ಆಳುತನದ ಮಾತನೇರಿಸಿ ನುಡಿದಡೆ ಆಗಳೆ ಕಟ್ಟಿದೆನು ಗಂಡುಗಚ್ಚೆಯ ತಿಗುರನೇರಿಸಿ ತಿಲಕವನಿಟ್ಟು ಕೈದುವ ಕೊಂಡು ಕಳನೇರಿದ ಬಳಿಕ ಕಟ್ಟಿದ ನಿರಿ ಸಡಿಲಿಸಿದಡೆ ಇನ್ನು ನಿಮ್ಮಾಣೆ ಕಾಣಾ ಚೆನ್ನಮಲ್ಲಿಕಾರ್ಜುನಾ [ತಿಗುರನೇರಿಸಿ-ಪರಿಮಳ ಲೇಪಿಸಿ, ಕೈದುವ-ಆಯುಧವ...

೧ ಕೂಳಿಲ್ಲದಿಹ ನನಗೆ ಕಲ್ಲಿನಾರ್ಚನೆಯಂತೆ! ಸೆರೆಮನೆಯ ಸೋಬತಿಗೆ ಸೂರ್ಯ ಜಪ ತಪವಂತೆ! ೨ ನಾನೊಲ್ಲದಿಹ ನಾರಿ ನನಗಾಗಿ ಇಹಳಂತೆ! ಪಿತನ ನುಡಿ ಮೀರಿ ನಡೆಯೆ ನರಕವಂತೆ! ೩ ಹೆಣ್ಣಿನಾ ಹಣೆಬರಹ ಪುರುಷ ಬರೆದುದೆ ಅಂತೆ! ಇಲ್ಲದೊಡೆ ವಿರಹ ಅವಳ ಜೀವನಕಂತೆ! ೪...

ಬಾಪು ನೀ ಮಹಾನ್. ಕೃಷಿಯಲ್ಲಿ ನಿನ್ನ ಪ್ರೀತಿಯ ನಿತ್ಯ ಸತ್ಯಗಳು ಹಸಿರು. ಅಹಿಂಸೆಯು ಬಯಲ ಗಾಳಿಯಲಿ ತೇಲಿ ಒಂದು ಸರಳ ಮಾರ್ಗದರ್ಶನ ನಿನ್ನಿಂದ ಜಗಕೆ. ಬದುಕಿನ ಎಲ್ಲಾ ಜಂಝಡದ ಮಧ್ಯೆ ನೀ ಹೇಳಿದ ಪ್ರಾರ್ಥನೆಯ ಆಳ ಎದೆ ಎದೆಗೂ ಇಳಿದು ಸಂಧ್ಯಾರಾಗದ ಸಂಭ್...

ಜೋತಿ ಒಂದೇ ಕಿರಣ ಹಲವು ತಾಯಿ ನೆರಳು ಬೆಳಕ ಬೀರಿ ಬೆಳಗಿತದೋ ಜಗವ ಮೆರೆದು ಮೆರಿಸಿ ಇಂದು ||ಜ್ಯೊ|| ಮಾನವ ಕುಲ ಒಂದೇ ಜಾತಿ ನೀತಿ ಹಲವು ಒಂದೇ ತಾಯ ಮಕ್ಕಳೆಂದು ಬೆಳಗಿತದೋ ಜಗವ ಮೆರೆದು ಮೆರಿಸಿ ಇಂದು ||ಜ್ಯೊ|| ದೇಶ ಒಂದೇ ರಾಜ್ಯಗಳು ಹಲವು ಭಾಷೆ ಬ...

ಲಕ್ಷ ಜನುಮಗಳ ಗಳದಾಟಿ ಬಂದೇವು ಈ ಮನುಜ ಶರೀರ ನಾವು ಪಡೆದೇವು ಈಗಲೂ ಪೂರ್‍ವ ಜನ್ಮಗಳ ಅಭ್ಯಾಸವೆ ನಿದ್ರೆ ಆಹಾರ ಮೈಥುನದ ದುರಭ್ಯಾಸವೆ! ಕ್ಷಣ ಸುಖದ ಲಾಲಸೆ ನಿನಗೇಕೆ ಬಂತು ನೀನು ಸಾಕ್ಷಾತ ಪರಮಾತ್ಮನ ತಂತು ಗಗನದೆತ್ತರದ ಯೋಜನೆಗಳ ಸೃಷ್ಟಿಸಿ ಈ ಬಾಳೆ...

