡ್ಡಾದಿಡ್ಡಿ ವ್ಯಕ್ತಿತ್ವ ಬೆಳೆಸಿಕೊಂಡು ತಿರುಗುತ್ತಿರುತ್ತಾಳೆ. ಆದರೆ ಮುಂದೊಂದು ದಿನ ನೆರೆಯ ಸಭ್ಯ ಸಜ್ಜನ ಸುಸಂಸ್ಕೃತ ತ್ರುಶಕ್ರೊಸ್ ಗ್ರೆಂಜ್‌ನ ಎಡ್ಗರ್ ಲಿಂಟನ್‌ನತ್ತ ಆಕರ್ಷಿತಳಾಗುವ ಕ್ಯಾಥಿ ಆತನ ಪ್ರೇಮಕ್ಕೆ ಬೀಳುತ್ತಾಳೆ. ತಂದೆಯ ಮರಣದ ನಂತರ ಪತ್ನಿ ಫ್ರಾನ್ಸಿಸ್‌ಳೊಂದಿಗೆ ಮನೆಗೆ ವಾಪಸ್ಸು ಬರುವ ಹಿಂಡ್ಲೆ ಹೇತ ಕ್ಲೀಫ್‌ನನ್ನು ನಿಕೃಷ್ಟವಾಗಿ ಕಾಣತೊಡಗುತ್ತಾನೆ. ಕ್ಯಾಥರಿನ್ ಕೂಡ ಆತನ ನಿರ್ಲಕ್ಷಿಸುತ್ತಾಳೆ. ಹೀತ ಕ್ಲೀಪನನ್ನು ಅತಿಯಾಗಿ ಪ್ರೀತಿಸುತ್ತಲೇ ಎಡಗರನ ಸಭ್ಯತೆ ಸರಳತೆ, ಸುಸಂಸ್ಕೃತೆಗೆ ಮರುಳಾಗುವ ಆತನ ಸಾಮಾಜಿಕ ಸ್ಥಾನಮಾನಗಳಿಂದ ಪ್ರಭಾವಿತಳಾಗುವ ಕ್ಯಾಥಿ ಇತನನ್ನು ನಿರಾಕರಿಸುತ್ತಾಳೆ. ಈ ಮಧ್ಯೆ ಪ್ರಾನ್ಸಿಸ್ ಹ್ಯಾರಿಟನ್‌ ಹಿಂಡ್ಲೆಗೆ ಜನ್ಮನೀಡಿ ಸತ್ತುಹೋಗುತ್ತಾಳೆ. ಹಿಂಡ್ಲೇ ಹತಾಶನಾಗಿ ಕುಡಿತಕ್ಕೆ ದಾಸನಾಗುತ್ತಾನೆ.

ಹೀಗಿದ್ದೂ ಹೇತಕ್ಲೀತ್ ಸೇಡಿನಜ್ವಾಲೆಯಲ್ಲಿ ಬೇಯತೊಡಗುತ್ತಾನೆ. ದುಷ್ಟತನದ ಪರಮಾವಧಿಗೆ ಈ ದ್ವೇಷ ಕಾರಣವಾಗುತ್ತದೆ. ಕ್ಯಾಥರಿನ್ ಹಾಗೂ ಲಿಂಟನ್ನ ನಡುವಿನ ಪ್ರೇಮವನ್ನು ಅರಗಿಸಿಕೊಳ್ಳಲಾಗದೇ ಚಡಪಡಿಸುವ ಹೇತಕ್ಲಿಫ್ ಮನೆಬಿಟ್ಟು ಹೊರಟುಹೋಗುತ್ತಾನೆ. ಆದರೆ ಆತನ ಅಗಲುವಿಕೆ ಕ್ಯಾಥಿಗೆ ಜಿರ್ಣಿಸಿಕೊಳ್ಳಲಾಗುವುದಿಲ್ಲ. ಅದನ್ನಾಕೆ ಮನೆವಾಳ್ತೆಯ ನೆಲ್ಲಿಯಲ್ಲಿ ನಿವೇದಿಸುವ ಪರಿ ಅಪೂರ್ವ “He is more myself than I am. Whatever our souls are made of; his and mine are the same; and Linton’s is as a moonbeam from lighting or frost from fire”.

