ಸು. ಒಂದು ಕಿ.ಮೀ. ಉದ್ದದ ೪೫ ಬೋಗಿಗಳನ್ನು ಹೊಂದಿರುವ ‘ಘಾನ್’ ಎಂಬ ರೈಲು ಆಸ್ಟ್ರೇಲಿಯಾದ ಡಾರ್ವಿನ್‌ನಿಂದ ೨೯೭೯ ಕಿ.ಮೀ. ದೂರದ ಅಡಿಲೇಡ್ ವರೆಗೆ ಫೆ-೫ ೨೦೦೪ ರಿಂದ ತನ್ನ ಮೊದಲ ಪ್ರಯಣ ಆರಂಭಿಸಿದೆ. ೧೮ನೆ ಶತಮಾನದಲ್ಲಿ ಅಫ್ಘನ್ನರು ಒಂಟೆಗಳನ್ನು ಬಳಸಿ ಆ ತುದಿಯಿಂದ ಈ ತುದಿಯವರೆಗೆ ಸಾಮಗ್ರಿಗಳನ್ನು ಸಾಗಿಸುತ್ತಿದ್ದೂದರ ನೆನಪಿನಲ್ಲಿ ಈ ರೈಲಿಗೆ ‘ಘಾನ್’ ಎಂದು ಹೆಸರಿಡಲಾಗಿದೆ. ಸು. ೧.೩ ಬಿಲಿಯನ್ ಡಾಲರ್ ವೆಚ್ಚದಲ್ಲಿ ಈ ಮಾರ್ಗ ವಿಸ್ತರಣೆಯಾಗಿದ್ದು ಹೆಗ್ಗಳಿಕೆಗೆ ಪಾತ್ರವಾಗಿದೆ.
*****
