ದಿನವಿಡೀ ಸುತ್ತಾಡಿ ಸೋತು ಮೈ ಕೈ ಭಾರ, ಧಾವಿಸುವೆ ಹಾಸಿಗೆಗೆ ಪ್ರಿಯವಿಶ್ರಾಂತಿ ನೆಲೆಗೆ ; ಶುರುವಾಗುವುದು ಆಗ ತಲೆಯೊಳಗೆ ಸಂಚಾರ ; ಮೈಕೆಲಸ ಮುಗಿದು ಮನ ಹಾಯುವುದು ಚಿಂತನೆಗೆ. ನಾನಿರುವೆ ಎಲ್ಲೊ ದೂರದಲಿ, ಆಲೋಚನೆಯ ಯಾತ್ರೆ ಹೊರಡುವುದು ಖುಷಿಯಲ್ಲ...

ಬೇಡೆನಗೆ ಹಸ್ತಿನೆಯ ಭಿಕ್ಷೆಯು ಅನ್ಯದೇಶದ ಯುವತಿಯೊಬ್ಬಳು ವೃದ್ಧ ಬ್ರಾಹ್ಮಣನೊಬ್ಬನೊಡನೆ ತನ್ನ ದರ್ಶನಾಕಾಂಕ್ಷಿಯಾಗಿ ಬಂದಿರುವಳೆನ್ನುವುದನ್ನು ಕಾವಲು ಭಟ ಹೇಳಿದಾಗ ಸಾಲ್ವಭೂಪತಿಗೆ ಪರಮಾಶ್ಚರ್ಯವಾಯಿತು. ಮಗಳ ಮದುವೆಗೆ ಧನಕನಕ ಬೇಡಲೆಂದು ಬರುವ ಸೌಭ...

ಮದುವಣ ಗಿತ್ತಿಯಂತೆ ಶೃಂಗಾರಗೊಂಡು ಒಡಲೊಳಗೇ ಮಧುಜೇನ ತುಂಬಿಕೊಂಡು ಮನದಿನಿಯನಿಗಾಗಿ ಹಾತೊರದು ನಿಂತು ಸ್ವಾಗತ ಮಾಡಿದ ಎನ್ನ ಮನದನ್ನೆ…. ಎನ್ನ ಮನದಾಸೆಯ ಅರಿತು ನೀ ನನ್ನನೊಮ್ಮೆ ಬಿಗಿದಪ್ಪಿ ಬರಸೆಳೆದು ಸೆರಗಿನ ಮರೆಯಲಿ ಅಡಗಿಸಿದಾಗ ಮರು ಮಾತ...

ನ್ಯೂಯಾರ್ಕಿನಿಂದ ವಿಮಾನದಲ್ಲಿ ಬೊಂಬಾಯಿಗೆ ಬಂದು, ರೈಲಿನಲ್ಲಿ ನಗರಕ್ಕೆ ಬಸ್ಸಿನಲ್ಲಿ ಪಟ್ಟಣಕ್ಕೆ ಸೈಕಲ್ ರಿಕ್ಷಾದಲ್ಲಿ ಮನೆ ತಲುಪಿ, ಮರದ ಬಾಗಿಲ ಮೇಲೆ ಸರಪಳಿ ಬಡಿಯುತ್ತಾ ನಿಂತಾಗ ದಿಢೀರನೆ ಎರಡೂ ಬಾಗಿಲು ತಗೆದು ಪ್ರತ್ಯಕ್ಷಳಾದಳು ಕೂಡಲೇ ನನಗಾಯ...

ಸಂವೇದನಾಶೀಲನೂ ವಿಚಾರವಂತನೂ ಓದಿ ದಂಗಾಗುವ ಜೀವನಚರಿತ್ರೆ ಒಂದಿದೆ: ಇಡೀ ಮನುಷ್ಯ ಕುಲದ ಬಗ್ಗೆಯೇ ಅಧೀರನನ್ನಾಗಿಸುವ, ಜತೆಗೇ ಎಂಥ ಸಂಕಟದಲ್ಲೂ ಮನುಷ್ಯ ತನ್ನನ್ನು ತಾನು ಕಾಪಾಡಿಕೊಳ್ಳಲಾಗದಿದ್ದರೂ ತನ್ನ ಗೌರವವನ್ನು ಕಾಪಾಡಿಕೊಳ್ಳಬಹುದು ಎಂಬುದರ ಬಗ...

ಕಲ್ಲಿನ ಮೂರುತಿ ಪೂಜಿ ಮಾಡುದು ನೂರು ಪಟ್ಟು ನೆಟ್ಟಾ ಮನುಸೆರ ದೇವರ ಪಾದ ಬೀಳುದು ನೂರು ಪಟ್ಟು ಕೆಟ್ಟಾ ||ಪಲ್ಲ|| ಆಶಿ ಬುರುಕರು ಮನುಸೆರ ದೇವರು ತಿಂದು ಹೇಲತಾವ ಕಲ್ಲು ದೇವರು ಊಟ ಉಣ್ಣದೆ ಮೌನ ಕೂಡ ತಾವ ||೧|| ಚರುಮದ ದೇವರು ನಾಯಿ ದೇವರು ರೊಕ್ಕ...

ಗುಂಡ: “ನನಗೆ ಹತ್ತು ಜನ ಒಟ್ಟಿಗೆ ಹೊಡಿಯೋಕೆ ಬಂದ್ರು.” ಪುಟ್ಟ: “ಹೌದಾ; ಆಮೇಲೆ” ಗುಂಡ: “ತಾಕತ್ ಇದ್ರೆ ಒಬ್ಬರೆ ಬನ್ನಿ ಅಂದೆ” . ಪುಟ್ಟ: “ಆಮೇಲೆ” ಗುಂಡ: “ಒಬ್ಬೊಬ್ರೆ ಬಂದು ಹ...

1...56789...13

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...