ಕ್ಯಾಥಿ ಎಡಗರನೊಂದಿಗೆ ಮದುವೆಯಾಗಿ ಸುಖವಾಗಿ ಬದುಕುತ್ತಿರುವಾಗಲೇ ಪುನಃ ಆಕೆಯ ಬದುಕಲ್ಲಿ ಟಾಕುಟೀಕಾಗಿ ವೇಷಭೂಷಣದಿಂದ ಬರುವ ಹೀತ್ ಕ್ಲೀಫ್ ಆಕೆಯ ಬದುಕನ್ನು ಸಂಪೂರ್ಣ ನಾಶಮಾಡುತ್ತಾನೆ. ಎಡಗರನ ತಂಗಿ ಇಸಾಬೆಲ್ಳನ್ನು ಬುಟ್ಟಿಗೆ ಹಾಕಿಕೊಂಡು ಎರಡು ಕುಟುಂಬಗಳ ಸರ್ವನಾಶಕ್ಕೆ ಸಂಚು ಹೂಡುತ್ತಾನೆ. ಇದಾವುದು ಅರಿಯದ ಇಸಾಬೆಲ್ಲಾ ದುರಂತಕ್ಕೀಡಾಗುತ್ತಾಳೆ. ಹೀತಕ್ಲಿಪ್‌ನ ಕಾರಣದಿಂದ ಮಾನಸಿಕ ಒತ್ತಡಕ್ಕೆ ಗುರಿಯಾದ ಕ್ಯಾಥಿ ಮಗಳು ಕ್ಯಾಥರಿನ ಲಿಂಟನ್‌ಳಿಗೆ ಜನ್ಮನೀಡಿ ಸತ್ತು ಹೋಗುತ್ತಾಳೆ. ಮನೆವಾಳ್ತೆಯ ನೆಲ್ಲಿ ಕ್ಯಾಥರಿನ್‌ಳ ಪರಿಸ್ಥಿತಿಯನ್ನು ತಿಳಿಸಲು ಅವನಲ್ಲಿಗೆ ಬಂದಾಗ ಆತನ ವರ್ತನೆ ಅಚ್ಚರಿ ಹುಟ್ಟಿಸುತ್ತದೆ. ಆಕೆಯ ದ್ರೋಹವನ್ನು ಖಂಡಿಸುತ್ತಾ ಹೇಳುತ್ತಾನೆ “You have killed yourself… I have not broken your heart-you have broken it; in breaking it, you have broken mine” ಇದಾದ ಸ್ವಲ್ಪ ದಿನಗಳಲ್ಲೆ ಪತ್ನಿಯ ಸಾವಿನಿಂದ, ನಿರಾಶೆಗೆ ಒಳಗಾದ ಹೇತ ಕ್ಲೀಫ್ ಜಾಲಕ್ಕೆ ಸಿಕ್ಕು ಕುಡಿತಕ್ಕೆ ದಾಸನಾದ ಹಿಂಡ್ಲೇ ಕೂಡ ತಂಗಿ ಕ್ಯಾಥಿಯ ದಾರಿಹಿಡಿಯುತ್ತಾನೆ. ಹೇತ್ ಕ್ಲೀಫ್‌ನ ಸಹಿಸಲಾಗದ ಕಾಟಕ್ಕೆ ಇಸಾಬೆಲ್ಲಾ ಕೃಶಳಾಗುತ್ತಾಳೆ. ಮುಂದೊಂದು ದಿನ ಲಿಂಟನ್ ಹೀತಕ್ಲಿಪ್‌ಗೆ ಜನ್ಮನೀಡಿ ಸತ್ತುಹೋಗುತ್ತಾಳೆ. ಹುಟ್ಟಿದ ಮಗುವನ್ನು ದ್ವೇಷಿಸುವ ಹೀತಕ್ಲೀಫ್ ಮುಂದೆ ಅನಾರೋಗಿಯಾದ ಅವನೊಂದಿಗೆ ಜ್ಯೂನಿಯರ ಕ್ಯಾಥಿಯ ವಿವಾಹ ಮಾಡಿಸುತ್ತಾನೆ. ಹಿಂಡ್ಲೇಯ ಮಗ ಹ್ಯಾರಿಟನ್‌ನನ್ನು ತನ್ನಂತೆ ಒರಟನ್ನಾಗಿ ಬೆಳೆಸುತ್ತಾನೆ. ಹೀಗೆ ತನ್ನನ್ನು ನಿಕೃಷ್ಟವಾಗಿ ಕಂಡ ಹಿಂಡ್ಲೆ, ತಿರಸ್ಕರಿಸಿದ ಕ್ಯಾಥಲಿನ್, ಅವಳನ್ನು ಮದುವೆಯಾದದಕ್ಕಾಗಿ ಲಿಂಟನ್ ಕುಟುಂಬವನ್ನು ಮೋಸದಿಂದ ಸಂಪೂರ್‍ಣ ಛಿಧ್ರಗೊಳಿಸುವ ಹೇತ್ ಕ್ಲೀಫ್ ಇನ್ನೊಂದು ರೀತಿಯಲ್ಲಿ ತಾನೇ ತನ್ನ ಸಂತೋಷವನ್ನು ದ್ವೇಷದ ಅಗ್ನಿಕುಂಡಕ್ಕೆ ಬಲಿಕೊಡುತ್ತ ಹೋಗುತ್ತಾನೆ. ಮುಂದೆ ಎಡ್ಗರ್ ಕೂಡ ವಿಧಿವಶನಾಗಲು ಹೀತ ಕ್ಲೀಫ್ ಎರಡೂ ಮನೆಗಳ ಆಸ್ತಿಗೆ ವಾರಸುದಾರನಾಗುತ್ತಾನೆ. ಆದರೆ ಕ್ರಮೇಣ ಕ್ಯಾಥರಿನ್ ಆತ್ಮ ಆತನನ್ನು ಬಿಡದೆ ಕಾಡುವ ನೆನಪಾಗುತ್ತದೆ. ಆಕೆಯ ಪ್ರೇಮಕ್ಕೋಸ್ಕರ ಸೇಡಿಗೋಸ್ಕರ ಇಷ್ಟೇಲ್ಲಾ ನಡೆಸಿದ ಹೀತ ಅದೊಂದು ದಿನ ಮರಣಿಸುತ್ತಲೂ ಕಾದಂಬರಿ ಸುಖಾಂತ್ಯದಲ್ಲಿ ಕೊನೆಗೊಳ್ಳುತ್ತದೆ. ಜ್ಯೂನಿಯರ ಕ್ಯಾಥರಿನ್ ಮತ್ತು ಹಿಂಡ್ಲೇ ಮಗ ಹ್ಯಾರಿಟನ್ ವಿವಾಹವಾಗುತ್ತಾರೆ.

