ಮದುವೆಯೇ ಬೇಡವೆನ್ನುತ್ತಿದ್ದ ಕಿಟ್ಟಿಣ್ಣ ಆ ಹಳ್ಳಿಯ ಜಮೀನ್ದಾರರ ಮಗಳನ್ನು ಮದುವೆಯಾಗಲೊಪಿದ್ದೇ ತಡ- ಒಮ್ಮೆ ಕಿಟ್ಟು ಮದುವೆ ಮಾಡಿಕೊಂಡು ಸಂಸಾರ ಹೂಡಿದರೆ ಸಾಕು ಎಂದಿದ್ದ ಅಣ್ಣನೂ ಒಪ್ಪಿದ. ಎಲ್ಲ ಸಿದ್ದತೆಗಳೂ ಭರದಿಂದ ನಡೆದವು. ಹಾಂ, ಹುಂ ಎನ್ನುವ...

ಅರವತ್ತರ ಮುದುಕ ಹತ್ತರ ಹುಡುಗಿ ಇಬ್ಬರೂ ಸೇರಿ ಸವೆಸಿದರು ದಾರಿ ಮುಂದೆ ಮುಂದೆ ಸಾಗಿದ ಮುದುಕ ಹಿಂದೆ ಹಿಂದೆಯೆ ಉಳಿದಳು ಹುಡುಗಿ ಮುದುಕನಿಗದು ನಿತ್ಯದ ದಾರಿ ನೋಡಲೇನಿದೆ? ಹುಡುಗಿಗೆ ಪ್ರತಿಯೊಂದು ಹೊಸದು ಬಿಟ್ಟರೆ ಸಿಗುವದೆ? ಹುಡುಗಿ ಹಳ್ಳದಲಿ ಕಾಲ...

ಪಕ್ಕೆಯಲ್ಲಿ ಚುಚ್ಚಿಕೊಂಡಿದ್ದ ರತ್ನ ಬಾಣವನ್ನು ತೆಗೆಯಲು ಬಾರದೆ ಬಹಳವಾದ ನೋವಿನಿಂದ ಹಾಸುಗೆ ಹತ್ತಿ ಮಲಗಿದ್ದ ಅಗ್ನಿಶಿಖ ರಾಕ್ಷಸೇಂದ್ರನಿಗೆ ಅರಮನೆಯ ವೈದ್ಯನಾದ ಚರಕಾಚಾರ್‍ಯನು ಚಿಕಿತ್ಸೆ ಮಾಡುತ್ತಿದ್ದನು. ಪುತ್ರಿಯಾದ ಚಂದ್ರಲೇಖೆಯು ಯಾವಾಗಲೂ ತ...

ಹಿಂದೊಮ್ಮೆ ಕೂಡಾ ಹೀಗೆ ಆಗಿತ್ತಲ್ಲ. ಗಂಟುಗಂಟಾಗಿ ಸಿಕ್ಕು ಬಿದ್ದು ಅ- ಕ್ಷರದ ತಾರೆಗಳೆಲ್ಲ ನೆಲಕ್ಕೆ ಚೆಲ್ಲಿದಂತೆ ಜ್ಞಾನಪಾತ್ರೆಯ ಎದುರು ಹಸಿದ ಕಂಗಳು ಮೂರ್‍ಚೆಗೊಂಡ ಮನಸ್ಸು ನಗ್ನವಾಗಿ ನಿಂತುಬಿಟ್ಟವು ಕಾಲ ಚಲಿಸಲಿಲ್ಲ. ಆದರೆ ಮಜ್ಜಿಗೆಯೂಡಿದ ಮ...

ಎಲ್ಲವನ್ನೂ ಮರೆತುಬಿಡಬಹುದು ಆದರೆ ಮರೆಯುವುದು ಹೇಗೆ ಖರ್ಬೂಜದ ಹಣ್ಣುಗಳನ್ನು ಹೇರಿಕೊಂಡು ಬೀದಿಯ ತಿರುವಿನಲ್ಲಿ ಮರೆಯಾದ ಎತ್ತಿನ ಗಾಡಿಯನ್ನು? ನಮ್ಮ ಅನೇಕ ನೆನಪುಗಳ ಕನಸುಗಳ ಗಾಡಿ ಜನನಿಬಿಡ ಬೀದಿಯಲ್ಲಿ ನಾವೆಲ್ಲರೂ ನೊಡುತ್ತಿದ್ದಂತೆಯೇ ಕಾಣಿಸದಾಯ...

ರಘುವೀರನು ನನ್ನ ಗೆಳೆಯ, ನಮಗೆ ಪರಿಚಯವಾದುದು ಮೊದಲು ಲೇಖನಿಯಿಂದ, ಅವನು ಸಂಪಾದಕನು. ನಾನು, ‘ಸಂಪಾದಕ’ರೆಂಬವರನ್ನು ಪ್ರೀತಿಯಿಂದ ನೋಡುವವನು. “ಹೃದಯರಂಜನ” ಪತ್ರಿಕೆಯನ್ನು ರಘುವೀರನು ಆರಂಭಿಸಿದ ಮೇಲೆ ನಮ್ಮ ಪರಿಚಯವೂ ಫಕ್ಕನೆ ಉಂಟಾಗ...

ಜೆರುಸಲೆಮ್ಮಿನ ಹೋಟೆಲಿನ ವೆರಾಂಡದಲ್ಲಿ ಕುಳಿತು ಹೀಗೆ ಬರೆಯುವುದೇ ‘ಮರುಭೂಮಿಯಿಂದ ಸಾಗರದತ್ತ ಸುಂದರ ದಿನಗಳು ಸಾಗಿ ಬರುತಿವೆ’? ಅಥವ ಹೀಗೆ ‘ಇಲ್ಲಿ ಈ ಜಾಗದಲ್ಲಿ ಕಾಣುತ್ತಿರುವ ಗುರುತು ನನ್ನ ಕಂಬನಿ ಬಿದ್ದು ಇಂಕು ಕಲಸಿ ಹೋದದ್ದರ ಗುರುತು’? ನೂರು...

ರಾಮ ಸುಂದರ ರಹಿಮ ಬಂಧುರ ತೀರ್ಪು ಸರಿಸಮ ಗಮಗಮ ಅವರು ಬಾಳಲಿ ಇವರು ಉಳಿಯಲಿ ಬೆಳಕು ಬೆಳಕಿಗೆ ಸರಿಗಮ ಭೂಮಿ ಸೀಮಿ ಬಯಲು ಬಾನು ಎಲ್ಲ ದೇವನ ಮಂದಿರ ಹೂವು ಹಸಿರಿಗೆ ಪಕ್ಷಿ ವೃಕ್ಷಕೆ ಬೇಡ ಬೇಡ ಕಂದರ ವಿಶ್ವ ಪ್ರೇಮದ ಗೋಪುರಽಽಽ *****...

123456...9

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...