ಕುಡದ್ಬುಟ್ಟು ಮೋರೀಲ್ ನಾ ಬಿದ್ಕೊಂಡ್ ಇವ್ನೀಂತ್ ಏಳಿ ಎಲ್ಲಾರ ನೆಗ್ತಾರೆ ಸುಂಸುಂಕೇನೆ. ಎಲ್ರಂಗೇ ಮನ್ಸ-ಇವನೇನೋ ಒಸ್ ತಪ್ದಾಂತ ಅನ್ನಾಲ್ಲ-ಬೆಪ್ಗಳ್ಗೆ ಏನ್ ಏಳಾನೆ ! ೧ ಆಕಾಸ್ದಲ್ ಸೂರ್‍ಯಾವ್ನೆ-ದೊಡ್ಡ್ ಮನ್ಸ-ವಾಸ್ತವ- ಗ್ರಾಸ್ತ್ನಂತೆ ಅಗಲೆಲ್ಲ ...

ಮಂದಗತಿ ಮಂದತರವಾಗಿಬಿಟ್ಟಿದೆ; ಹುಲ್ಲೆ- ಗಂಗಳೊಳು ಚಂಚಲತೆ ಕುಡಿಯೊಡೆಯಲಿದೆ; ಉಡುಗಿ ಮೈನಯದ ನೆಯ್ಗೆ ತೊಪ್ಪಲು; ಹರೆಯ ಚಿಗುರಡಗಿ ನೆತ್ತರದ ನೆರೆಗೆಂಪು ಹಳಸುತಿದೆ ಭರದಲ್ಲೆ. ಹಾರು ಹಕ್ಕಿಯ ಪುಚ್ಚವೆಣಿಸಲೆಳಸಿದ ಬೆಡಗಿ! ವಿಜಯ ವಿಠ್ಠಲನ ಗುಡಿ ಭಣಗು...

ಕೇವಲ ನೈತಿಕ ಅಥವಾ ಆರ್ಥಿಕ ದೃಷ್ಟಿಯನ್ನಿಟ್ಟು ಯಾವದೊಂದು ರಾಷ್ಟ್ರವು ಅಥವಾ ಸಮಾಜವು ಉನ್ನತಿ ಹೊಂದಿರುತ್ತದೆಂದು ಹೇಳುವದು ಸಮಂಜಸವಾಗಲಾರದು. ಸಮಾಜದ ಅಥವಾ ರಾಷ್ಟ್ರದ ಸ್ವಘಟಕಾವಯವಗಳು ಸುಸಂಘಟಿತವಿದ್ದರೆ ಮಾತ್ರ, ಅದಕ್ಕೆ ಉಚ್ಚರಾಷ್ಟ್ರ ಅಥವಾ ಸಮಾ...

ಒಂದಕೊಂದಿನ್ನೊಂದು ತಿಂದು ಬದುಕಿದರು ಕುಂದಿಲ್ಲದೆಲ್ಲ ವೈವಿಧ್ಯ ವೃದ್ಧಿಸುತೆ ಹಂತ ಹಂತದೊಳಭಿವೃದ್ಧಿ ಮೆರೆವೆಮ್ಮ ಪ್ರಕೃತಿ ಯಂತರಂಗವದೇನು? ಬಿಂಬವನೆ ಕೊಂ ದುಂಬ ಪ್ರತಿಬಿಂಬವನಿಲ್ಲ ಸೃಜಿಸಿತಲಾ – ವಿಜ್ಞಾನೇಶ್ವರಾ *****...

ಆಡೀ ಮಂಗಲವೇ ನಮನಿಮಗೂ ಕೋಲೇ ಆಡೀ ಮಂಗಲವೇ ನಮನಿಮಗೋ || ನನ ಗೆಣಿಯಾ || ೧ || ಈ ಊರು ಕಿತ್ತೂರು ಬೇಲೂರೂ ಬೆಂಕಿನ ಕೋಡು ಸೇದೂ ಬಾವಿಯ ನೀರು ಮೊಗುತಾರೋ || ನನ ಗೆಣಿಯಾ || ೨ || ಆಡೋರೂ ನಮ್ಮಿಂದ ನೋ ಡೋ ರೂ ನಿಮ್ಮಿಂದ ಆಡೀ ಬಿಟ್ಟುಂಗಿಲಾ ನಮನಿಮಗೂ ...

ಆ ಗುಣಿಯಗೆಯುವವನು ಪೊದೆಗಳ ಹಿಂದೆ ಮರೆಯಾದ ಮೇಲೆ ಫಾಚೆಲ್‌ವೆಂಟನು ಅವನ ಹೆಜ್ಜೆಗಳ ಸಪ್ಪಳವು ಕೇಳದಂತಾಗುವ ವರೆಗೂ ಗಮನಿಸಿ ಕೇಳುತ್ತಿದ್ದು, ಅನಂತರ, ಸಮಾಧಿಯ ಗುಣಿಯ ಮೇಲೆ ಬಗ್ಗಿ ಮೆಲ್ಲನೆ, ‘ಫಾದರ್ ಮೆಡಲಿನ್ ! ‘ ಎಂದು ಕೂಗಿದನು. ಉ...

ಅಹಮತೆ ಏಕೆ ನಿನ್ನಲ್ಲಿ ಮನುಜ ಅಹಂಕಾರದಿಂದ ಬಾಳ ಹಾಳು ನಾನೆಂಬ ಗರ್‍ವ ಸುಳಿದ ರಾಯ್ತು ನಿನ್ನ ಪ್ರಪಾತಕ್ಕೆ ತಳ್ಳುವುದು ಮಾಡಿಗೋಳು ಹೆಜ್ಜೆ ಹೆಜ್ಜೆಗೂ ಅರಳಲಿ ನಿನ್ನ ಮನ ಅದರಲ್ಲಿ ಸುಳಿಯದಿರಲಿ ಸ್ವಾರ್‍ಥ ಸ್ವಾರ್‍ಥವೆಂಬುದು ದೇವರ ಮರೆಸುವುದು ಹಗಲ...

ಏಳು, ಬಾರೆನ್ನೊಡನೆ ನಾಡಗಡಿಯುತ್ತಲಿಗೆ- ಹುಲುಸುಹೊಲ ಮರಳಕಾಡೆರಡುಮೊಡವೆರೆದು, ಸುಲ್ತಾನ್ ಗುಲಾಮರೆಂದರ ಮರೆಯಿಪಾ ಬಳಿಗೆ ಅಲ್ಲಿ ನೀಂ ದೊರೆತನದ ಕಿರಿತನವ ಕಾಣ್ನೆ. *****...

1...678910

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...