
ಕಲ್ಪನಾ
Latest posts by ವರದರಾಜ ಹುಯಿಲಗೋಳ (see all)
- ಲೋಕೋಪಕಾರ! - October 25, 2020
- ಕೊಳಲು ಉಳಿದಿದೆ - August 2, 2020
- ಮಿಂಚು - May 3, 2020
ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ ಕಣ್ಣುಗಳಿಂದ ನೋಡುವ ಕಾಲವದು! ಸ್ವರ್ಗಲೋಕದಲ್ಲಿಯ ಸ್ತ್ರೀ ಪುರುಷರೆಂದೇ ಎಲ್ಲರೂ ಅವರನ್ನು ಭಾವಿಸುತ್ತಿದರು! ಒಂದು ದಿನ ಬೆಳಗಿನಲ್ಲಿ ನಮ್ಮ ಓಣಿಯಲ್ಲಿಯ ಆ ದೊಡ್ಡ ಮನೆಯಲ್ಲಿ ಒಮ್ಮೆಲೆ ಜನಜಂಗುಳಿಯು ಕಂಡಿತು. ನಾಲ್ಕೈದು ಮೋಟಾರುಗಳು ನಿಂತಿದ್ದವು. […]