Month: July 2018

#ಕವಿತೆ

ಬೇಕಾಗಿತ್ತೆ ಈ ದೂರದ ಹಾದಿ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಬೆಲ್ಟ್ ಕಟ್ಟಿಕೊಂಡೇ ಗಡದ್ದಾಗಿ ಕುಳಿತದ್ದು ಹೀಗೇ ಮಂಪರಕ್ಕೆ ಸ್ವಲ್ಪ ಒರಗಿರಬೇಕಷ್ಟೆ ಎಲ್ಲೋ ಬುಲ್‌ಡೋಜರ್‌ದ ಸದ್ದು ಜಾಲಾಡಿಸಿದ ಅನುಭವ ಬಿಟ್ಟೂಬಿಡದೆ ಏನೇನೋ ಪೈಲಟ್‌ನ ಮಾತುಗಳು ಗಗನಸಖಿಯ ಒಂದೇ ಸಮನದ ಉಲಿತ “ನಿಮ್ಮ ಖುರ್ಚಿಯ ಪಟ್ಟಿ ಕಟ್ಟಿಕೊಳ್ಳಿ” ಕಣ್ಣು ಬಿಟ್ಟದ್ದಷ್ಟೇ, ಉಸಿರು ನೆತ್ತಿಗೆ ಏರಿ ಸಾವಿನಂಚಿಗೆ ಕರೆಯುವ ಎದೆ ಬಡಿತ ಕಿಡಕಿಯಾಚೆ ಆನೆ ಐರಾವತ ಕರಿಮೋಡಗಳ ಘರ್ಜನೆ ದಟೈಸಿದ […]

#ಕವಿತೆ

ಸ್ವಗತ ಗೀತ

0
ಎನ್ ಎಂ ಗಿರಿಜಾಪತಿಯವರು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ರಾಮಸಾಗರ ಗ್ರಾಮದವರು.ತಂದೆ ದಿ|| ಎನ್ ಎಂ ಸೋಮಶೇಖರಸ್ವಾಮಿ, ತಾಯಿ ಶ್ರೀಮತಿ ಎನ್ ಎಂ ವಿಶಾಲಾಕ್ಷಮ್ಮ,.ಗಿರಿಜಾಪತಿಯವರು ಎಂ. ಎ., ಬಿ. ಇಡಿ., ಪದವಿ ಪೂರೈಸಿದ್ದು, ಪಿ. ಎಚ್‌ಡಿ., ವ್ಯಾಸಂಗ ಮಾಡುತ್ತಿದ್ದಾರೆ.

ಮುಂಬೈನ ಬಿ.ಎ.ಎ.ಆರ್‍.ಸಿ. ಯವರಿಂದ ವಿಜ್ಞಾನ ಪ್ರಬಂಧಕ್ಕೆ ಗೌರವ ಪುರಸ್ಕಾರ. ‘ಮೃತ್ಯು ಸಂಝೀವಿನಿ’ ನಾಟಕ ಹಸ್ತಪ್ರತಿಗೆ ಬೆಂಗಳೂರಿನ ವಿಶ್ವೇಶ್ವರಯ್ಯ ಟೆಕ್ನಿಕಲ್ ಅಂಡ್ ಇಂಡಸ್ಟ್ರಿಯಲ್ ಮ್ಯೂಸಿಯಂನಿಂದ ಗೌರವ ಪುರಸ್ಕಾರ.ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಪುರಸ್ಕಾರ, ಲಲಿತ ಪ್ರಬಂಧಕ್ಕೆ ಸಂಕ್ರಮಣ ಸಾಹಿತ್ಯ ಗೌರವ ದೊರೆತಿವೆ.

