ರೈಲು
ನಿಲ್ಲುವುದು
ಎರಡೇ ನಿಮಿಷ.
ಅವಸರವಾಗಿ –
ನಾನು ಹತ್ತಿದೆ,
ಅವಳು ಇಳಿದಳು,
ಸೀದಾ
ಹೃದಯದಾಳಕ್ಕೇ!
ನೆಲೆಸಿಬಿಟ್ಟಳು.
ಸ್ಥಿರವಾಗಿ
ಮನ ಮಂದಿರದಲ್ಲಿ.
ಎಂದಾದರೊಮ್ಮೆ
ಸ್ಮೃತಿ ಪಟಲದ ಮೇಲೆ
ಮಿಂಚುವಳು
ಮರೆಯಾಗದವಳು
ಮರೆಯಲಾಗದವಳು.
*****
೧೪-೦೩-೧೯೯೨