ಬಿಟ್ಟೇವಣ್ಣಾ ಬಹುಕೆಟ್ಟ ಬಣ || ಪ ||

ಹ್ಯಾವ ತೊಟ್ಟಾಕ್ಷಣ
ಜೀವಗುಟ್ಟು ಪ್ರಾಣ
ಮೋಹನಟ್ಟುತಣ
ಈ ಓಣಿಯೊಳಾಡುವ ದೇವರ ಸ್ಥಲ
ಕೇವಲ ಐಸುರದಲಾವಿಯ ಹಬ್ಬ ನಾವು || ೧ ||

ಏಳೆಂಟು ಹುಡುಗರೋ ಗೋಳಿಟ್ಟ ಎಡಗರು
ಕಾಳಕತ್ತಲದೊಳು ಕರದು ಕೇಳಲು ಸ್ವರ
ಏಳವಲ್ದು ಕಾಲು ಕೀಳವಲ್ದು ತಾಳಮ್ಯಾಳಸಲ್ದು
ನಾಳಿನ ದಿನ ಬರಬಾರದು ಇಲ್ಲಿಗೆ
ಗಾಳಿಗುದ್ದಿ ಮೈನೋಯಿಸಿಕೊಂಡೆಲ್ಲೋ ತಮ್ಮಾ || ೨ ||

ಸ್ವಾಮಿ ಇಮಾಮಹಸೇನಿ ಹುಸೇನಿಗೆ
ನಾಮಸ್ಮರಣೆಯನ್ನು ಮರೆತು ಮು೦ದಕ್ಕ ಹೆಜ್ಜಿ
ಇಟ್ಟುಕಟ್ಟಿ ನಡುದಾರಿ ಮೆಟ್ಟಿ ಓಕಳಿಯ ಕಟ್ಟಿ
ಕಾಮರನ ಕಾಣುತ ಬೆದರಿಕಿ ಬಂದಿತು
ಭೂಮಿಪ ಶಿಶುನಾಳಧೀಶನ ಮುಂದ ನಿಂತು || ೩ ||
*****