ಕೃತಿಗಳ ವಿವರ:

ಕವನ ಸಂಕಲನ:
ತಾಯಿ ಭಾರತಿ ಸುತೆ ಕನ್ನಡತಿ
ಭಾವನದಿಯ ದಂಡೆಯ ಮೇಲೆ...
ಆಮ್ಲ ಮಳೆ

ಕಥಾ ಸಂಕಲನ:
ನಾವು ನಮ್ಮವರು

ಮಕ್ಕಳ ನಾಟಕ:
ಅಪಾಯದ ಗಂಡೆ

ಸದ್ಭೋದಾಮೃತ ಶತಕ
ಕನ್ನಡ ವ್ಯಾಕರಣ ಮತ್ತು ಭಾಷಾ ರಚನೆ
ವಚನ ರತ್ನತ್ರಯರು
ಕಾವ್ಯ ಪರಿಕರಗಳು
ವಚನ ಚಿಂತಾಮಣಿ
ಕನ್ನಡ ಛಂದಸ್ಸಂಪದ
ಕನ್ನಡ ಛಂದೋದರ್ಪಣ
ಕನ್ನಡ ಭಾಷಾಲೋಕ
ಅಮೃತ ತರಂಗಿಣಿ
ಬೆಳಕಿನ ಹೆಜ್ಜೆಗಳು
ಪ್ರಾಚೀನ ಭಾರತೀಯ ಕಥಾ ಸಾಹಿತ್ಯ
ನಮ್ಮೂರ ಹೋಳಿ ಹಾಡು
*****
ಗಿರಿಜಾಪತಿ ಎಂ ಎನ್
Latest posts by ಗಿರಿಜಾಪತಿ ಎಂ ಎನ್ (see all)

ನಾನು ಗೀತೆಯ ಬರೆದು ಹಾಡಿದೆ ಭಾವ ಭಾರದೆದೆಯ ತಣಿಸಲು ಎಲ್ಲ ಮರೆತೊಮ್ಮನದಿ ನಲಿದು ನಿಮ್ಮ ಪ್ರೀತಿಗೆ ನಮಿಸಲು | ಸೋಲು-ಗೆಲುವೋ, ಗೆಲುವೊ ಸೋಲೋ ಉಯ್ಯಾಲೆಯಲ್ಲಿ ಝೀಕುತ, ಕವಿದಮಾವಾಸ್ಯಯ ಇರುಳಿನಲೆಯಲೂ ಪೂರ್ಣ ಚಂದ್ರಮನೆಡೆಗೆ ನೋಡುತ ಬದುಕೆ ಯಕ್ಷ ಪ್ರಶ್ನೆಯಾದರೂ ರಕ್ಷೆಗಾಣಲು ಬಯಸುತ | ಯಾವ ಸಂಚಿತ ಸಂಚಿನ ಕಾಲ್ಗಳು ದೀಕ್ಷೆ ತೊಟ್ಟು ತುಳಿ ತುಳಿದರೂ ಆತ್ಮ ಬಲದತಿಬಲದ […]

#ಕವಿತೆ

ವಿಪರ್ಯಾಸ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಮುಗ್ಧತೆಯಲ್ಲಿ ಕೆಲ ಎಚ್ಚರಿಕೆಗಳ ಇಟ್ಟುಕೊಳ್ಳಬೇಕಾಗುತ್ತದೆ ಇಲ್ಲದಿದ್ದರೆ ಅದು ಬೂದಿ ಮುಚ್ಚಿದ ಕೆಂಡ ಎದೆ ಸುಡುತ್ತದೆ. ಆತ್ಮೀಯತೆಯಲಿ ಕೆಲ ದೂರ ಹೊಂದಬೇಕು ಇಲ್ಲದಿದ್ದರೆ ಅದು ಅಸ್ಥಿತ್ವವನ್ನು ಮಂಜಿನಂತೆ ಕರಗಿ ನೀರಾಗಿ ಹರಿಸುವುದು. ಗೇಟಿನಾಚೆಯ ಗೆಳೆಯ ಕೂಡಾ ಒಮ್ಮೊಮ್ಮೆ ಈಷ್ಯೆಯಲಿ ಕುದಿದು ಬಿಸಿ ಎಣ್ಣೆಯ ಶಾಖ ತಗುಲಿಸಿ ಮನೆಯ ಬಾಗಿಲ ಬೀಗ ಮುರಿಯುವುದು. ಕೋಪದಲಿ ಅಂದ ಮಾತುಗಳು ಲೆಕ್ಕವಿಟ್ಟವರು […]

