ಅನುದಿನವೂ ಪಾಠ ನನಗೆ ನಿನ್ನಿಂದ
ಈ ಭೂಮಿಯ ಬದುಕು ಅನಂತ
ನಿಸ್ತರಿಸಬೇಕು ಶಾಂತ
ಹೊಯ್ದಾಡಬೇಡ ಅತ್ತಿತ್ತ
ನಿಲ್ಲು ನೀನು ಸ್ಥಿರಚಿತ್ತ
ಅನ್ನುವವರು- ಅವರಿಗದೇ ಕೆಲಸ
ಮಾಡುತ್ತಾರೆ ರಸವನ್ನು ಕಸ
ನಿನಗೆ ಗೊತ್ತಿದ್ದರೆ ಸಾಕು ಬಿಡು
ಯಾವುದು ಏನು ಎತ್ತ,
ಬೆಳೆಯುತ್ತಿರು ಹೀಗೆಯೇ
ಅದೊಂದೇ ದಾರಿ
ಅನ್ಯಥಾ ಶರಣಂ ನಾಸ್ತಿ
*****