ದುಷ್ಟ ಗಂಗೋತ್ರಿಗೆ ಗಂಡಂದಿರ ಬಲಿ ಕೊಟ್ಟ ನಿಮಗೆ ಮುಂಡೆಯರ ಪಟ್ಟವೇ ಗಟ್ಟಿಯಾಯಿತೇನು? ಉಕ್ಕಿ ಬಂದ ನಿಮ್ಮ ಹರೆಯ ಅಂತರಂಗದಲೇ ಹಿಂಗಿತೇನು? ಮೆಟ್ಟಿಬಂದ ಕಣ್ಣೀರು ಗೊಂಡಾರಣ್ಯದ ಗೂಢಕ್ಕಿಳಿದು ಗಟ್ಟಿ ಘನವಾಯಿತೇನು? ಸಿಡಿದು ಹೋದ ಕನಸುಗಳು ಕಡಲಾಚೆಯ ನ...

ಕೆರೆದರದುವೇ ಕೃಷಿಯೆಂದರಿಯದವರರುಹುತ್ತಿರೆ ಗರಿಕೆಯನು ಕೆರೆದುನ್ನತದ ಮನೆಯ ಕನ ವರಿಸುತಲಿ ಇಳೆಯ ಕಳೆಯನ್ನು ಕಳೆಯುತಿರೆ ಕೆರೆದು ಕೆಟ್ಟಿಹನೆಮ್ಮ ರೈತನು, ಆದೊಡಾತನು ಕೆರೆವ ಯಂತ್ರಗಳನಿತ್ತವನು ಮನೆಯ ಕಟ್ಟಿಹನು – ವಿಜ್ಞಾನೇಶ್ವರಾ *****...

ಕಂಬನಿಯೆ ಏಕಿಂತು ಒತ್ತರಿಸಿ ಬರುವೆ? ಕಂಪಿಸುವ ಚಿತ್ರದ ಇರವನ್ನೆ ಮರೆವೆ? ಮಿಥ್ಯಕ್ಕೆ ಗೆಲುವಾಯ್ತು ಸತ್ಯಕ್ಕೆ ಸೋಲಾಯ್ತು ದುಃಖವು ಮಿಗಿಲಾಯ್ತು ಸುಖದ ಮನೆ ಹೋಯ್ತು ಎಂದಿದಕೆ ಏಕೆ ಕಣ್ಣೀರು ಬದುಕಿಗಂಜಿ ಹೇಡಿ, ಹಿಂಜರಿವೆ? ವಂಚಿಸಿತು ಜಗಜನವು ಸಂಚಿ...

ಧರೆಗಿಳಿದು ಬಂದಿದೆ ಸ್ವರ್ಗದ ತಾಣವು ಸುಂದರ ಮಂದಿರವು ನಮ್ಮ ಭಾರತ ಭೂಮಿ || ಭುವನ ಮನೋಹರ ಚೆನ್ನಯ ತಾಣವು ತನ್ಮಯ ಚಿತ್ತದ ಜೀವರಾಶಿಗಳು ಸೃಷ್ಟಿ ಸ್ಥಿತಿ ಲಯವು ನಮ್ಮ ಭಾರತವು || ಯುಗ ಯುಗಗಳೆ ತಾಳಿದೆ ಗತ ವೈಭವ ಸಾರಿದೆ ಕಣ ಕಣವೂ ನಿನ್ನ ಸ್ತುತಿಯನ...

||ತಿರುಪ್ಪಲ್ಲಾಣ್ಡು|| ಗುರುಮುಖಮನಧೀತ್ಯ ಪ್ರಾಹ ವೇದಾನ್ ಅಶೇಷಾನ್ ನರಪತಿಪರಿಕ್ಲ್‌ಪ್ತಂ ಶುಲ್ಕಮಾದಾತುಕಾಮಃ | ಶ್ವಶುರಂ ಅಮರವಂದ್ಯಂ ರಂಗನಾಥಸ್ಯ ಸಾಕ್ಷಾತ್ ದ್ವಿಜಕುಲತಿಲಕಂ ತಂ ವಿಷ್ಣುಚಿತ್ತಂ ನಮಾಮಿ || ಮಿನ್ನಾರ್ ತಡಮದಿಶೂಯ್ ಎಲ್ಲಿಪುತ್ತೂರೆ...