#ಕವಿತೆ

ಕನಸಿನ ಮೋಡಿ

0

ಆ ನೋಟ! ಮೃದುಮಧುರ ನೋಟವೆಲ್ಲಿಹುದು? ಅಂದೊಮ್ಮೆ ಮಿಂಚಿದುದು ಅಲ್ಲೆ ಅಳಿದಿಹುದು ಹುಚ್ಚು ಕನಸಿನಲಾದರು ಮತ್ತೆ ಹೃದಯವ ಸೇರದು! ಮತ್ತೊಮ್ಮೆ ಪಡೆಯುವೆನೆ? – ಮತ್ತೆ ಬಾರದದು ಮೇಲ್ವಾಯ್ದ ಜ್ವಾಲೆಯೊಲು ಸಾಗಿ ಹೋಗಿಹುದು ! ಕಾಲನದಿ ಸಾಗುತಿರೆ ದಡದಲ್ಲಿ ಕೂತು ಛಾಯೆಯಂದದಿ ಕನಸು ಮೌನದಲಿ ಹೂತು ಕಳೆದ ದಿನಗಳ ನನಸಲಿ ಕೊರಗೆ ತುಂಬಿದೆ ಕಂಬನಿ ! ಮೇಲೆ ಅರಚಣಕಾಗಿ […]

#ಸಣ್ಣ ಕಥೆ

ಶಾಕಿಂಗ್ ಪ್ರೇಮ ಪ್ರಕರಣ

0

ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ. ಹುಡುಗಿ ಕಂದುಬಣ್ಣದ ವರಾದರೂ ಲಕ್ಷಣವಾಗಿದ್ದಳು. ಅವಳ ಮೈ ಮಾಟ, ಹದಿನೇಳರ ವಯಸ್ಸು ಅವಳಿಗೊಂದು ವಿಶಿಷ್ಟ ಸೌಂದರ್ಯ ಕೊಟ್ಟಿದ್ದವು. ಅವಳ ನೀಳ ಕೇಶರಾಶಿ, ಎತ್ತರದ ನಿಲುವು, ಅವಳ ಆಧುನಿಕ […]

#ಕವಿತೆ

ದೇಶದ ಕೃಷಿಕನೇ

0
ಬೀದರ ಜಿಲ್ಲೆಯವರಾದ ಇವರು, ಹೈದರಾಬಾದಿನಲ್ಲಿ ನೆಲೆಸಿ ತೆಲುಗುನಾಡಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ.‘ಹೈದರಾಬಾದ-ಕರ್ನಾಟಕ ಆಧುನಿಕ ನಾಟಕಗಳ ಸಾಹಿತ್ಯ ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ.
ಧರ್ಮೇಂದ್ರ ಪೂಜಾರಿ ಬಗ್ದೂರಿ
Latest posts by ಧರ್ಮೇಂದ್ರ ಪೂಜಾರಿ ಬಗ್ದೂರಿ (see all)

ಕೃಷಿ ಮಾಡುವ ರೈತನೆ ನೀನು ರಾಷ್ಟ್ರದ ಶ್ರೇಷ್ಠ ವ್ಯಕ್ತಿತ್ವ ನಿನ್ನದು ದೇಶದ ಸಹಸ್ರಾರು ಜನತೆಗೆ ಬದುಕುಳಿಯಲು ಆಹಾರ ಧಾನ್ಯವು ಪೂರೈಸುವ ದೇಶದ ರೈತ ನೀನು ಹಗಲಿರುಳು ಎನ್ನದೇ ಹೊಲದಲ್ಲಿ ದುಡಿದು ಆಹಾರ ಧಾನ್ಯ ಬೆಳೆ ಬೆಳೆಸುವನು ನೀನು ತನ್ನ ಸಹಾಯಕ್ಕಾಗಿ ಎರಡೆತ್ತು ತೆಗೆದು ಹೊಲವನ್ನು ಚನ್ನಾಗಿ ಉಳುಮೆ ಮಾಡುವನು ನೀನು. ಹೊಲವನ್ನು ಚನ್ನಾಗಿ ಉಳುಮೆ ಮಾಡಿ […]

