ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ?
- ಶೋಕಗೀತೆ - January 7, 2021
- ಲಕ್ಷ್ಮೀಶ ಕವಿ - December 31, 2020
- ಚಂದ್ರೋದಯ - December 24, 2020
ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ? ಸಾಕು, ಸುತ್ತಲು ನೋಡು ಕಣ್ತೆರೆದು ನಿಂದು; ಲೋಕದಲಿ ವಂದೆ ಮಾತರಮೆಂಬುದೊಂದೆ ಮಾ ತೀ ಕಿವಿಯನೊಡೆಯುತಿರೆ ಉಚ್ಛಳಿಸಿ ಬಂದು. ಮತಜಾಲದಲ್ಲಿ ಸಿಲುಕಿ, ಅತಿ ಜಾತಿಯಲ್ಲಿ ಕುಲುಕಿ, ಗತಿಗೆಟ್ಟು ಸರ್‍ವರಲಿ ನೀನಾದೆ ಹಿಂದು; ಪತಿತರಿಗೆ ಕೈಗೊಟ್ಟು ಭಾರತ ಧ್ವಜ ನೆಟ್ಟು ಪಥದೋರಿ ಬಂಗಾಲಿ ಕಾಯುತಿರೆ ಮುಂದು. ನುಗ್ಗು ನುಗ್ಗುತ ಪರರು ನುಗ್ಗುತ್ತೆ ಬರುತಿಹರು; […]