ಶಾಬಯನು ಮರಳೆ ಬರುವ ನಿರೀಕ್ಷಣೆಯಿಂದೆ ಶಾದುಕೊಂಡಿರುವ ಕೊತ್ವಾಲನು ದಾರಿಯಲ್ಲಿ ಸಿಕ್ಕಿ ಉಭಯ ಮೂರ್ತಿಗಳು ಹಾಸ್ಯವದನರಾಗಿ ಮೆಲ್ಲಗೆ ಮಾತನಾಡುತ್ತಾ ನಡೆದರು. ಶಾಬಯ್ಯನ ಮನೆಯಲ್ಲಿ ಒಂದೆರಡು ಘಳಿಗೆ ಪರಿಯಂತರ ಇದ್ದು ಕೊತ್ವಾಲನು ತನ್ನ ಮನೆಗೆ ಬಂದ ಬಳಿ...

ಓ ಸ್ವಪ್ನಾಗ್ನಿಸೃಷ್ಟಾ ನೌಕಾರೂಢಾ ಗೂಢಾ ಯಾರವನೋ ಚಿರತರುಣಾ ಬಂದಾ ಹುಬ್ಬೋ, ಅನಂಗನು ಚಿತೆಯಲಿ ಮಣಿಸಿದ ಕಬ್ಬೋ ಆಹಾ ಈ ಕಾಯಾ ಹಿರಣ್ಯಾಗರ್ಭಚ್ಛಾಯಾ – ಆಕೃತಿಬಂಧಾ ಮೌನಾ ಕರಗಿಸಿ ಎರೆದಾ, ಸೆಳೆಮಿಂಚಿನ ತೆರದಾ, ಸವಿನುಡಿ ಛಂದಾ- `ಆ ಹೃದಯ ಜ್ವ...

೧ ಸುಮ್ಮಗಿರಬೇಡ ನನ್ನೆದೆಯ ಹಾಡೇ… ಸುಮ್ಮಗಿರಬೇಡ ನನ್ನೆದೆಯ ಹಾಡೇ! ಗುಡುಗಿನಬ್ಬರದಿ ಮೊರೆ, ವೀಣೆ ನುಡಿಸಿಲ್ಲದಿರೆ… ಸತ್ತವರ ಮನೆಯಂತಿದೇನು ಪಾಡೆ ? ಎತ್ತು ದನಿ, ಇನ್ನೊಂದನೇನು ಬೇಡೆ. ೨ ನೀನು ಗುಡುಗುತಲಿರ್ದ್ದರೆದೆಯ ಹಾಡೇ&#8230...

ಸಂಸಾರವೆಂಬ ಸಾಗರದಲ್ಲಿ ಸಮಾಧಾನಿಯಾಗಿರಬೇಕು| ಸಾಗರದಲೆಯ ಎದುರಿಸಿ ದೋಣಿ ಮುಂದೆ ಸಾಗುವ ಹಾಗೆ ಸಾಗುತ್ತಿರಬೇಕು|| ಸಂಸಾರದಾಳವ ನೆನೆದು ಭಯವನು ಬೀಳದೆ ಸಂಯಮದೊಳಿರಬೇಕು| ಸಂಸಾರ ತೀರವ ಸೇರುವ ತವಕದಿ ಸದಾ ಕುತೂಹಲದಿಂದಿರಬೇಕು|| ಕೈಲಾಗುವಷ್ಟು, ಹಾಸಿ...

ಕಾಡುತ್ತಿವೆ ರಾತ್ರಿಗಳು ಹಗಲು ಕಟ್ಟಿದ ಇರುಳ ಕೋಟೆ ಒಳಗೆ ಒಂದೇ ಸಮ ಕತ್ತಿವರಸೆ ಪ್ರಾಣ ಹೋಗದ ಸಾವುಗಳು ಸದ್ದು ಮಾಡದ ನೋವುಗಳ. ಕತ್ತಲ ಸೋನೆ ಚರಿತ್ರೆಯಲ್ಲಿ ತೋಯ್ದ ಮೆದುಳ ನೆಲದಲ್ಲಿ ಮನಸ್ಸಿನ ಬೀಜ ಬಿರಿದು ತಿಕ್ಕಾಟವಾಗುತ್ತಲೇ ತೆಕ್ಕೆಯಾಗುವ ರೀತ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...