#ಕವಿತೆ

ನಾನು

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ನಾ ನಾನು ಈ ಕಣ್ಣುಗಳ ಕತ್ತಲೆ ಬೆಳಕು ನೆಳಲಾಟದಲ್ಲಿ ಈ ಎದೆಯ ಮತ್ತು ಈ ಲಂಗದ ಸುತ್ತು ಏರಿಳಿತದಲ್ಲಿ ಸೆಳೆತದಲ್ಲಿ ನೃತ್ತದ ವೃತ್ತದ ಆವರ್ತದಲ್ಲಿ ಧ್ವನಿಯ ಮೌನದ ವಿಸ್ಮೃತಿಯ ಶೂನ್ಯದಲ್ಲಿ ಲಯ. *****

#ಕವಿತೆ

ಪೆಟ್ಟಿಗೆ

0

ಅವಳದೇ ಆದ ಆ ಹಳೆಯ ಪೆಟ್ಟಿಗೆ ಈಗಲೂ ಇದೆ ಅವಳೊಟ್ಟಿಗೆ ಪಡಿಯಕ್ಕಿ ಕೆಡವಿ ಹೊಸಿಲು ತುಳಿದು ನವಬದುಕಿನೊಳಗೆ ಅಡಿಯಿರಿಸಿದಾಗಲೇ ಜೊತೆಯಾಗಿ ಸಖಿಯಾಗಿ ಬಂಧನವ ಬೆಳೆಸಿತ್ತು ನವ ವಧುವಿನ ನವಿರು ಭಾವನೆಗಳ ಗೊಂಚಲಿಗೆ ಹಸಿಹಸಿ ಕನಸುಗಳ ಭ್ರಾಮಕ ಜಗತ್ತಿನ ಬಯಕೆಗಳಿಗೆ ಸ್ಪಂದನ ಋತುಗಳು ಬದಲಾದಂತೆ ಮನಗಳೂ ಬದಲಾಗಿ ಕನಸುಗಳೆಲ್ಲಾ ಒಡೆದು ನಿರ್ಭಾವ ಜಗತ್ತಿನ ಕಟು ಸತ್ಯದ ನೋವಿನ […]

#ಕವಿತೆ

ಅವಶೇಷ

0

ಹುಡುಕುತ್ತಿದ್ದೇನೆ ನಾನಿನ್ನೂ ಹುಡುಕುತ್ತಿದ್ದೇನೆ! ಅಂದೆಂದೋ ಹೊಸಹಾದಿ ಸಿಕ್ಕ ಸಂಭ್ರಮದಲಿ ನಾ ಧಡಕ್ಕನೆ ಕಿತ್ತು ಹೊತ್ತು ತಂದ ತಾಯಿಬೇರಿನ ಶೇಷ ಭೂಮಿಯಾಳದಲ್ಲೇ ಉಳಿದು ಹೋದ ನಿಶ್ಯೇಷವಲ್ಲದ ಅವಶೇಷ! ನನ್ನ ಸಶೇಷ ಕನಸುಗಳು ವಿಶೇಷ ಕಲ್ಪನೆಗಳು ಶೇಷವಾಗಿಯೇ ಉಳಿದ ಆಸೆಗಳನೊಳಗೊಂಡ ಮಣ್ಣಿನಾಳದಲ್ಲೇ ಊರಿಕೊಂಡ ನಾ ಧಿಮಾಕಿನಿಂದ ಬಿಟ್ಟುಬಂದ ತಾಯಿಬೇರಿನ ಅವಶೇಷದ ಆ ಮಿಕ್ಕ ಭಾಗ ನಾನಿನ್ನೂ ಹುಡುಕುತ್ತಿದ್ದೇನೆ! ಈಗುಳಿದ […]

#ಕವಿತೆ

ಸಿಸೇರಿಯನ್

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ನಾರ್ಮಲ್ ಡೆಲಿವರಿಗಳು ಈಗ ಔಟ್ ಆಫ್ ಡೇಟ್ ಆಗಿರುವುದರಿಂದ ಹೆರಿಗೆ ಆಸ್ಪತ್ರೆಗಳನ್ನು ಸೆಂಟರ್ಸ್ ಫಾರ್ ಸಿಸೇರಿಯನ್ ಎಂದು ಮರುನಾಮಕರಣ ಮಾಡಲು ರೆಸಲೂಶನ್ ಮಾಡಿದೆಯಂತೆ ಮೆಡಿಕಲ್ ಅಸೋಷಿಯೇಷನ್. *****