ಹರಿಯೆ ನಿನ್ನ ಒಂದಿನಿತು ನಾ ಮರೆತರೆ ಸಾಗಬೇಕು ನಾ ಅಂಧಕಾರ ಆಗರಕ್ಕೆ ಮತ್ತೆ ಮತ್ತೆ ಜನ್ಮ ಮರಣಕ್ಕೆ ಅಂಟಿ ಬಿದ್ದು ನರಳಬೇಕು ಭವದ ಸಾಗರಕ್ಕೆ ವ್ಯಾಕುಲತೆ ಎನ್ನಲ್ಲಿ ಅಚಲವಾಗಿರಲಿ ಅದು ನಿನ್ನ ಪಡೆಯುವವರೆಗೆ ಹರಿ ನೀನೇ ನನ್ನ ಮನದ ಸಂಚಾಲಕನು ನನ್ನ ಯ...

ನಕ್ಕು ಬಿಡು ಒಮ್ಮೆ ಗುಳಿಬೀಳಲಿ ಕೆನ್ನೆ| ಸರಿಯಲ್ಲ ಈ ಮೌನ ನಿನಗೆ ನನ್ನ ಮಾತೇ ಮರೆತು ಹೋಗಿದೆ ನನಗೆ| ಮನೆ ಮನದ ತುಂಬೆಲ್ಲ ಹರಿಯುತಿದೆ ಬರಿಯ ಮೌನ… ನನಗೀಗ ನಿನ್ನ ಮೌನದೇ ವ್ಯಸನ|| ಮರೆತುಬಿಡು ಎಲ್ಲಾ, ನನ್ನೆಲ್ಲಾ ಒರಟುತನ| ಅಪ್ಪಿಕೋ ನನ್ನ...

ಅವರು ಕೊಡುವ ಸಂಬಳಕ್ಕೆ ಹುಡುಗ ದಿನವೂ ಕಾರು ತೊಳೆದು ಹೊಳಪು ತುಂಬುತ್ತಿದ್ದ. ಯಜಮಾನ ಕಾರಿನ ಬಾಗಿಲು ತೆಗಿಯುವಾಗ ಕೈ ಅಂಟಂಟಾಯಿತು. ಹುಡುಗನಿಗೆ ಕಪಾಳಕ್ಕೆ ಹೊಡೆದು “ಏನು ಸರಿಯಾಗಿ ಒರಿಸಿಲ್ಲವಾ?” ಎಂದರು. “ಅಪ್ಪಾ! ಜಿಲೇಬಿ ...

ನಾನು ದರಿದ್ರನಾರಾಯಣನ ದತ್ತುಪುತ್ರ ಕಡ್ಡಿಗಾತ್ರ ಕೋಳಿ ಕೂಗಿದ ಕೂಡಲೆ ಖೋಖೋ ಆಡುತ್ತ ಕೈಹಾಕಿ ನೂಕಿ ಸಮಜಾಯಿಷಿ ಕೊಡದೆ ಗುರಿಗೂಟದ ಸುತ್ತ ಮಗ್ಗಿ ಗುಣಗುಣಿಸಿದರೂ ಬಿದ್ದದ್ದು ನೆನಪುಂಟೇ ಹೊರತು ಗೆದ್ದದ್ದು ಗೊತ್ತಿಲ್ಲ. ಮೊನ್ನೆ ಒಳಗೆಲ್ಲ ಒತ್ತಿಬಿಟ...

‘ಕತ್ತಲೆ-ಬೆಳಕು’ ನಾಟಕವು ಏಕಕಾಲಕ್ಕೆ ಸ್ವರೂಪದ ದೃಷ್ಟಿಯಿಂದ ನಾಟಕವೆನಿಸಿದರೆ, ತನ್ನ ತಾತ್ವಿಕತೆಯ ದೃಷ್ಟಿಯಿಂದ ಹೊಸ ನಾಟಕದ ಮೀಮಾಂಸೆಯ ಕೃತಿಯಾಗಿ ಕಾಣಿಸುತ್ತದೆ. ಇದನ್ನು ವಿವರಿಸುವುದೇ ಈ ಲೇಖನದ ಆಶಯವಾಗಿದೆ. ಜಾನಪದ, ವೃತ್ತಿ ಮತ್ತು ಹವ್ಯಾಸಿ ...

1...678910...13

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...