ಜೀವ ಇರುವವರೆಗೂ
ಸದಾ ಮಾಸದೆ ನೆನಪಲೇ
ಇರುವ ಕಾಣಿಕೆ ಒಂದಿತ್ತು
ನಾವು ಭೇಟಿಯಾದ ಹೊತ್ತು
ಯಾರೂ ಕದಿಯದ ಎಲ್ಲೂ ಕಳೆಯದ
ಮತ್ತಾರಿಗೂ ಕಾಣದ ಕಾಣಿಕೆ ಅದು
ನನಗೇ ಗೊತ್ತು ಅದು ಮನದಲ್ಲೇ ಇತ್ತು
ನಿನಗೆ ಕೊಡಲೆಂದೆ ಇತ್ತು
ಕಣ್ಣಲ್ಲಿ ಏನೋ ಕಾತರ
ಮನದಲ್ಲಿ ಏನೋ ತಳಮಳ
ಹೇಳಲೂ ಬಾರದ ಕಳವಳ
ಕೊಡಲು ಇನ್ನೇನು ಅವಸರ?
ನೀನೂ ಕೇಳಲಿಲ್ಲ ನಾನು ಕೊಡಲಿಲ್ಲ
ಹಾಗೇ ಅಲ್ಲಿಯೇ ಉಳಿಯಿತು
ತುಟಿ ಅಂಚಿನ ಕಾಣಿಕೆಯದು
ಅದುವೇ ನನ್ನ ಸಿಹಿ ಮುತ್ತು
*****


