ವಿಕ್ಟೋರಿಯನ್ ಕಾದಂಬರಿಗಳಲ್ಲಿಯೇ ವಿಶಿಷ್ಟವಾದ ವಿಭಿನ್ನತೆ ಕಾದಂಬರಿಯ ವೈಶಿಷ್ಟ್ಯ. ಕಾದಂಬರಿ ಮೋಹವನ್ನು ಬದುಕಿನ ಸಹಜತೆ ಎಂಬಂತೆ ವರ್ಣಿಸಲಾಗಿದೆ. ಪ್ರೀತಿ ಮೂಲಭೂತವಾದ ಬಯಕೆ. ವಿಶ್ವಾಸನೀಯವಾದ ಪ್ರೀತಿ ಶ್ರೇಷ್ಟವಾದರೆ, ಪ್ರೀತಿಯಲ್ಲಿ ದ್ರೋಹ ಪಾಪವಾಗುತ್ತದೆ. ಅಲ್ಲಿ ಹುಟ್ಟಿದ ದ್ವೇಷಕ್ಕೆ ಪಾಪದ ಬಣ್ಣ ಕೊಡದೆ ಮಾನವಮೂರ್ತ ಪ್ರೀತಿಯೆಂದು ಚಿತ್ರಿಸಿ ಅದರ ಸೂಕ್ಷ್ಮ ತುಡಿತಗಳನ್ನು ಎಳೆ‌ಎಳೆಯಾಗಿ ಬಿತ್ತರಿಸಿದ್ದಾಳೆ ಎಮಿಲಿ. ಪರಿಪೂರ್ಣತೆ ಪಡೆಯದ ಪ್ರೀತಿ ಒಂದು ತ್ಯಾಗದ ರೂಪ ತಳೆದು ಉದಾತ್ತವಾಗುತ್ತದೆ. ಅದೇ ದ್ವೇಷವಾದರೆ ದೂರ್ತತೆಯ ರೂಪ ಪಡೆದು ವಿನಾಶಕಾರಿಯಾಗುತ್ತದೆ. ಎರಡನೇಯದಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾನೆ ಹೇತ್ ಕ್ಲೀಫ್. ಕಾದಂಬರಿಯ ವಿಭಿನ್ನತೆಯೆಂದರೆ ಇಲ್ಲಿಯ ಪಾತ್ರಗಳ ಸಾಂಪ್ರದಾಯಿಕ ನೈತಿಕ ಸ್ತರಗಳು ಭಿನ್ನವಾಗಿರುವುದು. ಎಡ್ಗರ್ ಬೆಂಬಲಿಸುವ ನೈತಿಕತೆಯಲ್ಲಿ ಕ್ಯಾಥರಿನ್ ಮತ್ತು ಹೇತ್ ಕ್ಲೀಫ್‌ರಿಗೆ ಒಲವಿಲ್ಲ. ಅವರಲ್ಲಿ ಮೋಹ ನೈತಿಕತೆಗಿಂತ ಶ್ರೇಷ್ಟ, ಅವರಿಬ್ಬರ ಮೂಲ ತುಡಿತ ಪ್ರೇಮ. ಭಾವತೀವ್ರತೆಯ ಅಸಮತೋಲನ. ಕ್ಯಾಥರಿನ್ ತನ್ನ ಕೊನೆಕ್ಷಣದಲ್ಲಿ ಹೇತ್ ಕ್ಲೀಫ್‌ನನ್ನು ಆಲಂಗಿಸಿಕೊಳ್ಳುವ ಆ ಪರಿ ಭಾವೋದ್ವೇಗದ ಪರಾಕಾಷ್ಠೆ. “It is the last time… Heathcliff: I shall die” ಹೀಗಾಗಿ ಕ್ಯಾಥಿಯನ್ನು ನೈತಿಕತೆ ಇಲ್ಲದವಳು ಎಂದು ಜರಿಯಲು ಮನಸ್ಸಾಗದು, ಅವರಿಬ್ಬರೂ ಒದುಗರ ಕರುಣೆಗೆ ಪಾತ್ರರಾಗುತ್ತಾರೆ. ಹೀಗೆ ಮಾನವಸ್ವಭಾವದ ಸಂಕೀರ್ಣತೆಯನ್ನು ಅತಿ ಪರಿಣಾಮಕಾರಿಯಾಗಿ ಚಿತ್ರಿಸಿದ ವಿಕ್ಟೋರಿಯನ್ ಅವಧಿಯ ಎಮಿಲಿ ಜೆನ ಬ್ರೊಂಟೆ ಆ ಕಾಲದ ಎಲ್ಲ ಸಾಹಿತ್ಯಕ್ಕಿಂತಲೂ ವಿನೂತನ ಪಾತ್ರಗಳ ಸೃಷ್ಟಿಯಿಂದ ಶ್ರೇಷ್ಟಳಾಗಿದ್ದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಲಪ್ಪದಿಗಾರಂ
Next post ಪ್ರೀತಿ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…