ಆ ನೋಟ! ಮೃದುಮಧುರ ನೋಟವೆಲ್ಲಿಹುದು?
ಅಂದೊಮ್ಮೆ ಮಿಂಚಿದುದು ಅಲ್ಲೆ ಅಳಿದಿಹುದು
ಹುಚ್ಚು ಕನಸಿನಲಾದರು
ಮತ್ತೆ ಹೃದಯವ ಸೇರದು!
ಮತ್ತೊಮ್ಮೆ ಪಡೆಯುವೆನೆ? – ಮತ್ತೆ ಬಾರದದು
ಮೇಲ್ವಾಯ್ದ ಜ್ವಾಲೆಯೊಲು ಸಾಗಿ ಹೋಗಿಹುದು !

ಕಾಲನದಿ ಸಾಗುತಿರೆ ದಡದಲ್ಲಿ ಕೂತು
ಛಾಯೆಯಂದದಿ ಕನಸು ಮೌನದಲಿ ಹೂತು
ಕಳೆದ ದಿನಗಳ ನನಸಲಿ
ಕೊರಗೆ ತುಂಬಿದೆ ಕಂಬನಿ !
ಮೇಲೆ ಅರಚಣಕಾಗಿ ಕಾಮಧನು ಮೂಡಿ
ಮಾಯವಾದಂತೆ, ಉಷೆ, ಕನಸ ಮೋಡಿ !
*****