ಬೇಕಾಗಿತ್ತೆ ಈ ದೂರದ ಹಾದಿ

ಬೆಲ್ಟ್ ಕಟ್ಟಿಕೊಂಡೇ ಗಡದ್ದಾಗಿ ಕುಳಿತದ್ದು ಹೀಗೇ ಮಂಪರಕ್ಕೆ ಸ್ವಲ್ಪ ಒರಗಿರಬೇಕಷ್ಟೆ ಎಲ್ಲೋ ಬುಲ್‌ಡೋಜರ್‌ದ ಸದ್ದು ಜಾಲಾಡಿಸಿದ ಅನುಭವ ಬಿಟ್ಟೂಬಿಡದೆ ಏನೇನೋ ಪೈಲಟ್‌ನ ಮಾತುಗಳು ಗಗನಸಖಿಯ ಒಂದೇ ಸಮನದ ಉಲಿತ "ನಿಮ್ಮ ಖುರ್ಚಿಯ ಪಟ್ಟಿ ಕಟ್ಟಿಕೊಳ್ಳಿ"...

ಸ್ವಗತ ಗೀತ

ನಾನು ಗೀತೆಯ ಬರೆದು ಹಾಡಿದೆ ಭಾವ ಭಾರದೆದೆಯ ತಣಿಸಲು ಎಲ್ಲ ಮರೆತೊಮ್ಮನದಿ ನಲಿದು ನಿಮ್ಮ ಪ್ರೀತಿಗೆ ನಮಿಸಲು | ಸೋಲು-ಗೆಲುವೋ, ಗೆಲುವೊ ಸೋಲೋ ಉಯ್ಯಾಲೆಯಲ್ಲಿ ಝೀಕುತ, ಕವಿದಮಾವಾಸ್ಯಯ ಇರುಳಿನಲೆಯಲೂ ಪೂರ್ಣ ಚಂದ್ರಮನೆಡೆಗೆ ನೋಡುತ ಬದುಕೆ...