ಕೃಷಿ ಮಾಡುವ ರೈತನೆ ನೀನು
ರಾಷ್ಟ್ರದ ಶ್ರೇಷ್ಠ ವ್ಯಕ್ತಿತ್ವ ನಿನ್ನದು
ದೇಶದ ಸಹಸ್ರಾರು ಜನತೆಗೆ ಬದುಕುಳಿಯಲು
ಆಹಾರ ಧಾನ್ಯವು ಪೂರೈಸುವ ದೇಶದ ರೈತ ನೀನು

ಹಗಲಿರುಳು ಎನ್ನದೇ ಹೊಲದಲ್ಲಿ ದುಡಿದು
ಆಹಾರ ಧಾನ್ಯ ಬೆಳೆ ಬೆಳೆಸುವನು ನೀನು
ತನ್ನ ಸಹಾಯಕ್ಕಾಗಿ ಎರಡೆತ್ತು ತೆಗೆದು
ಹೊಲವನ್ನು ಚನ್ನಾಗಿ ಉಳುಮೆ ಮಾಡುವನು ನೀನು.

ಹೊಲವನ್ನು ಚನ್ನಾಗಿ ಉಳುಮೆ ಮಾಡಿ
ಬೀಜ ಉತ್ತಿಬಿತ್ತಿ ಮಳೆಯರಾಯನಿಗಾಗಿ ಕಾಯುವನು ನೀನು
ಮಳೆರಾಯ ಸರಿಯಾಗಿ ಸಮಯಕ್ಕೆ ಬಂದರೆ
ಭೂತಾಯಿ ಬೆಳೆದು ಹೊತ್ತುಕೊಂಡು ನಿಲುವಳು.

ರಿಕ್ತತೆಯ ಬಡತನದಿ ಬಳಲುತ
ಸುಖಮಯ ಜೀವನ ಸಾಗಿಸುವನು ನೀನು
ಭೂಮಿತಾಯಿ ಹೊತ್ತುಕೊಂಡು ನಿಂತ ಬೆಳೆ
ಕಂಡು ಹೃದಯದಿ ಸಂತಸ ಪಡುವನು ನೀನು.

ಬಡಜನರಿಂದ ಕೂಡಿದ ಶ್ರೀಮಂತ ರಾಷ್ಟ್ರವೆಂದು
ಅರಿತು ಆರ್ಥಿಕ ಪ್ರಗತಿ ಸಾಧಿಸುವನು ನೀನು
ಹಬ್ಬ ಹರಿದಿನಗಳಲ್ಲಿ ಭೂತಾಯಿಗೆ ಗೌರವದಿ
ಪೂಜ್ಯನೆ ಭಾವದಿ ಆರಾಧಿಸುವನು ನೀನು.

ಯಾರ ಜೀವನದ ಬಗ್ಗೆ ಅವಹೇಳನ ಬಯಸದೇ
ತನ್ನ ಜೀವನದಿ ತಾ ಒಳಿತನು ಬಯಸುವನು
ಯಾರ ವಿಮರ್ಶೆಗೆ ಬಲಿಯಾಗದೇ ತಾ
ಸರೋವರದಂತೆ ಜೀವನ ಸಾಗಿಸುವನು ನೀನು.

ಗುರಿ ಮುಟ್ಟುವದಕ್ಕೆ ಸತತ ಸಾಧನೆ ಗೈದಿ
ಧಾನ್ಯ ಬೆಳೆಸುವಲ್ಲಿ ನೀ ಸಫಲನಾದಿ
ಬ್ರಹ್ಮ, ವಿಷ್ಣು, ಮಹೇಶ್ವರರ ಸ್ವರೂಪನಾದಿ
ಜಗವಿರುವವರೆಗೆ ಜಗಭರಿತ ರೈತ ನೀ ನಾದಿ.
*****

ಧರ್ಮೇಂದ್ರ ಪೂಜಾರಿ ಬಗ್ದೂರಿ
Latest posts by ಧರ್ಮೇಂದ್ರ ಪೂಜಾರಿ ಬಗ್ದೂರಿ (see all)