ಹುಲು ಮನುಜನೆನ್ನ ಮಾತೇನು?

ಬೆಳಕೀವ, ಬದುಕೀವ, ಎಲ್ಲ ಜೀವ ದೊಳಗಣ ಜೀವ, ಸೂರ್‍ಯ ದೇವನೆ ತಾ ಬಿಸಿಯಾಗಿ ಬಲು ಬತ್ತಿಸುವ ನೀರ ಹೊತ್ತಿಸುವ ಹಸುರ ಬಾಳಿನೊಳು ನೋವಿರದ ನಲಿವು ಕೊಡುವೊಡೆ ಸೋಲುತಿಹ ದೇವನೊಲವಿನೊಳಿಪ್ಪೆನ್ನ ಮಾತೇನು ? - ವಿಜ್ಞಾನೇಶ್ವರಾ...

ಅವರಿವರ ತೆಗಳದೇ ಬರೆಯಲಾಗದೇ ?

ಅವರಿವರ ವಿಕೃತಿಯನುಸುರದೆಲೆ ಪೊರೆವೆಮ್ಮ ಪ್ರಕೃತಿ ಗುಣವನಷ್ಟೇ ತೆರೆದು ಪೇಳಲೆಷ್ಟೊಂದು ಶ್ರಮಿಸಿದರು ಖರೆ ಸೋತೆನಾ ದೀಪದಂತೆ ಬೆಳಕೀವ ವರದೀಪ ಬೇಡದಿಹ ಬಿಸಿಯ ಕೊಡುವಂತೆ - ವಿಜ್ಞಾನೇಶ್ವರಾ *****

ಮೌನದೊಳು ಬೆಳೆವ ಸಸ್ಯಕ್ಕೆ ಮಿತಿಯುಂಟೇ?

ನಾನಂದು ಕೃಷಿಯೆಂದು ನೆಡಲಾ ತೆಂಗನೊಂ ದನದು ತಪ್ಪೆಂದು ಕೂಡಿದ್ದೆ ಸಸ್ಯಗಳ ವನದಂತೆ ಸಾವಿರಕು ಮಿಕ್ಕಿ ಜಾತಿಗಳದುವೆ ಸಾನುರಾಗದಿ ಸಾವಯವವೆನಿಸಿತ್ತಂತೆನ್ನ ಕೃಷಿಕ ವನ ಬರಬರುತೆ ವ್ಯಾಪಿಸಿತೆನ್ನ ಬದುಕನ್ನೆ - ವಿಜ್ಞಾನೇಶ್ವರಾ *****

ಪ್ರಕೃತಿ ಎನ್ನನ್ಯಾಕೆ ಬರೆಸಿಹುದು ?

ಪ್ರಕೃತಿ ಎನ್ನನ್ಯಾಕೆ ಬರೆಸಿಹುದು ? ಯಾಕಾನು ಬರೆಯುವೆನೆಂದು ಕೇಳಿದೊಡೆ ಆಕಾನು ಯಾಕಷ್ಟು ತರುಲತೆಯ ಬೆಳೆಸಿಹುದೆಂ ದುಕೇಳಲು ಬೇಕು. ತರತರದ ಜೀ ವಕಾಮಕಪ್ಪಂತೇನೆಲ್ಲವನು ಬೆಳೆಸಿರ್ಪ ಪ್ರಕೃತಿಯೆ ಮತಿಯಾಗಿ ಬರೆಸಿಹುದೆನ್ನ - ವಿಜ್ಞಾನೇಶ್ವರ *****

ಆನು ಪೇಳಿದೆಲ್ಲವನು ಮಾಡದೊಡೇನಂತೆ ?

ಆನು ಪೇಳಿದೆಲ್ಲವನು ಮಾಡದೊಡೇನಂತೆ ? ಆನಿಲ್ಲ ಪೇಳಿದೆಲ್ಲವನು ಆನು ಮಾಡಿ ದೆನೆಂದಿಲ್ಲ ಆನೆಷ್ಟು ಮಾಡಿಹನೆಂದು ಆನು ಪೇಳುವುದಲ್ಲ, ಬುದ್ಧಿಮಾತನು ಎನಗಾನೇ ಪೇಳಿ ಆದನಾನೇ ಕೇಳಿ ಆನೆಷ್ಟು ಮಾಡಿದರಷ್ಟು ಲಾಭವೆನಗೆ - ವಿಜ್ಞಾನೇಶ್ವರಾ *****

ಪರಿಪರಿ ನೆನೆದೊಡಾ ಐದೆನ್ನ ಕಾಯದೇ ?

ಪರಿಪರಿ ನೆನೆದೊಡಾ ಐದೆನ್ನ ಕಾಯದೇ ? ಪ್ರಕೃತಿಯೊಳೈದಕ್ಕೆ ಉನ್ನತದ ಬೆಲೆಯುಂಟು ಪಂಚಭೂತಂಗಳೆಲ್ಲ ಜೀವದೊಳುಂಟು ಪ್ರಾಣಂಗಳೆಮ್ಮೊಳೈದು ಇಂದ್ರಿಯಂಗಳೈದು ಪಿಡಿವ ನಡೆದ ಬೆರಳೈದು ಅಂತೆನ್ನ ಕವನಕು ಪಂಕ್ತಿಗಳೈದು - ಅದುವೆ ಕಾಯಲಿ ಎಂದೆನುತ - ವಿಜ್ಞಾನೇಶ್ವರಾ *****

ಪೇಳಲಾಪರಿ ಕಿರಿದಾಗಿ, ಬೇಕಲ್ಲಾ ಹಿರಿ ಪ್ರತಿಭೆ?

ಪೇಳಲಾಪರಿ ಕಿರಿದಾಗಿ, ಬೇಕಲ್ಲಾ ಹಿರಿ ಪ್ರತಿಭೆ? ಪೇಳಿಹರೆಮ್ಮ ಹಿರಿಯರವರ ಜೀವನ ದೊಳುಂಡನುಭವವ ಮೂರ್‌ನಾಕು ಸಾಲಿ ನೊಳು, ಮಂತ್ರದೊಳು, ಗಣಿತದೊಳು ಕೇಳಿದೆನಗಂತೆ ಕವನದ ಕಂತೆಯೊಳಿಡಲು ಬಾಳಿನನುಭವ ಸಾಲದೆನ್ನ ಸಾಲುಗಳೈದಾಗಿಹವು -ವಿಜ್ಞಾನೇಶ್ವರಾ *****

ಕವನವೆನ್ನದಿದ್ಯಾಕೆ ಪ್ರಶ್ನೋತ್ತರದಂತಿಹುದು?

ಕವನವೆನ್ನದಿದ್ಯಾಕೆ ಪ್ರಶ್ನೋತ್ತರದಂತಿಹುದು? ಜೀವನವೆಂದೊಡೇನದರ ಅಂದಾನಂದವದೇನು? ನಾವೇನು ಮಾಡಿದೊಡೇನು? ಮಾಡದೊಡೇನು? ತವಕದೊಳೇಳ್ವ ಪ್ರಶ್ನಾವಲಿಯ ಮೇಲೆಮ್ಮ ಜೀವನವೆ ನಿಂದಿಹುದದರಿಂದ ನಿಲಿಸಿಹೆನೆನ್ನ ಕವನಗಳ ಪರಿಪರಿಯ ಪ್ರಶ್ನೆಗಳ ಮೇಲೆ - ವಿಜ್ಞಾನೇಶ್ವರಾ *****

ಲಿಂಗಮ್ಮನ ವಚನಗಳು – ೧೦೧

ತನು ಕರಗಿತ್ತು. ಮನ ನಿಂದಿತ್ತು. ಉಲುಹು ಅಡಗಿತ್ತು. ನೆಲೆಗೆ ನಿಂದಿತ್ತು. ಮನ ಪವನ ಬಿಂದು ಒಡಗೂಡಿತ್ತು. ಉರಿ ಎದ್ದಿತ್ತು. ಊರ್ಧ್ವ ಕ್ಕೋಡಿತ್ತು. ಶರಧಿ ಬತ್ತಿತ್ತು. ನೊರೆ ತೆರೆ ಅಡಗಿತ್ತು. ಅಷ್ಟ ಮದವೆಲ್ಲ ಹಿಟ್ಟುಗುಟ್ಟಿತ್ತು. ಕರಣಂಗಳೆಲ್ಲ...

ಲಿಂಗಮ್ಮನ ವಚನಗಳು – ೧೦೦

ಬೆಟ್ಟ ಬೆಂದಿತ್ತು. ಬಿದಿರುಗಣ್ಣು ಒಡೆದಿತ್ತು. ಸುತ್ತನೋಡಿದರೆ ನಿರಾಳವಾಯಿತ್ತು. ಕತ್ತಲೆ ಹರಿಯಿತ್ತು. ಮನ ಬತ್ತಲೆಯಾಯಿತ್ತು. ಚಿತ್ತ ಮನ ಬುದ್ಧಿ ಏಕವಾದವು. ಎಚ್ಚತ್ತು ನೋಡಿದರೆ, ಬಚ್ಚಬರಿಯ ಬೆಳಗಲ್ಲದೆ, ಕತ್ತಲೆಯ ಕಾಣಬಾರದು ಕಾಣಾ ಅಪ್ಪಣಪ್ರಿಯ ಚನ್ನಬಸವಣ್ಣಾ. *****